ನಾಳೆಯಿಂದ ಪಟ್ಟಲದಮ್ಮ ಜಾತ್ರಾ ಮಹೋತ್ಸವ Pattaladamma Jatra 
ರಾಜ್ಯ

ನಾಳೆಯಿಂದ ಪಟ್ಟಲದಮ್ಮ ಜಾತ್ರಾ ಮಹೋತ್ಸವ Pattaladamma Jatra

ಚನ್ನಪಟ್ಟಣ: ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮೇ 7ರಿಂದ ಮೇ 9 ರವರೆಗೆ ಗ್ರಾಮ ದೇವತೆ ಶ್ರೀ ಪಟ್ಟಲದಮ್ಮ ದೇವಿಯ ಕೊಂಡ ಹಾಗೂ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪಟ್ಟಲದಮ್ಮ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.Pattaladamma Jatra
ಈ ಕುರಿತು ಮಾಹಿತಿ ನೀಡಿದ ಅವರು, ಸುಮಾರು 10 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದ್ದು, ಮೆ 7ರಂದು ಹೋಮ, ಕೊಂಡ ಸೌದೆ, ಸಿಡಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. 8ರಂದು ರೇವಣಸಿದ್ದೇಶ್ವರ ಬೆಟ್ಟದಿಂದ ದೇವರನ್ನು ತರಲಾಗುವುದು. ಮಧ್ಯಾಹ್ನ 3.30ಕ್ಕೆ ಕೊಂಡ ಬಂಡಿ, ಸಂಜೆ ಕರಗ ಮಹೋತ್ಸವ ಜರುಗಲಿದೆ.
ರಾತ್ರಿ ಕೊಂಡಕ್ಕೆ ಅಗ್ನಿಸ್ಪರ್ಶ, ಕರಗ ಸಿಡಿಮದ್ದು, ಬಾಯಿ ಬೀಗ ಮೆರವಣಿಗೆ ಹಾಗೂ ಬೆಳಗಿನ ಜಾವ ಶ್ರೀ ಪಟ್ಟಲದಮ್ಮ ಮತ್ತು ಶ್ರೀ ಎಲ್ಲೇರಪ್ಪ ದೇವರ ಕೊಂಡಮಹೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಮೇ 9ರಂದು ಶ್ರೀ ಪಟ್ಟಲದಮ್ಮ ಹಾಗೂ ಶ್ರೀ ಬೋರೆದೇವರ ಪೂಜಾ ಮೆರವಣಿಗೆ, ಹೂವು-ಹೊಂಬಾಳೆ ಸಮೇತ ಸಿಡಿ ಜಾತ್ರೆ, ಸಿಡಿಮದ್ದುಗಳ ಪ್ರದರ್ಶನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಶುಕ್ರವಾರ ರಾತ್ರಿ ಗಾಯಕ ನವೀನ್ ಸಜ್ಜು ಅವರ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವದೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.