ಬುಕ್ಕಾಪಟ್ಟಣ Week ಹೋಬಳಿಯ ಬಾಳಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸುರಕ್ಷತಾ ಅಧಿಕಾರಿ ಮುದ್ದಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಲೋಕೇಶ್​ ಇದ್ದರು.  
ರಾಜ್ಯ

ಮಗುವಿನ ಆರೋಗ್ಯದ ಕಡೆಗೆ ಗಮನಹರಿಸಿ Week

ಬುಕ್ಕಾಪಟ್ಟಣ:

ವಿಶ್ವದ ಶ್ರೇಷ್ಠ ಕೆಲಸ ತಾಯಂದಿರದಾಗಿರುತ್ತದೆ. ಮಗುವನ್ನು ಪಾಲನೆ ಪೋಷಣೆ ಮಾಡಿ

Week

ಆ ಮಗುವಿಗೆ ಉತ್ತಮ ಜೈವಿಕ ಅಂಶ, ಪೌಷ್ಟಿಕಾಂಶ ಯುಕ್ತ ಸದೃಢ ದೇಹ ಒದಗಿಸಿಕೊಡುವ ಕಾರ್ಯ ತಾಯಂದಿರಿಂದ ಮಾತ್ರ ಸಾಧ್ಯ ಎಂದು ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್​.ಉಮೇಶ್​ ತಿಳಿಸಿದರು.

ಮಾತನಾಡಿ, ಮಕ್ಕಳು ಯಾವುದೇ ರೀತಿಯ ಕೃತಕ ಆಹಾರ ಅಥವಾ ಜಂಕ್​ ಫುಡ್​ ತಿನ್ನುವುದನ್ನು ನಿಲ್ಲಿಸಬೇಕು. ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಿ ಮಗುವಿನ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಬಾಳಾಪುರ ಕಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ಶಿವಕುಮಾರ್​, ಆಶಾ ಕಾರ್ಯಕರ್ತೆಯರಾದ ಗೀತಮ್ಮ, ಸರೋಜಾ, ಅಂಗನವಾಡಿ ಕಾರ್ಯಕರ್ತೆ ಅಮ್ಮಾಜಮ್ಮ ಇದ್ದರು.