ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಿರಿ sports
- ಶಾಸಕಿ ರೂಪಕಲಾ ಕರೆ
- ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಕೆಜಿಎಫ್: ಯುವ ಸಮೂಹ ಎಂದರೆ ಉತ್ಸಾಹ, ಸಾಹಸ, ಚೈತನ್ಯ, ಮಹತ್ವಾಕಾಂಕ್ಷೆಯಾಗಿದ್ದು, ಪ್ರತಿಯೊಬ್ಬರು ಕ್ರೀಡಾ ಮನೋಭಾವದಿಂದ ಕ್ರೀಡೆಯನ್ನು ಸ್ವೀಕರಿಸಬೇಕು ಎಂದು ಶಾಸಕಿ ರೂಪಕಲಾ ಹೇಳಿದರು. sports
ಕೆಜಿಎಫ್‌ನ ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂ ಬೆಂಗಳೂರು, ಕೆಜಿಎಫ್ ತಾಲೂಕು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 14 ಮತ್ತು 17 ವರ್ಷದ ವಯೋಮಿತಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಬಾಲಕ ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಸ್ಪರ್ಧಾಳುಗಳು ಸೋಲು-ಗೆಲುವನ್ನು ಸವಾನವಾಗಿ ಸ್ವೀಕರಿಸಿ ತೀರ್ಪುಗಾರರ ತೀರ್ಪನ್ನು ಗೌರವಿಸಬೇಕು. ತೀರ್ಪುಗಾರರು ಕೂಡ ನ್ಯಾಯಯುತ ನಿರ್ಧಾರ ನೀಡಿ ನಿಜವಾದ ಪ್ರತಿಭಾವಂತರನ್ನು ಉತ್ತೇಜಿಸಬೇಕೆಂದು ತಿಳಿಸಿದರು.
ಕೋಲಾರ ಜಿಲ್ಲೆಯ ಚಿನ್ನದ ನಾಡಿನ ಈ ಮಣ್ಣಿಗೆ ಪುರಾತನ ಇತಿಹಾಸವಿದ್ದು, ಈ ಮಣ್ಣಿನಲ್ಲಿ ಜಾನಪದ ಪರಂಪರೆ, ಸಂಸ್ಕೃತಿಯ ಗಾಢ ಮೌಲ್ಯಗಳಿವೆ. ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಯುವ ಪ್ರತಿಭೆಗಳು ಈ ನೆಲದ ಅಸ್ಮಿತೆಯ ಪರಂಪರೆ, ಸಾಂಸ್ಕೃತಿಕ ಶಕ್ತಿಯನ್ನು ಮನಸ್ಸಿನಲ್ಲಿ ಸದಾ ನೆನೆಸಿಕೊಳ್ಳಬೇಕು ಎಂದರು.
ಉಪನಿರ್ದೇಶಕ ಪರ್ವಿನ್ ತಾಜ್ ವಾತನಾಡಿ, ಜಿಲ್ಲೆಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಕೂಟ ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿರುವ ಮಕ್ಕಳು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣಾ ಇಲಾಖೆಯ ಅಧಿಕಾರಿ ಚಂದ್ರಶೇಖರ್ ವಾತನಾಡಿ, ಮಕ್ಕಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಪ್ರತಿ ಕ್ಷಣವನ್ನು ಆನಂದಿಸಬೇಕು ಎಂದರು.
ಸ್ಪರ್ಧೆಯಲ್ಲಿ ತುಮಕೂರು, ಶಿವಮೊಗ್ಗ, ಬೆಂಗಳೂರು ಗ್ರಾವಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 33 ತಂಡಗಳ ಆಟಗಾರರು ರಾಜ್ಯ ಮಟ್ಟದ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಿಇಒ ಅನಿತಾ, ಜಿಲ್ಲಾ ದೈಹಿಕ ಶಿಕ್ಷಕರ ಸಂದ ಅಧ್ಯಕ್ಷ ಮುರಳಿ ಮೋಹನ್, ಕೆಜಿಎಫ್ ತಾಲೂಕಿನ ಅಧ್ಯಕ್ಷ ಆರ್.ನಾಗರಾಜ್, ಜಿಲ್ಲಾ ದೈಹಿಕ ಶಿಕ್ಷಕರ ಸಂದ ಅಧ್ಯಕ್ಷ ಬಾಬು, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂದ ಅಧ್ಯಕ್ಷ ಪಿ.ವಿ.ಶ್ರೀನಿವಾಸ್, ಬಡ್ತಿ ಮುಖ್ಯ ಶಿಕ್ಷಕರ ಸಂದ ಶ್ರೀನಿವಾಸ್, ಸೋಮಶೇಖರ್, ಕೃಷ್ಣಮೂರ್ತಿ ಇದ್ದರು.