Participate in sports activities to improve concentration.
ಆಟ-& ಪಾಠ ಒಂದೇ ನಾಣ್ಯದ ಎರಡು ಮುಖಗಳು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಏಕಾಗ್ರತೆ, ಸ್ವಂತ ಆಲೋಚನೆ ವೃದ್ಧಿಸುವುದರಿಂದ ಮಾನಸಿಕ, ದೈಹಿಕವಾಗಿ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿಮೆಂಟ್ ನಾರಾಯಣಸ್ವಾಮಿ ಸಲಹೆ ನೀಡಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ದೇಶದ ಬೆನ್ನೆಲುಬಾದ ವಿದ್ಯಾರ್ಥಿಗಳು ಕೆಟ್ಟ ಹವ್ಯಾಸಗಳಿಗೆ ತಮ್ಮ ಅಮೂಲ್ಯ ಜೀವನ ಬಲಿಕೊಡದೆ ಆರೋಗ್ಯವಂತ ಜೀವನವನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಗಡಿಸಿಕಿಕೊಂಡು ಉತ್ತಮ ಸಾಧನೆ ಮೂಲಕ ದೇಶದ ಘನತೆ ಕಾಪಾಡಬೇಕು ಎಂದು ಹೇಳಿದರು.
ಪ್ರಾಂಶುಪಾಲ ಪಿ.ಗಣೇಶ್ ಮಾತನಾಡಿ ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಛಲ ಇರುತ್ತದೆ. ಕಲಿಯಬೇಕೆಂಬ ಉತ್ಸಾಹ ಇರುತ್ತದೆ. ಅವರು ಪ್ರತಿಭೆಗಳಾಗಿದ್ದಾರೆ. ಅವರಿಗೆ ಒಳ್ಳೆಯ ಮಾರ್ಗದರ್ಶನನೀಡಿದರೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದುಬರುವ ಶಕ್ತಿ ಅವರಲ್ಲಿ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ ಮಾತನಾಡಿ, ಹಿಂದಿನ ಗ್ರಾಮೀಣ ಕ್ರೀಡೆಗಳಲ್ಲಿ ದ್ವೇಷ, ಅಸೂಯೆ, ಸೇಡು ಎಂಬುವುದೇ ಇರುತ್ತಿರಲ್ಲಿಲ್ಲ. ಬದಲಾಗಿ ಪರಸ್ಪರ ಪ್ರೀತಿ, ಒಗ್ಗಟಿನ ಬಲ, ಏಕಾಗ್ರತೆ, ಕ್ರಿಯಾಶೀಲತೆ, ಬುದ್ದಿವಂತಿಕೆ ಚುರುಕುಗೊಳಿಸುವಕ್ರೀಡೆಗಳಿಂದ ಕೂಡಿದ್ದವು ಎಂದು ತಿಳಿಸಿದರು .
ಟಿಪಿಒ ಆದಿನಾರಾಯಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಆರ್.ವಿ.ನರೇಶ್, ಉಪನ್ಯಾಸಕ ಎಂ.ಜಿ.ಗಿರೀಶ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಶೈಲ್ಹಲವಾರ್, ಶಿಕ್ಷಕ ಶ್ರೀನಾಥ್ , ಟಿ.ವೆಂಕಟರಮಣಪ್ಪ, ಆಂಜನೇಯ, ಸಿಆರ್ಪಿಗಳಾದ ಶಿವರಾಘವರೆಡ್ಡಿ, ಜಯರಾಮರೆಡ್ಡಿ, ಅಥಿತಿ ಉಪನ್ಯಾಸಕರಾದ ರಘುನಾಥರೆಡ್ಡಿ, ಯುಗಂದರ್, ಅಥಿತಿ ಶಿಕ್ಷಕರಾದ ಗೀತಾ, ಶಿವಮ್ಮ ಹಾಗೂದೈಹಿಕ ಶಿಕ್ಷಕರು ಇದ್ದರು.