ಕಬ್ಬಿನ ಬಿಲ್ ಪಾವತಿಸುವಂತೆ ಒತ್ತಾಯಿಸಿ ಆಳಂದ ತಾಲೂಕಿನ ಭೂಸನೂರಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಉಪಾಧ್ಯ ಪುರುಷೋತ್ತಮ ಅವರಿಗೆ ರೈತರು ಮನವಿಪತ್ರ ಸಲ್ಲಿಸಿದರು. ಬಸವರಾಜ ಯಳಸಂಗಿ, ಮಲ್ಲಿನಾಥ ದುಗೊಂಡ, ಸೂರ್ಯಕಾಂತ, ಮಹೇಂದ್ರ ಇದ್ದರು.
- ರೈತರಿಂದ ಭೂಸನೂರು ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರಿಗೆ ಮನವಿ
ಆಳಂದ: ಭೂಸನೂರಿನಲ್ಲಿರುವ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಕಬ್ಬು ಅರಿಯುವ ಕಾರ್ಯ ನಿಲ್ಲಿಸಿ ಮೂರು ತಿಂಗಳಾದರೂ ಈವರೆಗೂ ರೈತರಿಗೆ ಕಬ್ಬಿನ ಬಿಲ್ ಪಾವತಿಸದೆ ಕಡೆಗಣಿಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಿಂರ್ಬಗಾ ಹೋಬಳಿ ಅಧ್ಯ ಬಸವರಾಜ ಯಳಸಂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಭೂಸನೂರಿನಲ್ಲಿ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪುರುಷೋತ್ತಮ ಅವರಿಗೆ ರೈತರೊಂದಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದ ಅವರು, ನಿಯಮದಂತೆ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಲ್ಲಿಸಿದ 15 ದಿನಗಳೊಳಗಾಗಿ ಬಿಲ್ ಪಾವತಿಸಬೇಕು. ಆದರೆ ಇದುವರೆಗೆ ಆ ಕೆಲಸ ಆಗಿಲ್ಲ. ಇದರಿಂದ ಕಬ್ಬು ನೀಡಿದ ರೈತರು ಆರ್ಥಿಕ ಸಂಕಷ್ಟ ಸಿಲುಕಿದ್ದು, ಕೃಷಿ ಚಟುವಟಿಕೆ ನಡೆಸಲು ಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಬಿಲ್ ಪಾವತಿಸಬೇಕು. ರ್ನಿಲಕ್ಷ ವಹಿಸಿದರೆ ರೈತರೊಂದಿಗೆ ಕಾರ್ಖಾನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರುಷೋತ್ತಮ ಮಾತನಾಡಿ, ಬಿಲ್ ಪಾವತಿ ಮಾಡಲು ವಿಳಂಬವಾಗಿದೆ. ಆದರೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ, ವಾರದೊಳಗೆ ಕಬ್ಬು ನೀಡಿದ ಎಲ್ಲ ರೈತರ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಪ್ರಮುಖರಾದ ಮಲ್ಲಿನಾಥ ದುಗೊಂಡ, ಸೂರ್ಯಕಾಂತ ಕಂಟೇಕುರ, ಜಗದೀಶ ಮಾಳಗೆ, ಧರ್ಮರಾಯ ಕಾಮನಗೋಳ, ಮಹೇಂದ್ರ ನಿರ್ಮಲ್ಕರ್ ಇತರರಿದ್ದರು.