ಭಾಲ್ಕಿ ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಣ ಸಮುಚ್ಛಯದಲ್ಲಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಕರಪತ್ರವನ್ನು ಔರಾದ್ ಶಾಸಕ ಪ್ರಭು ಚವ್ಹಾಣ್ ಬಿಡುಗಡೆಗೊಳಿಸಿದರು. ಶ್ರೀ ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಪ್ರಮುಖರಾದ ಶಿವರಾಜ ಅಲ್ಮಾಜೆ, ಪ್ರವಿಣ ಕಾರಬಾರಿ, ರಾಮಶೆಟ್ಟಿ ಪನ್ನಾಳೆ, ಪೃಥ್ವಿ ಪವಾರ್, ನಾಗರಾಜ ಬಿರಾದಾರ ಇತರರಿದ್ದರು
- ಶಾಸಕ ಪ್ರಭು ಚವ್ಹಾಣ್ ಬಣ್ಣನೆ
- ಭಾಲ್ಕಿಯಲ್ಲಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಕರಪತ್ರ ಬಿಡುಗಡೆ
ಭಾಲ್ಕಿ: ಬಸವಲಿಂಗ ಪಟ್ಟದ್ದೇವರ ಅವಿರತ ಶ್ರಮದ ಫಲವಾಗಿ ಗಡಿ ಭಾಗದಲ್ಲಿ ತಲೆಯೆತ್ತಿರುವ ಗುರುಕುಲ ಶಿಣ ಸಂಸ್ಥೆಯು ಈ ಭಾಗದ ವಿದ್ಯಾರ್ಥಿಗಳ ಪಾಲಿಗೆ ವರವಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಣ ಸಮುಚ್ಛಯದಲ್ಲಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಗುರುಕುಲ ಶಾಲೆಯು ಗುಣಾತ್ಮಕ ಶಿಣ ಮತ್ತು ಉತ್ತಮ ಸಂಸ್ಕಾರಕ್ಕೆ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಈ ಶಾಲೆಯ ವಿದ್ಯಾರ್ಥಿ ಆನಂದ ಪಾಂಡುರಂಗ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ನಮ್ಮ ಭಾಗದ ಕೀರ್ತಿಯನ್ನು ರಾಜ್ಯದಾದ್ಯಂತ ಪಸರಿಸಿದ್ದಾನೆ.ಜತೆಗೆ ಶಾಲೆಯ 130ಕ್ಕೂ ಅಧಿಕ ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ ಎಂದು ತಿಳಿಸಿದರು.
ನಮ್ಮ ಭಾಗದ ಏಳಿಗೆಗೆ ಶಿಣವೇ ಮೂಲ ಎಂಬುದನ್ನು ಮನಗಂಡಿದ್ದ ಪಟ್ಟದ್ದೇವರು ಅನೇಕ ಕಷ್ಟ, ಕಾರ್ಪಣ್ಯಗಳನ್ನು ಎದುರಿಸಿ ಗುರುಕುಲ ಎಂಬ ಶ್ರೇಷ್ಠ ಕಲಿಕಾ ಕೇಂದ್ರವನ್ನು ನಿರ್ಮಿಸಿದ್ದಾರೆ. ಪೂಜ್ಯರ ಪರಿಶ್ರಮದ ಫಲವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗುರುಕುಲ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿವರ್ಷ ನೀಟ್, ಐಐಟಿ ಸೇರಿ ಇತರ ಸ್ಪರ್ಧಾತ್ಮಕ ಪರೀೆಗಳಲ್ಲಿ ಅಮೋ ಸಾಧನೆಗೈದು ವೈದ್ಯರು, ಇಂಜಿನಿಯರ್ ಆಗುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದೇವರು ನೇತೃತ್ವ ವಹಿಸಿದ್ದರು.
ಪ್ರಮುಖರಾದ ಶಿವರಾಜ ಅಲ್ಮಾಜೆ, ಪ್ರವಿಣ ಕಾರಬಾರಿ, ರಾಮಶೆಟ್ಟಿ ಪನ್ನಾಳೆ, ಪೃಥ್ವಿ ಪವಾರ್, ನಾಗರಾಜ ಬಿರಾದಾರ, ಅರವಿಂದ ಮೇತ್ರೆ, ಶರಣಪ್ಪ ಪಾಟೀಲ, ಸಂಜು ರಡ್ಡಿ, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವಿಣ ಖಂಡಾಳೆ, ರಾಜಕುಮಾರ ಮೋರಗೆ ಇತರರಿದ್ದರು.
"
ಶ್ರೀ ಬಸವಲಿಂಗ ಪಟ್ಟದ್ದೇವರು ಗಡಿಭಾಗದಲ್ಲಿ ಶೈಣಿಕ ಕ್ರಾಂತಿಗೈಯುವುದರ ಮೂಲಕ ನಮ್ಮ ಭಾಗವನ್ನು ಶೈಣಿಕವಾಗಿ ಶ್ರೀಮಂತಗೊಳಿಸಿದ್ದಾರೆ. ಗುರುಕುಲದಲ್ಲಿ ಸಿಗುತ್ತಿರುವ ಗುಣಾತ್ಮಕ ಶಿಣ ನಮ್ಮ ಭಾಗವನ್ನು ಶೈಣಿಕವಾಗಿ ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ಅಭಿಮಾನ ಮತ್ತು ಸಂತಸದ ಸಂಗತಿ.
— > ಪ್ರಭು ಚವ್ಹಾಣ್, ಶಾಸಕ ಔರಾದ್