People are being deceived by Kai leaders.
ಬಾಗೇಪಲ್ಲಿ: ಸುಬ್ಬಾರೆಡ್ಡಿಗೆ ಆಡಳಿತ ನಡೆಸಲು ಅರ್ಹತೆ ಇಲ್ಲವೆಂದು ಹೈಕೋರ್ಟ್ ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದರೂ ನಮ್ಮ ನಾಯಕ ಸತ್ಯವಂತ ಎಂದು ಹೇಳಿಕೊಂಡು ೇತ್ರದ ಜನರನ್ನು ಕಾಂಗ್ರೆಸ್ ನಾಯಕರು ಮತ್ತೆ ಮೋಸ ಮಾಡಲು ಹೊರಟಿದ್ದಾರೆಂದು ಸಿಪಿಐ(ಎಂ) ಮುಖಂಡ ಡಾ.ಅನಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗೂಳೂರು ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂದಿಂದ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ 19ನೇ ರೈತ ಸಮ್ಮೇಳನವನ್ನು ಕ್ರಾಂತಿ ಗೀತೆ ಹಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಾರಾಯಿ ಮಾರಾಟ, ರೈತರ ಜಮೀನುಗಳನ್ನು ಖರೀದಿಸಿ ರಿಯಲ್ ಎಸ್ಟೇಟ್ ನಡೆಸುವ ಮೂಲಕ ಸಂಪಾದಿಸಿದ ಹಣ ಹಂಚಿ ಶಾಸಕರಾಗಿ ಆಯ್ಕೆಗೊಂಡವರು ಎಂದಿಗೂ ಬಡವರಿಗೆ, ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ, ಚುನಾವಣೆ ಸಮಯದಲ್ಲಿ ಹಾಕಿರುವ ಬಂಡವಾಳವನ್ನು ವಾಪಸ್ ಪಡೆಯಲು ಭ್ರಷ್ಟಾಚಾರದ ಆಡಳಿತ ನಡೆಸಿರುವುದು ಹೈ ಕೋರ್ಟ್ನಲ್ಲಿ ಸಾಬೀತಾಗಿದೆ ಎಂದರು.
ೇತ್ರದ ಮತದಾರರಿಗೆ ಹಣ, ಆಮಿಷವೊಡ್ಡಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರಲು ಮುಂದಾಗುತ್ತಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಜನಪರ ಆಡಳಿತ ನಡೆಸುವ ಆರ್ಹತೆ ಇಲ್ಲ ಎಂಬುದನ್ನು ಬಾಗೇಪಲ್ಲಿ ೇತ್ರದ ಜನ ಈಗಲಾದರೂ ತಿಳಿದುಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಈ ೇತ್ರಕ್ಕೆ ಉಳಿಗಾಲವಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿ, ಮುಖಂಡರು ಕಾಂಗ್ರೆಸ್ ಪಕ್ಷದವರಿಗೆ ಮಾರಾಟ ಆಗಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿರುವ ವಲಸೆ ಕಾಂಗ್ರೆಸ್ ಮುಖಂಡರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಬಡವರ, ಶೋಷಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಕೆಂಬಾವುಟವನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ ಎಂದರು.
ಕೆಪಿಆರ್ಎಸ್ ತಾಲೂಕು ಅಧ್ಯಕ್ಷ ಡಿ.ಸಿ.ಶ್ರೀನಿವಾಸ್ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಕುಡಿಯಲು ಶುದ್ಧ ನೀರು ಕೊಡಿ ಎಂದು ಬಯಲುಸೀಮೆ ಜಿಲ್ಲೆಯ ಜನತೆ ಸರ್ಕಾರಕ್ಕೆ ಮನವಿ ಮಾಡಿದರೆ ೇತ್ರದ ಶಾಸಕರು, ಜಿಲ್ಲೆಯ ಸಚಿವರು ಬೆಂಗಳೂರಿನ ಚರಂಡಿಗಳಲ್ಲಿ ಹರಿಯುವ ಕಲುಷಿತ ನೀರನ್ನು ಈ ಭಾಗದ ಕೆರೆಗಳಿಗೆ ಹರಿಸಿ ಜನರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಾರೆ, ಕೆರೆಗಳಿಗೆ ಹರಿಸಿರುವ ಕೊಚ್ಚೆ ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದರೂ ನಾಯಕರಿಗೆ ಸಮಸ್ಯೆ ಅರ್ಥ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಹಕ್ಕು ಪತ್ರದಂತೆ, ಸಾಗುವಳಿ ಚೀಟಿಯಂತೆ ಭೂಮಿ ವರ್ಗಾವಣೆ ಮಾಡಲು ಕಂದಾಯ ಇಲಾಖೆಯಲ್ಲಿ ಲಂಚ ಫಿಕ್ಸ್ ಮಾಡಿ ವ್ಯಾಪಕ ಭ್ರಷ್ಟಾಚಾರ ನಡೆಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ, ರಸ್ತೆ, ಚರಂಡಿ, ವಿದ್ಯುತ್ ಇಲ್ಲದ ಕಲ್ಲುಬಂಡೆಗಳ ಗುಡ್ಡಗಾಡು ಜಮೀನಿಗೆ ಹಕ್ಕುಪತ್ರ ಕೊಟ್ಟು ಜನರಿಗೆ ಉಚಿತ ನಿವೇಶನ ನೀಡಿದ್ದೇವೆಂದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ, ಜನರಿಗೆ ಸುಳ್ಳು ಭರವಸೆ ನೀಡಿ ಭ್ರಷ್ಟ ಆಡಳಿತ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪದಿಂದ ಮೆರೆಯುತ್ತಿದೆ ಎಂದರು.
ಮುಖಂಡರಾದ ಯು.ಬಸವರಾಜು, ಚನ್ನರಾಯಪ್ಪ, ಸೂರ್ಯನಾರಾಯಣ, ಎಂ.ಪಿ.ಮುನಿವೆಂಕಟಪ್ಪ, ರುರಾಮರಾರೆಡ್ಡಿ, ಬೈರಾರೆಡ್ಡಿ, ವೆಂಕಟರಾಜು, ಆದಿನಾರಾಯಣ, ನಾರಾಯಣಸ್ವಾಮಿ, ಮುನಿಕೃಷ್ಣ, ಲ್ಮನಾರಾಯಣರೆಡ್ಡಿ, ಉತ್ತನ್ನ, ಕೆ.ನಾಗರಾಜು, ವಾಲ್ಮೀಕಿ ಅಶ್ವತ್ಥಪ್ಪ, ಮುಸ್ತಫಾ, ಜಿ.ಕೃಷ್ಣಪ್ಪ, ಕೆ.ಮುನಿಯಪ್ಪ, ಮಂಜುನಾಥ, ಓಬಳರಾಜು ಇದ್ದರು.