ಗುರುಮಠಕಲ್ನ ಶಾಸಕರ ಜನಸಂಪರ್ಕ ಕಚೇರಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ನೂರಾರು ಕಾರ್ಯಕರ್ತರನ್ನು ಶಾಸಕ ಶರಣಗೌಡ ಕಂದಕೂರ ಅವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.ಪ್ರಕಾಶ ನೀರೇಟಿ, ರಾಮಣ್ಣ ಕೋಟಗೇರಾ,ಮಲ್ಲನಗೌಡ ಹಳಿಮನಿ ಕೌಳೂರು, ಶರಣು ಆವಂಟಿ, ಈಶ್ವರ ನಾಯಕ ಸೇರಿದಂತೆಯೇ ಇತರರಿದ್ದರು.
- ಶಾಸಕ ಶರಣಗೌಡ ಕಂದಕೂರ ಹೇಳಿಕೆ
- ಅಭಿವೃದ್ಧಿ ಜತೆಗೆ ಕಾರ್ಯಕರ್ತರ ಕಷ್ಟ&ಸುಖವೂ ಮುಖ್ಯ
ಗುರಮಠಕಲ್: ಕ್ಷೇತ್ರದ ಅಭಿವೃದ್ಧಿ ಜತೆಗೆ ಕಾರ್ಯಕರ್ತರ ಕಷ್ಟ&ಸುಖಗಳಲ್ಲಿ ಭಾಗಿಯಾಗುವುದು ತಮ್ಮ ಆದ್ಯ ಕರ್ತವ್ಯವಾಗಿದ್ದು, ಅದನ್ನು ಚಾಚು ತಪ್ಪದೆ ಮಾಡುವುದಾಗಿ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಯಾದ ನೂರಾರು ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಪಕ್ಕೆ ಸ್ವಾಗತಿಸಿಕೊಂಡು ಮಾತನಾಡಿದ ಅವರು, ತಮ್ಮ ಮತಕ್ಷೇತ್ರ ಗುರುಮಠಕಲ್ನಲ್ಲಿ ಜೆಡಿಎಸ್ ಪ ಸೇರ್ಪಡೆಯ ಪ್ರಕ್ರಿಯೆ ಸದ್ಯ ಟೆಲರ್ ರೀತಿಯಲ್ಲಿದ್ದು, ಮುಂದೆ ಇನ್ನೂ ಪಿಚ್ಚರ್ ಬಾಕಿ ಇದೆ ಎಂದು ಎದುರಾಳಿಗಳಿಗೆ ಚಾಟಿ ಬೀಸಿದರು.
ರಾಜ್ಯದಲ್ಲಿ ಪ್ರಾದೇಶಿಕ ಪವಾಗಿರುವ ಜೆಡಿಎಸ್ ಭದ್ರವಾಗಿ ಬೇರೂರಿದ್ದು ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ೇತ್ರದ ಯುವಕರು ಮತ್ತೊಬ್ಬರ ಮಾತು ಕೇಳಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ನಾನು ಶಾಸಕನಾಗಿ ೇತ್ರದ ಜನ ತಲೆ ತಗ್ಗಿಸುವ ಕೆಲಸ ನಮ್ಮ ದೊಡ್ಡಪ್ಪ ಆಗಲಿ, ನಮ್ಮ ತಂದೆಯವರಾಗಲಿ ಮತ್ತು ನಾನಾಗಲಿ ಯಾವತ್ತೂ ಮಾಡುವುದಿಲ್ಲ ಎಂದು ಶಾಸಕ ಕಂದಕೂರ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯ ಭೀಮಶಪ್ಪ ಗುಡಸೆ ಮಾತನಾಡಿ, ಪ್ರತಿ ಅಧಿವೇಶನದಲ್ಲಿ ೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಅಭಿವೃದ್ಧಿಗೆ ಮುನ್ನಡೆ ಬರೆಯಲು ಹೋರಾಟ ನಡೆಸುತ್ತಿದ್ದಾರೆ. ಇಂಥ ನಾಯಕರ ಕೈ ಬಲಪಡಿಸಲು ಯುವಕರು ಮುಂದಾಗಬೇಕು ಎಂದರು.
ಪಕ್ಷದ ಹಿರಿಯ ಮುಖಂಡ ನರಸಪ್ಪ ಕವಡೆ ಮಾತನಾಡಿ, ಶಾಸಕ ಕಂದಕೂರ ಅವರ ಬಗ್ಗೆ ಕಾಂಗ್ರೆಸ್ನವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ದಾಖಲೆ ಇಟ್ಟು ಮಾತನಾಡಿದರೆ ನಾವು ಬಹಿರಂಗ ಚರ್ಚೆಗೆ ಬರುತ್ತೇವೆ ಎಂದು ಸವಾಲ್ ಹಾಕಿದರು. ೇತ್ರದ ಯರಗೋಳ, ಹೋರುಂಚಾ, ಬದ್ದೆಪಲ್ಲಿ, ತುರಕನದೊಡ್ಡಿ, ಹಿರೇನೂರ, ಸಾವೂರು, ಸೈದಾಪುರ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಗೊಂಡರು.
ಬ್ಲಾಕ್ ಅಧ್ಯ ಪ್ರಕಾಶ ನೀರೇಟಿ , ಪಿಎಲ್ಡಿ ಬ್ಯಾಂಕ್ನ ಅಧ್ಯ ರಾಮಣ್ಣ ಕೋಟಗೇರಾ, ಪದ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು, ಅಜಯರಡ್ಡಿ ಯಲ್ಹೇರಿ, ಬಸ್ಸಣ್ಣ ದೇವರಳ್ಳಿ, ಶರಣು ಆವಂಟಿ, ತಾಪಂ ಮಾಜಿ ಅಧ್ಯ ಈಶ್ವರ ನಾಯಕ, ನರಸಪ್ಪ ಕವಡೆ, ವೆಂಕಟೇಶ ಕಡದ್, ಗುರುನಾಥರಡ್ಡಿ ಸೈದಾಪುರ, ಶರಣಯ್ಯಾ ಸ್ಚಾಮಿ ಅರಿಕೇರಾ, ಚಂದ್ರುಗೌಡ ಸೈದಾಪುರ, ಬಸವರಾಜ ಕಣೇಕಲ್, ಜಯೇಂದ್ರ ಚವ್ಹಾಣ್ ಇತರರಿದ್ದರು.
ಮೂರು ವರ್ಷಗಳಿಂದ ನೈಯಾಪೈಸೆ ಕೊಟ್ಟಿಲ್ಲ
ಹತ್ತಿಕುಣಿ ನಾಲಾ ಆಧುನೀಕರಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ ಎಂದು ಸ್ಥಳಿಯ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ರಾಜ್ಯದಲ್ಲಿನ ಸರ್ಕಾರ ಗುರಮಠಕಲ್ ೇತ್ರಕ್ಕೆ ಮೂರು ವರ್ಷಗಳಿಂದ ಕುಡಿಯುವ ನೀರು ಕೊಟ್ಟಿಲ್ಲ ಇನ್ನೂ ಕೋಟಿಗಟ್ಟಲೇ ಅನುದಾನ ಕೊಡುತ್ತಾರಾ? ಎಂದು ಶಾಸಕ ಕಂದಕೂರ ಪ್ರಶ್ನಿಸಿದರು. ೇತ್ರದ ಕುಡಿಯುವ ನೀರಿನ ವಿಷಯದಲ್ಲಿ ಅಧಿವೇಶನದಲ್ಲಿ ಸತತ 8 ಬಾರಿ ಪ್ರಶ್ನೆ ಮಾಡಿದ್ದೇನೆ. ಆದಕ್ಕೆ ಇದುವರೆಗೂ ಉತ್ತರವಿಲ್ಲ. ೇತ್ರದ ಅಭಿವೃದ್ಧಿ ಬಗ್ಗೆ ನನಗೆ ಯಾರು ಸಹಕಾರ ಕೊಟ್ಟಿದ್ದಾರೆ, ಯಾರು ಅಡ್ಡಿ ಮಾಡಿದ್ದಾರೆ ಎಲ್ಲ ಗೊತ್ತಿದೆ. ಅದನ್ನು ನಿಮ್ಮೂರಿಗೆ ಬಂದು ಹೇಳುವೆ ಎಂದು ಎಚ್ಚರಿಕೆ ನೀಡಿದರು.
ಬಸರೆಡ್ಡಿ ಅನಪುರ ಲಂಚದ ಲೆಕ್ಕ ನನ್ನಲ್ಲಿದೆ
ನಮ್ಮ ಶಾಸಕರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯ ಬಸರಡ್ಡಿ ಅನಪುರ ಆರೋಪ ಮಾಡಿದ್ದಾರೆ. ಅವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ, ಅವರು ನಂಬುವ ದೇವರಗುಡಿಗೆ ಬಂದು ಆಣೆ, ಪ್ರಮಾಣ ಮಾಡುವೆ, ಆದರೆ ನೀವು ಬರುತ್ತೀರಾ? ಎಂದು ಜಿಲ್ಲಾಧ್ಯ ಸುಭಾಶಷಂದ್ರ ಕಟಕಟಿ ಖಾರವಾಗಿ ಸವಾಲು ಹಾಕಿದರು. ಅಭಿವೃದ್ಧಿ ಕೆಲಸಗಳ ಮೂಲಕ ಮತ್ತು ರಾಜ್ಯದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಮೂಲಕ ಎತ್ತರಕ್ಕೆ ಬೆಳೆಯುತ್ತಿರುವ ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಮತ್ತು ಮೊದಲು ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುವುದನ್ನು ಕಲಿಯರಿ ಎಂದು ಕಟಕಟಿ ಜರಿದರು. ಬಸರಡ್ಡಿ ಅವರೇ ನೀವು ಎಷ್ಟು ಲಂಚ ತಿನ್ನುತ್ತಿದ್ದೀರಿ ಎಂಬ ಅಂಕಿ&ಅಂಶ ನಮ್ಮ ಬಳಿ ಇದೆ. ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ನಲ್ಲಿ ಎಂಟೆಂಟು ಬಾಗಿಲು, ಹತ್ತೇಂಟು ಗುಂಪುಗಳಾಗಿವೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬಾಬುರಾವ ಚಿಂಚನಸೂರ್ ಸ್ಪರ್ಧೆ ಮಾಡಿದರೆ ಮಾತ್ರ ನಿಮ್ಮ ಗೌರವ ಉಳಿಯುತ್ತದೆ. ಇಲ್ಲದಿದ್ದರೆ, ಕಾಂಗ್ರೆಸ್ನ ಡೆಪಾಸಿಟ್ ಜಪ್ತಿಯಾಗಿ ಪವನ್ನು ಟಾರ್ಚ್ ಹಾಕಿ ಹುಡುಕುವ ಸ್ಥಿತಿ ಎದುರಾಗುತ್ತದೆ ಎಂದ ಅವರು, ಚಿಂಚನಸೂರ್ ಸ್ಪರ್ಧೆಗೆ ಕಾಂಗ್ರೆಸ್ನ ಕೆಲ ಸ್ಥಳಿಯ ನಾಯಕರಿಗೆ ಮನಸ್ಸಿಲ್ಲ ಎಂದು ಆ ಪಕ್ಷದ ಕಾರ್ಯಕರ್ತೆರೇ ಹೇಳುತ್ತಿದ್ದಾರೆಂದು ಕಟಕಟಿ ಕಾಲೆಳೆದರು.
ರಾಜ್ಯದಲ್ಲಿಯೇ ಗುರುಮಠಕಲ್ ಪ್ರಥಮ
ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಕಾರ್ಯದಲ್ಲಿ ರಾಜ್ಯದಲ್ಲಿಯೇ ಗುರುಮಠಕಲ್ ಮತಕ್ಷೇತ್ರ ಪ್ರಥಮ ಸ್ಥಾನದಲ್ಲಿದೆ. 40ಸಾವಿರಕ್ಕೂ ಅಧಿಕ ಸದಸ್ಯತ್ವ ಮಾಡಿಸಲಾಗಿದೆ. ಇದು ನಮ್ಮ ಶಾಸಕರ ನಿರಂತರ ಓಡಾಟ ಮತ್ತು ಅಭಿವೃದ್ಧಿ ಕೆಲಸಗಳಿಂದಲೇ ಸಾಧ್ಯವಾಗಿದೆ. ಕಳೆದ 39 ದಿನಗಳಲ್ಲಿ ಕ್ಷೇತ್ರದಲ್ಲಿ 12 ಸಾವಿರ ಕಿಮೀ ಸಂಚರಿಸಿ ಕಾರ್ಯಕರ್ತರ ಸುಖ&ದುಖ@ಗಳಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ ಹೇಳಿದರು.