Peace of mind is possible through artistic activities. 
ರಾಜ್ಯ

ಕಲಾತ್ಮಕ ಚಟುವಟಿಕೆಗಳಿಂದ ನೆಮ್ಮದಿ ಸಾಧ್ಯ

ಲಕ್ಕೂರು: ನೋವು, ಬೇಸರದಲ್ಲಿದ್ದಾಗ ಮನಸ್ಸಿನ ಗಾಯ ಮರೆಸಿ ಶಾಂತಿ, ನೆಮ್ಮದಿ ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ ತಿಳಿಸಿದರು.
ಜಯಮಂಗಲ ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿ ಗೇಟ್​ನಲ್ಲಿ, ಕನ್ನಡ ಮತ್ತು ಸಂಸತಿ ಇಲಾಖೆ ಬೆಂಗಳೂರು ಹಾಗೂ ಗಾನಸುಧಾ ಸಾಂಸತಿಕ ಕಲಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಸಾಂಸತಿಕ ಕಲಾ ಸಂಭ್ರಮದಲ್ಲಿ ಮಾತನಾಡಿ, ಹಸಿವು, ನಿದ್ದೆ ಮಾನವನ ಜೀವನಕ್ಕೆ ಅತ್ಯಂತ ಪ್ರಮುಖವಾದ ಅಂಶಗಳು. ಸರಿಯಾದ ಸಮಯಕ್ಕೆ ಊಟ ಮಾಡಿ, ನಿದ್ದೆ ಮಾಡುವವನೇ ನಿಜವಾದ ಶ್ರೀಮಂತ. ಮನುಷ್ಯನ ಆರೋಗ್ಯಕ್ಕೆ ಸರಿಯಾದ ಮನಸ್ಥಿತಿ, ವಾತಾವರಣ ಮುಖ್ಯ ಎಂದರು.
ಮನಸ್ಸಿನ ನೋವನ್ನು ಹಾಡು ಹಾಡುವುದು, ಕೇಳುವುದು, ಬರೆಯುವುದು, ಧ್ಯಾನದಂತಹ ಕಲಾತ್ಮಕ ಚಟುವಟಿಕೆಗಳು ನೆಮ್ಮದಿ ನೀಡುತ್ತವೆ. ಎಲ್ಲಿ ಸಂಸತಿ ಇರುತ್ತದೆಯೋ ಅಲ್ಲಿ ಸಂಸ್ಕಾರವಿರುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸಲು ಇಲಾಖೆಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರೋತ್ಸಾಹಧನಕ್ಕಾಗಿ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕಲಾವಿದರು ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಶ್ರಾವಣ ಮಾಸದಲ್ಲಿ ಸಾಂಸತಿಕ ಸೌರಭ ಹಮ್ಮಿಕೊಳ್ಳಲಾಗಿದ್ದು, 8 ರಿಂದ 14 ವರ್ಷದ ಮಕ್ಕಳಿಗಾಗಿ ಚಿಗುರು, 15 ರಿಂದ 30 ವರ್ಷದ ಯುವಕರಿಗಾಗಿ ಯುವಸೌರಭ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜತೆಗೆ 58 ವರ್ಷ ಪೂರ್ಣಗೊಳಿಸಿದ ಅರ್ಹ ಕಲಾವಿದರಿಗೆ ಇಲಾಖೆಯಿಂದ ಮಾಸಾಶನ ನೀಡಲಾಗುತ್ತಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕಾರ್ಯಕ್ರಮಸಲ್ಲಿ ಗಾರುಡಿಗೊಂಬೆ, ಸೋಮನಕುಣಿತ, ಕೀಲುಕುದುರೆ, ಡ್ರಮ್​ ವಾದನ ತಂಡಗಳ ಜತೆಗೆ ಭರತನಾಟ್ಯ, ಸಮೂಹ ನೃತ್ಯ ಪ್ರದರ್ಶಿಸಲಾಯಿತು.
ಗಾನಸುಧ ಕಲಾ ಸಂಘದ ಅಧ್ಯಕ್ಷ ಗೌತಮ್​, ಮುಖಂಡರಾದ ಕೆಂಪಣ್ಣ, ಗಿರೀಶ್​, ಶ್ರೀನಿವಾಸ್​, ಹನುಮಾನ್​ ದೇವಸಿ, ಪುರ ಪ್ರದಿಪ್​, ಕಲಾವಿದರಾದ ವೆಂಕಟಾಚಲಪತಿ, ವೆಂಕಟೇಶ್​, ಮುನಿರಾಜು ಇದ್ದರು.