Participate in sports and maintain your health.
ತಾಲೂಕಿನ ಕೈವಾರದ ಕೆಪಿಎಸ್ ಶಾಲೆ ಆವರಣದಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸುಮಾರು 15 ತಂಡ ಭಾಗವಹಿಸಿತ್ತು.
ಪಂದ್ಯಾವಳಿಗೆ ಚಾಲನೆ ನೀಡಿ ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದು, ಯುವಕರು ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಚಿಂತಾಮಣಿ 'ರಾಕಿ ಬಾಯ್ಸ್' ತಂಡವು ಪ್ರಥಮ ಸ್ಥಾನ ಪಡೆದು 80,000 ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿತು, ದ್ವೀತಿಯ ಬಹುಮಾನ 40,000 ಟೀಮ್ ಬಾಹುಬಲಿ, ಕೈವಾರ ತೃತೀಯ ಬಹುಮಾನ 20000 ಕಾರ್ತಿಕ್ ಆ್ಯಂಡ್ ಟೀಮ್ ಬೆಂಗಳೂರು, ನಾಲ್ಕನೇ ಬಹುಮಾನ 10000 ಸಾವಿರ ಟೀಮ್ ಪಾಟಲಿಪುರ.
ಗ್ರಾಮೀಣ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಅಗತ್ಯವಿದೆ, ಚಿಂತಾಮಣಿ ನಗರದ ರನ್ಸಿ ಕ್ರೀಡಾಂಗಣದಲ್ಲಿ 9.10 ಕೋಟಿ ರೂ. ವೆಚ್ಚದಲ್ಲಿ ಸಿಂಥೆಟಿಕ್ ಟ್ರಾ$್ಯಕ್, ಪೆವಿಲಿಯನ್, ವಾಲಿಬಾಲ್ ಹಾಗೂ ಬಾಸ್ಕೆಟ್ಬಾಲ್ ಕ್ರೀಡಾಂಗಣದ ಕಾಮಗಾರಿ ಪ್ರಗತಿಯಲ್ಲಿವೆ. ನಗರದ ಸೊಣ್ಣಶೆಟ್ಟಿಹಳ್ಳಿಯ 9 ಎಕರೆ ವಿಸ್ತೀರ್ಣದಲ್ಲಿ 15 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣವಾಗುತ್ತಿದ್ದು, ಪಿಎಲ್ಡಿ ಬ್ಯಾಂಕ್ ಕಟ್ಟಡ ಜಾಗದಲ್ಲಿ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತದೆ ಎಂದರು.