Pedestrian dies after being hit by goods tempo 
ರಾಜ್ಯ

ಗೂಡ್ಸ್​ ಟೆಂಪೋ ಡಿಕ್ಕಿಯಾಗಿ ಪಾದಚಾರಿ ಸಾವು

ಚಿಂತಾಮಣಿ: ರಾಜ್ಯ ಹೆದ್ದಾರಿ ಬೆಂಗಳೂರು ರಸ್ತೆಯ ಪೆರಮಾಚನಹಳ್ಳಿ ಬಳಿ ಸರಕು ಸಾಗಣೆ ಟೆಂಪೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪೆದ್ದೂರು ಗ್ರಾಪಂ ವ್ಯಾಪ್ತಿಯ ತುಮ್ಮಲಹಳ್ಳಿ ನಿವಾಸಿ ಕಲ್ಯಾಣ್​ ಕುಮಾರ್​ (26) ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾನೆ.
ಪ್ಲಂಬಿಂಗ್​ ಕೆಲಸ ಮಾಡುವ ಕಲ್ಯಾಣ್​ಕುಮಾರ್​ ಪೆರಮಾಚನಹಳ್ಳಿಯ ಸಂಬಂಧಿಕರ ಮನೆಗೆ ಬಂದು ಸ್ವಗ್ರಾಮಕ್ಕೆ ತೆರಳಲು ಬಸ್​ ನಿಲ್ದಾಣಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಚಿಂತಾಮಣಿಗೆ ಹೋಗುತ್ತಿದ್ದ ಟೆಂಪೋ ಚಾಲಕ ಡಿಕ್ಕಿ ಹೊಡೆದಿದ್ದನು.
ಕೈವಾರ ಹೊರಠಾಣೆ ಪೊಲೀಸರು ಗಾಯಾಳುವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಸೋಮವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಕೊನೆಯುಸಿರೆಳೆದರು.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.