ದೇವನಹಳ್ಳಿ ಶ್ರೀವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಸಂಘದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಡಬಲ್ಸ್ ಶೆಟಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ವಿಜೇತರಾದವರಿಗೆ ಕ್ರೀಡಾಂಗಣದ ಅಧ್ಯಕ್ಷ ಕೆ.ಮಂಜು ಬಹುಮಾನ ವಿತರಿಸಿದರು. ಶ್ರೀವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದ ಮಾಜಿ ಅಧ್ಯಕ್ಷ ಡಿ.ಎಂ.ವೇಣುಗೋಪಾಲ್, ಅಂತಾರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳಾದ ಸದ್ರುಹುಸೇನ್, ಗೋಪಾಲ್ ಇದ್ದರು.
ದೇವನಹಳ್ಳಿ : ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸಲು ನುರಿತ ಕ್ರೀಡಾಪಟುಗಳಿಂದ ಸಂಘದಿಂದ ನಿತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದ ಅಧ್ಯಕ್ಷ ಕೆ.ಮಂಜು ಹೇಳಿದರು.
ಪಟ್ಟಣದ ಶಾಂತಿನಗರದಲ್ಲಿರುವ ಶ್ರೀವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಸಂಘದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಡಬಲ್ಸ್ ಶೆಟಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಯುವ ಪ್ರತಿಭೆಗಳು ಸೋಲು&ಗೆಲುವಿನ ಬಗ್ಗೆ ಚಿಂತಿಸದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದರು.
ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದ ಮಾಜಿ ಅಧ್ಯಕ್ಷ ಡಿ.ಎಂ.ವೇಣುಗೋಪಾಲ್ ಮಾತನಾಡಿ, ಯುವಕರು ದುಶ್ಚಟಗಳಿಗೆ ದಾಸರಾಗದೆ ಏಕಾಗ್ರತೆಯಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಾಗ ಪ್ರತಿಭೆ ಹೊರಬರಲು ಸಾಧ್ಯ ಎಂದರು.
14 ಮತ್ತು 16 ವಯೋಮಾನದ ಜಿಲ್ಲಾಮಟ್ಟದ ಡಬಲ್ಸ್ ಶೆಟಲ್ ಬ್ಯಾಡ್ಮಿಂಟನ್ನಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿದ್ದು, ದೇವನಹಳ್ಳಿ ತಂಡ ಪ್ರಥಮ, ಚಿಕ್ಕಬಳ್ಳಾಪುರ ದ್ವೀತಿಯ, ದೊಡ್ಡಬಳ್ಳಾಪುರ ತಂಡ ತೃತೀಯ ಸ್ಥಾನ ಪಡೆದಿದ್ದಾರೆ. ಶ್ರೀವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘದ ಉಪಾಧ್ಯಕ್ಷ ಅಣ್ಣೆ, ಖಜಾಂಚಿ ಧನಂಜಯ್, ಕಾರ್ಯದರ್ಶಿ ಅಂಬರೀಶ್ ಇತರರು ಇದ್ದರು.