ಸಿದ್ಧಸಿರಿ ಕಂಪನಿಗೆ ಕಬ್ಬು ನೀಡಿದ ರೈತರಿಗೆ ಕೂಡಲೇ ಬಾಕಿ ಹಣ ನೀಡಬೇಕು ಎಂದು ಒತ್ತಾಯಿಸಿ ಚಿಂಚೋಳಿಯಲ್ಲಿ ರೈತ ಹಿತ ರಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ಅಬ್ದುಲ್ ಬಾಸೀದ್, ಲ್ಮಣ ಅವಂಟಿ, ಸುಭಾಷಚಂದ್ರ ಪಾಟೀಲ್, ಸಿದ್ದು ಕನಕಪುರ, ಬಸವರಾಜ ಕಡಬೂರ ಇತರರಿದ್ದರು.
- ಚಿಂಚೋಳಿ ತಹಸಿಲ್ ಕಚೇರಿ ಎದುರು ರೈತ ಹಿತ ರಣಾ ಸಮಿತಿಯಿಂದ ಪ್ರತಿಭಟನೆ
ಚಿಂಚೋಳಿ: ಸಿದ್ಧಸಿರಿ ಇಥೆನಾಲ್ ಕಂಪನಿಯೂ ಕಬ್ಬು ನೀಡಿದ ರೈತರು ನಿಗದಿಯಂತೆ ಹಣ ನೀಡದೆ ಅನ್ಯಾಯ ಮಾಡುತ್ತಿದ್ದು, ಕೂಡಲೇ ಸರ್ಕಾರ ನಿಗದಿಪಡಿಸಿದ ದರವನ್ನು ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿ ತಹಸಿಲ್ ಕಚೇರಿ ಎದುರು ರೈತ ಹಿತ ರಣಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರೈತ ಹಿತ ರಣಾ ಸಮಿತಿ ತಾಲೂಕು ಅಧ್ಯ ಅಬ್ದುಲ್ ಬಾಸೀದ್ ಮಾತನಾಡಿ, ಪ್ರತಿ ಟನ್ ಕಬ್ಬಿಗೆ ಸರ್ಕಾರ 2950 ರೂ. ನಿಗದಿ ಮಾಡಿದೆ. ಅದರಂತೆ ಹಣ ನೀಡದೆ ಕಂಪನಿ ರೈತರನ್ನು ಸತಾಯಿಸುತ್ತಿದೆ. ಕೂಡಲೇ ಕಳೆದ 6 ತಿಂಗಳಿಂದ ಬಾಕಿ ಉಳಿಸಿಕೊಂಡ 250 ರೂ. ಪಾವತಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು. ವಾರದಲ್ಲಿ ಕಂಪನಿಗೆ ಕಬ್ಬು ಪೂರೈಸಿದ ಕಬ್ಬು ಬೆಳೆಗಾರರ ಖಾತೆಗೆ ಬಾಕಿ ಹಣ ಜಮೆ ಮಾಡಬೇಕು. ರ್ನಿಲಕ್ಷ ವಹಿಸಿದರೆ ಕಂಪನಿ ಮುಂದೆ ಬೃಹತ್ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ಲ್ಮಣ ಅವಂಟಿ, ಸುಭಾಷಚಂದ್ರ ಪಾಟೀಲ್, ಸಿದ್ದು ಕನಕಪುರ, ಬಸವರಾಜ ಕಡಬೂರ, ರಾಜು ನವಲೆ, ಖಲೀಲ್ ಪಟೇಲ್, ನಾಗೇಶ ಗುಣಾಜಿ ಇತರರಿದ್ದರು.