ಗುರುವಾರ ರಾತ್ರಿ ಗುಡುಗು&ಮಿಶ್ರಿತ ಭಾರಿ ಮಳೆಗಾಳಿಗೆ ಕಕ್ಕೇರಾ ತಾಂಡಾ ಬಳಿಯ ನಿವಾಸಿಗಳ ಮನೆಯ ಶೆಡ್ನ ಪತ್ರಾಸ್ಗಳು ಹಾರಿಹೋಗಿರುವುದು.
ಕಕ್ಕೇರಾ: ಗುರುವಾರ ರಾತ್ರಿ 11ರ ಸುಮಾರಿಗೆ ಬೀಸಿದ ಗುಡುಗು&ಗಾಳಿ ಮಿಶ್ರಿತ ಭಾರಿ ಮಳೆಗೆ ಕಕ್ಕೇರಾ ತಾಂಡಾದ ಹತ್ತಿರದ ನಿವಾಸಿಗಳಾದ ಹುಸೇನ್ಸಾಬ್, ರಫೀಕ್ ನದಾಫ್ ಅವರಿಗೆ ಸೇರಿದ ಮನೆ ಮೇಲಿನ ಪತ್ರಾಸ್ಗಳು ಗಾಳಿಗೆ ತೂರಿ ಹೋದ ಪರಿಣಾಮ, ಅವಳಿ ಕುಟುಂಬಗಳು ಕತ್ತಲಲ್ಲಿ ಇಡೀ ರಾತ್ರಿ ಬೇರೆಯವರ ಆಶ್ರಯದಲ್ಲಿ ಕಾಲ ಕಳೆದ ಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದ ವೃದ್ಧರೂ ಸೇರಿ ಯಾರಿಗೂ ಪ್ರಾಣ ಹಾನಿಯಾಗಿಲ್ಲ.
ಭಾರಿ ಗುಡುಗು ಮಿಶ್ರಿತ ಮಳೆಯಾಗಿದ್ದು, ಪುರಸಭೆ ವ್ಯಾಪ್ತಿಯ ಹಲವು ಕಡೆ ಮನೆಗಳ ಟೀನ್ಗಳು ಬಿರುಗಾಳಿಗೆ ಹಾರಿ ಹೋಗಿ ವಾಸ ಮಾಡಲು ಸಂಕಷ್ಟವಾಗಿ ಮನೆಯಲ್ಲಿದ್ದ ಧವಸಧಾನ್ಯಗಳು ಮಳೆಗೆ ಆಹುತಿಯಾಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.