Pay the bills for JJM works.
ಕೇಂದ್ರ ಸರ್ಕಾರದಿಂದ ಜಲ ಜೀವನ್ ಮಿಷನ್ ಯೋಜನೆಯಡಿ 80 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ, 2&-3 ವರ್ಷಗಳಿಂದ ಗುತ್ತಿಗೆದಾರರಿಗೆ 1 ರೂ. ಬಿಡುಗಾಸನ್ನೂ ಪಾವತಿಸದೆ, ಸುಮಾರು 30 ಕೋಟಿ ರೂ. ಅನುದಾನವನ್ನು ಸಿಇಒ ವಾಪಸ್ ಕಳುಹಿಸಿದ್ದಾರೆ ಎಂದು ಆರೋಪಿಸಿ ಚಿಂತಾಮಣಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಜಿಲ್ಲಾ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರು ಪ್ರತಿಭಟಿಸಿದರು.
ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಶ್ರೀ ಬಿಲ್ ಪಾವತಿ ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಗುತ್ತಿಗೆದಾರ ಸ್ಕೂಲ್ ಸುಬ್ಬಾರೆಡ್ಡಿ ಮಾತನಾಡಿ, ಗುತ್ತಿಗೆದಾರರು ಕಾಮಗಾರಿಗಳ ಬಿಲ್ ಪಾವತಿಸುವವರೆಗೆ ಮುಂದಿನ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಬುಧವಾರದಂದು ಸಿಇಒ ಹಾಗೂ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲು ಸಭೆಯಲ್ಲಿ ರ್ನಿಣಯಿಸಲಾಗಿದೆ ಎಂದರು.
ಇನ್ನು ಕಚೇರಿಯಲ್ಲಿ ಕೆಲವರು ದಳ್ಳಾಳಿಗಳಂತೆ ವರ್ತಿಸುತ್ತಿದ್ದು, ಹಣ ನೀಡಿದವರ ಬಿಲ್ ಮಾತ್ರ ಪಾಸ್ ಮಾಡಲಾಗುತ್ತಿದೆ. ಉಳಿದವರ ಬಿಲ್ಗಳನ್ನು ವಿನಾಕಾರಣ ಪೆಂಡಿಂಗ್ ಇಡಲಾಗುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸಿದರು.
ಈ ವೇಳೆ ಪ್ರತಿಭಟನಾಕಾರರು ಸಿಇಒ, ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರಾದ ಕೆ.ರಮೇಶ್, ಎಸ್.ಶಿವಾರೆಡ್ಡಿ, ಶ್ರೀರಾಮಪ್ಪ, ಡಿ.ವಿ.ಶ್ರೀನಿವಾಸ್, ವಿ.ವೆಂಕಟರೆಡ್ಡಿ, ಮೋಹನ್ರೆಡ್ಡಿ, ಟಿ.ನಾಗರಾಜ್, ಗಂಗಿರೆಡ್ಡಿ, ಹರೀಶ್, ಶ್ರೀಕಾಂತ್ ಕಿಶೋರ್, ಎಂ.ಎನ್.ರವಿ, ಮಂಜುನಾಥ್, ಜಿ.ವಿ.ಶಿವಾರೆಡ್ಡಿ ಇದ್ದರು.