ಪ್ರಮುಖ ಮುಖ್ಯಾಂಶಗಳು
ಪ್ರಶಾಂತರಿಪ್ಪನ್ಪೇಟೆ ಬೆಂಗಳೂರು :ರಾಜಧಾನಿ ಬೆಂಗಳೂರಿನಅತ್ಯಂತ ಸಂಚಾರ ದಟ್ಟಣೆಯ ಮಾರ್ಗಗಳಲ್ಲಿಒಂದಾದ ರಾಷ್ಟ್ರೀಯ ಹೆದ್ದಾರಿ4ರಪೀಣ್ಯ ಫ್ಲೈಓವರ್ (ಡಾ.ಶ್ರೀ ಶಿವಕುಮಾರಸ್ವಾಮೀಜಿ ಮೇಲ್ಸೇತುವೆ)ಸುರಕ್ಷಿತವಾಗಿದೆಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರ (ಎನ್‌ಎಚ್‌ಎಐ)ಘೋಷಿಸಿದೆ.ಇತ್ತೀಚೆಗೆಕೈಗೊಂಡಿದ್ದ ಕೇಬಲ್ ದುರಸ್ತಿಹಾಗೂ ಬಲವರ್ಧನೆ ಕಾಮಗಾರಿಗಳಬಳಿಕ ನಡೆಸಿದ ಸಮಗ್ರ ಭಾರ ಪರೀಕ್ಷೆ(ಲೋಡ್ಟೆಸ್ಟ್) ಯಶಸ್ವಿಯಾಗಿಪೂರ್ಣಗೊಂಡಿದ್ದು,ಸೇತುವೆಯು ವಾಹನಸಂಚಾರಕ್ಕೆ ಯೋಗ್ಯವಾಗಿದೆ ಎಂದುಅಧಿಕಾರಿಗಳು ತಿಳಿಸಿದ್ದಾರೆ.
2021ರಿಂದಪೀಣ್ಯ ಮೇಲ್ಸೇತುವೆಯಲ್ಲಿ ಹಲವುಹಂತಗಳಲ್ಲಿ ದುರಸ್ತಿ ಮತ್ತುನಿರ್ವಹಣಾ ಕಾಮಗಾರಿಗಳುನಡೆಯುತ್ತಿದ್ದವು.ವಿಶೇಷವಾಗಿಸೇತುವೆಯ ಕೇಬಲ್‌ಗಳ ಬದಲಾವಣೆಹಾಗೂ ಬಲವರ್ಧನೆ ಕಾಮಗಾರಿಗಳಕಾರಣ ಹಲವು ಬಾರಿ ಮೇಲ್ಸೇತುವೆಯನ್ನುಸಂಚಾರಕ್ಕೆ ಮುಚ್ಚಲಾಗಿತ್ತು.ಇದರಿಂದ ಪೀಣ್ಯ,ಜಾಲಹಳ್ಳಿ,ದಾಸರಹಳ್ಳಿಸೇರಿದಂತೆ ಸುತ್ತಮುತ್ತಲಿನಪ್ರದೇಶಗಳಲ್ಲಿ ಭಾರೀ ಸಂಚಾರಸಿಕ್ಕು ಸಮಸ್ಯೆ ಎದುರಾಗಿತ್ತು.ಕಳೆದ 5ವರ್ಷಗಳಿಂದಆಗಾಗ ಹಲವು ಬಾರಿ ಸೇತುವೆಯನ್ನುಪೂರ್ಣ ಮುಚ್ಚುವುದು,ಭಾರಿ ವಾಹನಗಳಸಂಚಾರವನ್ನು ನಿರ್ಬಂಧಿಸಿ ಕೇವಲಲಘು ವಾಹನಗಳ ಸಂಚಾರಕ್ಕೆ ಅವಕಾಶನೀಡುವುದು ಹೀಗೆ ನಡದೇ ಇತ್ತು.ಆ ಎಲ್ಲದರ ನಡುವೆದುರಸ್ಥಿ ಕಾರ್ಯ ಕೂಡಾ ನಡೆದಿತ್ತು.ಅಂತಿಮವಾಗಿದುರಸ್ಥಿ ಕಾರ್ಯ ಪೂರ್ಣಗೊಂಡನಂತರ ನಾಲ್ಕು ದಿನಗಳ ಪರೀಕ್ಷಾರ್ಥಸಮಗ್ರ ಭಾರ ಪರೀಕ್ಷೆ ನಡೆಸಿದನಂತರ ಎನ್‌ಎಚ್‌ಎಐ ಸೇತುವೆಯಸಾಮರ್ಥ್ಯವನ್ನು ಪರಿಶೀಲಿಸಿಸಂಚಾರಕ್ಕೆ ಪ್ರಮಾಣ ಪತ್ರ ನೀಡಿದೆ.
ಸಂಚಾರದಟ್ಟಣೆಯನ್ನು ತಗ್ಗಿಸುವಮಹತ್ವಾಕಾಂಕ್ಷಿ ಉದ್ದೇಶದಿಂದನಿರ್ಮಾಣಗೊಂಡಿರುವ ಡಾ.ಶ್ರೀಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯು2010ರಲ್ಲಿ ಉದ್ಘಾಟನೆಗೊಂಡಿದ್ದು,2021ರ ಡಿಸೆಂಬರ್‌ನಲ್ಲಿ 3 ಸ್ಪ್ಯಾನ್‌ಗಳಒಳಗಿನ ಕೇಬಲ್‌ಗಳಲ್ಲಿ ದೋಷ ಪತ್ತೆಯಾಗಿತ್ತು.ಆಗ ಬೃಹತ್ ವಾಹನಗಳಸಂಚಾರವನ್ನು ನಿಷೇಧಿಸಲಾಗಿತ್ತು.ಕಳೆದ 5ವರ್ಷಗಳಿಂದಇದ್ದ ದೀರ್ಘಕಾಲೀನ ಸಮಸ್ಯೆಗೆಕೊನೆಗೂ ಪರಿಹಾರ ಸಿಕ್ಕಂತಾಗಿದ್ದು,ಗೊರಗುಂಟೆಪಾಳ್ಯದಲ್ಲಿನಿತ್ಯ ಉಂಟಾಗುತ್ತಿದ್ದ ಸಂಚಾರದಟ್ಟಣೆ ತಗ್ಗುವ ವಿಶ್ವಾಸವಿದೆ.
ಈಹಿಂದೆ ಹಲವು ಬಾರಿ ಸೇತುವೆಯಲ್ಲಿದೋಷ ಕಂಡು ಬಂದ ಹಿನ್ನೆಲೆಯಲ್ಲಿಎನ್‌ಎಚ್‌ಎಐ ಶಾಶ್ವತ ದುರಸ್ಥಿಗೆತಜ್ಞರ ಸಮಿತಿ ರಚನೆ ಮಾಡಿ,ತಜ್ಞರ ವರದಿಯಂತೆಯೇದುರಸ್ಥಿ ಕಾರ್ಯ ನಡೆಸಿತ್ತು.ಭಾರತೀಯ ವಿಜ್ಞಾನಸಂಸ್ಥೆಯ (ಐಐಎಸ್‌ಸಿ)ಪ್ರೊ.ಚಂದ್ರಕಿಶನ್ನೇತೃತ್ವದ ತಜ್ಞರ ಸಮಿತಿ ನೀಡಿದವರದಿ ಆಧಾರದಲ್ಲಿ ಸಿಮೆಂಟ್ಬಾಕ್ಸ್ಗಳಲ್ಲಿನ ಹಳೆಯ ಕೇಬಲ್‌ಗಳನ್ನುತೆಗೆದು ಹೊಸ ಕೇಬಲ ಅಳವಡಿಸಲಾಯಿತು.ಆಧುನಿಕತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಿದಸುಮಾರು 32 ಕೋಟಿವೆಚ್ಚದ 1400 ಕ್ಕೂಹೆಚ್ಚಿನ ಹೊಸ ಕೇಬಲ್‌ಗಳನ್ನುಅಳವಡಿಸಲಾಗಿದೆ.ಅದರ ಲೋಡ್ಟೆಸ್ಟಿಂಗ್‌ಗಾಗಿ ಭಾರತೀಯ ರಸ್ತೆಕಾಂಗ್ರೆಸ್ (ಐಆರ್‌ಸಿ)ಮಾರ್ಗಸೂಚಿಗಳಪ್ರಕಾರ ಸೇತುವೆಯ ಪ್ರಮುಖ ಭಾಗಗಳಲ್ಲಿಭಾರೀ ತೂಕದ ಲಾರಿಗಳನ್ನು ನಿಲ್ಲಿಸಿಗರಿಷ್ಠ ಸಂಚಾರ ಒತ್ತಡದ ಪರಿಸ್ಥಿತಿಯನ್ನುಕೃತಕವಾಗಿ ಸೃಷ್ಟಿಸಿ ಸೇತುವೆಯಮೇಲಿನ ಒತ್ತಡ,ಕಂಪನ,ಬಾಗುವಿಕೆ(ಡಿಫ್ಲೆಕ್ಷನ್)ಹಾಗೂ ರಚನಾತ್ಮಕಚಲನೆಗಳನ್ನು ಪರೀಕ್ಷಿಸಲಾಯಿತು.ಅತ್ಯಾಧುನಿಕಸೆನ್ಸಾರ್‌ಗಳು,ಸ್ಟ್ರೇನ್ಗೇಜ್‌ಗಳು, ಲೋಡ್ಸೆಲ್‌ಗಳು ಮತ್ತು ಡೇಟಾ ಸಂಗ್ರಹವ್ಯವಸ್ಥೆಗಳನ್ನು ಬಳಸಿಕೊಂಡುಸೇತುವೆಯಲ್ಲಿನ ಅಂಶಗಳನ್ನುನಿರಂತರವಾಗಿ ದಾಖಲಿಸಲಾಯಿತು.ಅಂತಿಮವಾಗಿಸೇತುವೆಯ ಸುರಕ್ಷತೆ,ಸಾಮರ್ಥ್ಯವನ್ನುಖಾತರಿ ಪಡಿಸಿ ಪ್ರಮಾಣ ಪತ್ರನೀಡಲಾಗಿದೆ.
ಈಗಾಗಲೇಸೇತುವೆಯ ಆಯ್ದ ಭಾಗದಲ್ಲಿ ನಡೆದಪರೀಕ್ಷೆಯಿಂದ ಸಂಗ್ರಹಿಸಿದಮಾಹಿತಿಯನ್ನು ವಿಶ್ಲೇಷಿಸಿದಾಗಒತ್ತಡ, ಕಂಪನ,ಬಾಗುವಿಕೆಸೇರಿದಂತೆ ಎಲ್ಲ ಮಾನದಂಡಗಳೂಅನುಮತಿಸಲಾದ ಮಿತಿಯೊಳಗೇ ಇದ್ದು,ದುರಸ್ಥಿ ಮಾಡಲಾದಭಾಗಗಳು ಸುರಕ್ಷತಾ ಮತ್ತುಕಾರ್ಯಕ್ಷಮತಾ ಮಾನದಂಡಗಳನ್ನುಹೊಂದಿವೆ ಎಂದು ಎನ್‌ಎಚ್‌ಎಐಸ್ಪಷ್ಟಪಡಿಸಿದೆ.ಅಧಿಕಾರಿಗಳಪ್ರಕಾರ, ಸೇತುವೆಯರಚನಾತ್ಮಕ ಸ್ಥಿರತೆ,ಭಾರ ಹೊರುವಸಾಮರ್ಥ್ಯ ಮತ್ತು ವಾಹನ ಸಂಚಾರನಿರ್ವಹಣಾ ಸಾಮರ್ಥ್ಯ ತೃಪ್ತಿಕರವಾಗಿದ್ದು,ಸಂಚಾರಕ್ಕೆಯಾವುದೇ ಅಪಾಯವಿಲ್ಲ.
ಮೇಲ್ಸೇತುವೆಯಇನ್ನೂ ಕೆಲವು ಭಾಗಗಳಲ್ಲಿ ಬಲವರ್ಧನೆಕಾಮಗಾರಿ ಮುಂದುವರೆದಿದ್ದು,ಆ ಸ್ಪಾನ್‌ಗಳಮೇಲೂ ಇದೇ ಮಾದರಿಯ ಪರೀಕ್ಷೆಗಳನ್ನುನಡೆಸುವ ಯೋಜನೆ ಇದೆ.ಎಲ್ಲ ಕಾಮಗಾರಿಗಳುಪೂರ್ಣಗೊಂಡ ಬಳಿಕ ಮೇಲ್ಸೇತುವೆಯದೀರ್ಘಕಾಲಿಕ ಸುರಕ್ಷತೆ ಮತ್ತಷ್ಟುಖಚಿತವಾಗಲಿದೆ ಎಂದು ಅಧಿಕಾರಿಗಳುತಿಳಿಸಿದ್ದಾರೆ.