ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಪೊಲೀಸ್ ಧ್ವಜ ದಿನ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಹೆಚ್ಚುವರಿ ಎಸ್ಪಿ ಧರಣೇಶ, ಅರುಣಕುಮಾರ ಕೊಳೂರ, ಭರತಕುಮಾರ ತಳವಾರ, ಸುರೇಶ ನಾಯಕ ಇತರರಿದ್ದರು.
- ಆರಕ ಅಧೀಕ ಅರುಣಕುಮಾರ ಸಲಹೆ
- ಯಾದಗಿರಿಯಲ್ಲಿ ಪೊಲೀಸ್ ಧ್ವಜ ದಿನ
ಯಾದಗಿರಿ: ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರ ಆಸ್ತಿ&ಪಾಸ್ತಿ ರಣೆಯಲ್ಲಿ ಕರ್ತವ್ಯನಿರತರಾಗಿರುವ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ನಿವೃತ್ತ ಆರಕ ಪೊಲೀಸ್ ಅಧೀಕ ಅರುಣಕುಮಾರ ಕೊಳೂರ ಸಲಹೆ ನೀಡಿದರು.
ನಗರದ ಪೋಲಿಸ್ ಕವಾಯತು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡ ಪೊಲೀಸ್ ಧ್ವಜ ದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ತಮ್ಮ ಕೌಟುಂಬಿಕ ಜೀವನ ಸರಿಯಾಗಿರುವಂತೆ ನೋಡಿಕೊಂಡು ಅವರ ಯೋಗೇಮದ ಜತೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಂಡಲ್ಲಿ ಮಾತ್ರ ಕರ್ತವ್ಯ ಸುಸೂತ್ರವಾಗಿ ನಿಭಾಯಿಸಲು ಸಾಧ್ಯ ಎಂದರು.
ಆಧುನಿಕ ತಾಂತ್ರಿಕ ಜಗತ್ತಿನಲ್ಲಿ ಇಂದು ಇಂಟರನೆಟ್, ಫೇಸ್ಬುಕ್, ಸಾಮಾಜಿಕ ಜಾಲತಾಣಗಳಲ್ಲಿ ಗಣನೀಯ ಬೆಳವಣಿಗೆಯಾಗಿದ್ದು ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಅದರಂತೆ ಯಾವುದೇ ಮುಜುಗರಗಳಿಗೆ ಅವಕಾಶ ನೀಡದೆ ಜಾಗರೂಕತೆಯಿಂದ ಹಾಗೂ ತಾಳ್ಮೆಯಿಂದ ಕರ್ತವ್ಯ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧ ತಡೆಯಲು ಹಗಲಿರುಳು ಶ್ರಮಿಸುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸಾರ್ವಜನಿಕರೊಂದಿಗೆ ಉತ್ತಮವಾಗಿ, ಸೌಜನ್ಯಯುತವಾಗಿ ವರ್ತಿಸಬೇಕು. ಠಾಣೆಗೆ ನ್ಯಾಯ ಕೋರಿ ಬರುವ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳೊಂದಿಗೆ ಸಹನೆಯಿಂದ ಉತ್ತಮವಾಗಿ ವ್ಯವಹರಿಸಬೇಕು. ಇದರಿಂದ ಇಲಾಖೆ ಗೌರವ ಹೆಚ್ಚುವ ಜತೆಗೆ ಸಾರ್ವಜನಿಕರಲ್ಲಿಯೂ ರಣೆಯ ಭಾವನೆ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್ ಅವರು, ರಾಜ್ಯ ಪೊಲೀಸ್ ಧ್ವಜ ದಿನ&2026 ರ ವರದಿ ವಾಚನ ಮಾಡಿ ಇದರ ಉದ್ದೇಶ ವಿವರಿಸಿದರು. ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಪೊಲೀಸ್ ಧ್ವಜ (ಚೀಟಿ) ವಿತರಿಸಲಾಯಿತು. ನಿವೃತ್ತ ಪಿಎಸ್ಐಗಳಾದ ದೇವೇಂದ್ರಪ್ಪ ಧೂಳಖೇಡ, ಶಿವಕಾಂತ, ಭೀಮರಾಯ, ನಾನಾಗೌಡ, ಎಎಸ್ಐ ಭೀಮ ಶೆಟ್ಟಿ, ನಿವೃತ್ತ ಎಪಿಸಿ ಶಿವಪುತ್ರ ಅವರನ್ನು ಸನ್ಮಾನಿಸಲಾಯಿತು. ಡಿವೈಎಸ್ಪಿ ಗಳಾದ ಭರತಕುಮಾರ ತಳವಾರ, ಜಾವೇದ್ ಇನಾಂದಾರ, ಸುರೇಶ್ ನಾಯಕ ಸೇರಿದಂತೆಯೇ ಇತರರಿದ್ದರು.ಸಂತೋಷ ನಿರೂಪಿಸಿದರು. ಪೆರೇಡ್ ಕಮಾಂಡರ್ ಲಚ್ಚಪ್ಪ ಚವ್ಹಾಣ್ ಅವರ ನೇತೃತ್ವದ ಕವಾಯತು ಗಮನ ಸೆಳೆಯಿತು.