ದೊಡ್ಡಬಳ್ಳಾಪುರದ ಕೆಂಪೇಗೌಡನಗರದಲ್ಲಿ ಸಿಎಸ್​ಆರ್​ ನಿಧಿಯಡಿ ಅಭಿವೃದ್ಧಿಪಡಿಸಿದ ಉದ್ಯಾನವನ್ನು ಶಾಸಕ ಧೀರಜ್​ ಮುನಿರಾಜು ಲೋಕಾರ್ಪಣೆ ಮಾಡಿದರು. ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್​, ನಗರಸಭೆ ಉಪಾಧ್ಯಕ್ಷ ಮಲ್ಲೇಶ್​, ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಫಾಕ್ಸ್​ಕಾನ್​ ಕಂಪನಿಯ ಕ್ಯಾಂಪಸ್​ ತಂಡದ ಮುಖ್ಯಸ್ಥ ಜೇಸನ್​, ಆರ್​.ಎಸ್​.ಎಂ ಮುಖ್ಯಸ್ಥ ಶ್ಲೀಫ್​ ಇದ್ದರು. 
ರಾಜ್ಯ

5 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ / DODABALLAPUR

ದೊಡ್ಡಬಳ್ಳಾಪುರ : ಪ್ರತಿಯೊಂದು ವಾರ್ಡ್​ಗಳಲ್ಲಿಯೂ ಉದ್ಯಾನವನ ಅಭಿವೃದ್ಧಿ ಮಾಡುವುದರಿಂದ ಆಯಾ ಭಾಗದ ಜನತೆಗೆ ವೃದ್ಧರಿಗೆ ವಾಕಿಂಗ್​ ಮತ್ತು ಕೆಲಕಾಲ ಸ್ನೇಹಿತರೊಂದಿಗೆ ಕಾಲಕ್ಷೇಪ ಮಾಡಲು ಅನುಕೂಲವಾಗುತ್ತದೆ ಎಂದು ಶಾಸಕ ಧೀರಜ್​ ಮುನಿರಾಜು ಹೇಳಿದರು.
ನಗರದ ಕೆಂಪೇಗೌಡರ ನಗರದಲ್ಲಿ ಬುಧವಾರ ಫಾಕ್ಸ್​ಕಾನ್​ ಸಿಎಸ್​ಆರ್​ ನಿಧಿಯಡಿ ನೂತನವಾಗಿ ಅಭಿವೃದ್ಧಿಪಡಿಸಿದ ಉದ್ಯಾನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಾಗರಕೆರೆ ಅಭಿವೃದ್ಧಿಗೂ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಫಾಕ್ಸ್​ಕಾನ್​ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷ ಮಲ್ಲೇಶ್​ ಮಾತನಾಡಿ, ತಾಲೂಕಿನಲ್ಲಿ ವಿವಿಧ ಕಂಪನಿಗಳು ತಲೆಎತ್ತುತ್ತಿವೆ. ನಿಯಾಮನುಸಾರ ಕಂಪನಿಗಳು ಸಿಎಸ್​ಆರ್​ ನಿಧಿಯನ್ನು ತೆಗೆದಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಂದು ಏಳನೇ ವಾರ್ಡ್​ನಲ್ಲಿ 5 ಲಕ್ಷ ರೂ. ಮೊತ್ತದಲ್ಲಿ ಪಾಳುಬಿದ್ದ ಜಾಗದಲ್ಲಿ ಸುಂದರ ಉದ್ಯಾನವನ ಅಭಿವೃದ್ಧಿಪಡಿಸಲಾಗಿದೆ. ನಗರಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ನಗರಸಭೆಯಿಂದ ಯಾವುದೇ ಷರತ್ತುಗಳಿಲ್ಲದೆ ಕಂಪನಿಗಳ ಜತೆ ಕೈಜೋಡಿಸಿ ಕೆಲಸ ಮಾಡಲಾಗುವುದು ಎಂದರು.
ಪಿಆರ್​ಒ ಮಧುಮಿತ, ಸಿಬ್ಬಂದಿ ಭರತ್​ ದಂಡಿ, ಪರ್ಲ್​, ಕೃಷ್ಣಪ್ರಸಾದ್​, ರಾಮಕೃಷ್ಣ, ಉದ್ಯಾನವನ ಅಭಿವೃದ್ಧಿ ಪಡಿಸಿದ ರೇಣುಕಾ ಪ್ರಸಾದ್​ ಇದ್ದರು.