ದೇವಲಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಕಮ್ಮದೇವಿ, ಶ್ರೀ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದಲ್ಲಿ ಸ್ತ್ರೀಯರಿಗೆ ಶ್ರೀ ಚಂದ್ರಶೇಖರ ಗುರೂಜಿ ಬಾಗಿನ ಅರ್ಪಿಸಿದರು. ಅಂಬಿಕಾ ರಾಮಣ್ಣ, ರಾಜಶೇಖರ್, ನಟರಾಜ್, ಸ್ವಾಮಿ, ರಾಮಪ್ರಸಾದ್, ನಾಗರಾಜ್, ಉಮೇಶ್, ನಾಗೇಶ್ ಇದ್ದರು.
ನುಗ್ಗೇಹಳ್ಳಿ: ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು ಬೆಳವಣಿಗೆಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ನೆಮ್ಮದಿ ದೊರೆಯುತ್ತದೆ ಎಂದು ಕತ್ತರಿಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ್ ಗುರೂಜಿ ಶುಕ್ರವಾರ ತಿಳಿಸಿದರು.
ಹೋಬಳಿಯ ದೇವಲಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಕಮ್ಮ ದೇವಿ, ಶ್ರೀ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದಲ್ಲಿ ಸ್ತ್ರೀಯರಿಗೆ ಬಾಗಿನ ಅರ್ಪಿಸಿ ಆಶೀರ್ವಚನ ನೀಡಿದರು. ಪರಮಾತ್ಮನನ್ನು ಅರಿತು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಮನುಷ್ಯನಿಗೆ ಗೌರವ ಇಲ್ಲದಿದ್ದರೆ ರೂಪ ವ್ಯರ್ಥವಾಗುತ್ತದೆ. ಗುರಿ ಇಲ್ಲದಿದ್ದರೆ ಸಾಧನೆ ವ್ಯರ್ಥವಾಗುತ್ತದೆ. ನಮ್ರತೆ ಇಲ್ಲದಿದ್ದರೆ ಪ್ರತಿಭೆ ವ್ಯರ್ಥವಾಗುತ್ತದೆ. ಉಪಯೋಗಿಸದೇ ಇದ್ದರೆ ಹಣ ವ್ಯರ್ಥವಾಗುತ್ತದೆ. ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಳ್ಳಿಗಳಲ್ಲಿ ದ್ವೇಷ, ಅಸೂಯೆ ಬಿಟ್ಟು ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸಿ. ನಿಮ್ಮ ಹಳ್ಳಿಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸಂಸ್ಕಾರವಂತರನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಮುಂದಾಗಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮರಗಿರಿ ರಂಗನಾಥ ಪ್ರೌಢಶಾಲೆಯಲ್ಲಿ ಸುದೀರ್ಘ 35 ವರ್ಷ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಜೀವನ ರೂಪಿಸಿದ ನಿವೃತ್ತ ಶಿಕ್ಷಕ ವಿ. ಮಲ್ಲಿಕಾರ್ಜುನಯ್ಯ ಅವರನ್ನು ಶ್ರೀ ಚಂದ್ರಶೇಖರ್ ಗುರೂಜಿ ಅಭಿನಂದಿಸಿದರು.
ಜಿ.ಪಂ.ಮಾಜಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪನ್ಯಾಸಕರಾದ ರಾಜಶೇಖರ್, ರಾಮ್‌ಪ್ರಸಾದ್, ನಟರಾಜ್, ಎಲ್‌ಐಸಿ ಡಿ.ಸಿ. ನಾಗರಾಜ್, ಗ್ರಾ.ಪಂ.ಮಾಜಿ ಸದಸ್ಯರಾದ ಡಿ.ಎಚ್. ಸ್ವಾಮಿ, ಡಿ.ಆರ್. ನಾಗೇಶ್, ಡಿ.ಸಿ. ಉಮೇಶ್, ಡಿ.ಪಿ. ರವಿಚಂದ್ರನ್, ಡಿ. ಎಚ್. ಜಯರಾಮ್, ಡಿ.ಎಚ್. ರಂಗನಾಥ್, ಶಿವಲಿಂಗೇಗೌಡ, ಪಟೇಲ್ ಆನಂದ್, ಬಸವರಾಜ್, ಡಿ.ಜೆ. ರಾಕೇಶ್, ಡಿ.ಎಚ್. ಕುಮಾರ್, ಇತರರಿದ್ದರು.