ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗುಡ್ಡಾಪುರ ದಾನಮ್ಮ ಪ್ರವಚನ ಕಾರ್ಯಕ್ರಮಕ್ಕೆ ಸಮಾಜದ ಮುಖಂಡ ಮಹಾದೇವ ಕೋಳಿ ಚಾಲನೆ ನೀಡಿದರು. ಹುಲ್ಯಾಳದ ಪ್ರವಚನಕಾರ ಮಲ್ಲೇಶ ಶರಣರು, ರಾಮನಗೌಡ ಪಾಟೀಲ, ಸದಾಶಿವ ಪಾಟೀಲ, ಶ್ರೀಕಾಂತ ಹಲಕಿ, ಲಕ್ಕಪ್ಪ ಕೋಳಿ, ಶ್ರೀಮಂತ ಹಜೇರಿ ಇತರರಿದ್ದರು.
- ಹುಲ್ಯಾಳದ ಪ್ರವಚನಕಾರ ಮಲ್ಲೇಶ ಶರಣರ ಅಭಿಮತ
- ಗುಡ್ಡಾಪುರ ದಾನಮ್ಮ ಪ್ರವಚನ
ಜಮಖಂಡಿ: ಭಕ್ತಿ, ಧಾರ್ಮಿಕ ಆಚರಣೆ ಹಾಗೂ ಸಾತ್ವಿಕ ಚಿಂತನೆಗಳು ಮನುಷ್ಯನ ಬದುಕಿಗೆ ಸಾರ್ಥಕತೆ ನೀಡುವುದರ ಜತೆಗೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಸುತ್ತವೆ ಎಂದು ಹುಲ್ಯಾಳದ ಪ್ರವಚನಕಾರ ಮಲ್ಲೇಶ ಶರಣರು ಹೇಳಿದರು.
ತಾಲೂಕಿನ ಮೈಗೂರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಗುಡ್ಡಾಪುರ ದಾನಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಂಸ್ಕಾರ ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳಬೇಕು. ಪ್ರವಚನ, ಭಜನೆ ಸೇರಿ ಧಾರ್ಮಿಕ ಚಟುವಟಿಕೆಗಳು ಜನರಲ್ಲಿ ಸದ್ಭಾವನೆ, ಪರಸ್ಪರ ಗೌರವ ಮತ್ತು ಸೌಹಾರ್ದ ಮನೋಭಾವ ಮೂಡಿಸಲು ಸಹಕಾರಿಯಾಗುತ್ತವೆ ಎಂದರು.
ಸಮಾಜದ ಮುಖಂಡ ಮಹಾದೇವ ಕೋಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಮನಗೌಡ ಪಾಟೀಲ, ಸದಾಶಿವ ಪಾಟೀಲ, ಶ್ರೀಕಾಂತ ಹಲಕಿ, ಲಕ್ಕಪ್ಪ ಕೋಳಿ, ಶ್ರೀಮಂತ ಹಜೇರಿ, ವಿರೂಪಾಕ್ಷ ಶೇಡಬಾಳ ಸೇರಿ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.