Peenya Flyover closed 
ರಾಜ್ಯ

ವಾಹನ ಸವಾರರೇ ಗಮನಿಸಿ; ಪೀಣ್ಯ ಫ್ಲೈಓವರ್ 5 ದಿನ ಬಂದ್, ಪರ್ಯಾಯ ಮಾರ್ಗವೇನು?..Bengaluru

ಪ್ರಮುಖ ಮುಖ್ಯಾಂಶಗಳು

  • ಪೀಣ್ಯ ಫ್ಲೈಓವರ್‌ನಲ್ಲಿ ಏಪ್ರಿಲ್ 13ರಿಂದ 17ರವರೆಗೆ ಲೋಡ್ ಟೆಸ್ಟಿಂಗ್
  • ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಮನವಿ
  • ಏ.13ರ ಬೆಳಗ್ಗೆ 5 ಗಂಟೆಯಿಂದ ಏ.17ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಬಂದ್
ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಎಂತಲೂ ಕರೆಯಲಾಗುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ನೆಲಮಂಗಲ ಸೇರಿದಂತೆ ಉತ್ತರ ಕರ್ನಾಟಕದ 22 ಜಿಲ್ಲೆಗಳನ್ನು ಸಂಪರ್ಕಿಸಲು ಅನುಕೂಲಕರವಾಗಿರುವ ಹೆದ್ದಾರಿಯಾಗಿದೆ. ಅಂತಿಮ ಹಂತದ 'ಲೋಡ್ ಟೆಸ್ಟಿಂಗ್' ನಡೆಯುತ್ತಿರುವ ಕಾರಣ, ಏಪ್ರಿಲ್ 13 ರಿಂದ 5 ದಿನಗಳ ಕಾಲ ಪೀಣ್ಯ ಫ್ಲೈಓವರ್  ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಎಷ್ಟು ಗಂಟೆಯಿಂದ ಎಲ್ಲಿಯವರೆಗೂ ಕ್ಲೋಸ್?

ಏಪ್ರಿಲ್ 13ರ ಬೆಳಗ್ಗೆ 5 ಗಂಟೆಯಿಂದ, ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಯಾವುದೇ ವಾಹನ ಸಂಚರಿಸುವಂತಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ. 

 ಪರ್ಯಾಯ ಮಾರ್ಗ ಯಾವುದು?

ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸ್ ಇಲಾಖೆಯು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಿದೆ:
  • ನೆಲಮಂಗಲದಿಂದ ಬೆಂಗಳೂರು ನಗರಕ್ಕೆ ಬರುವವರಿಗೆ
ನೆಲಮಂಗಲ ಕಡೆಯಿಂದ ಬರುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಏರದೆ, ಕೆಳಭಾಗದ ಎನ್‌ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ ಸಾಗಬೇಕು.
  • 8ನೇ ಮೈಲಿ ದಾಸರಹಳ್ಳಿ ಜಾಲಹಳ್ಳಿ ಕ್ರಾಸ್ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಎಸ್‌ಆರ್‌ಎಸ್ (SRS) ಜಂಕ್ಷನ್ ಗೊರಗುಂಟೆಪಾಳ್ಯ ಮೂಲಕ ನಗರ ಪ್ರವೇಶಿಸಬಹುದು.
  • ಬೆಂಗಳೂರಿನಿಂದ ನೆಲಮಂಗಲ ಕಡೆಗೆ ಹೋಗುವವರಿಗೆ
  • ಸಿಎಂಟಿಐ (CMTI) ಕಡೆಯಿಂದ ಹೊರಹೋಗುವ ವಾಹನಗಳು ಫ್ಲೈಓವರ್ ಕೆಳಭಾಗದ ರಸ್ತೆಯನ್ನು ಬಳಸಬೇಕು.
  • ಎಸ್‌ಆರ್‌ಎಸ್ ಜಂಕ್ಷನ್ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಜಾಲಹಳ್ಳಿ ಕ್ರಾಸ್ ದಾಸರಹಳ್ಳಿ 8ನೇ ಮೈಲಿ ಪಾರ್ಲೆ ಜಿ ಟೋಲ್ ಮೂಲಕ ನೆಲಮಂಗಲ ಕಡೆಗೆ ಸಾಗಬಹುದು, (ಏಜೆನ್ಸೀಸ್)​