ಸವದತ್ತಿಯ ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾರೋಪ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮನ್ನು ಡಾ.ಎಸ್.ಬಿ.ತಟಗಾರ ಉದ್ಘಾಟಿಸಿದರು. ಡಾ.ಮಾರುತಿ ಎಂ., ಶಕುಂತಲಾ ಅಜ್ಜನ್ನವರ, ರೂಪಾ ವಸ್ತ್ರದ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವದತ್ತಿ
ವಿದ್ಯಾರ್ಥಿಗಳು ಹೆತ್ತವರ ತ್ಯಾಗ, ಶ್ರಮ ಹಾಗೂ ನಿರೀೆ ಅರಿತು ಉತ್ತಮ ಶಿಣ ಪಡೆದು ಸಮಾಜದಲ್ಲಿ ಮಾದರಿಯ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ.ಮಾರುತಿ ಎಂ. ಹೇಳಿದರು.
ನಗರದ ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ 2025&26ನೇ ಶೈಣಿಕ ಸಾಲಿನ ಸಾಂಸತಿಕ, ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಸ್&ಗೈಡ್ಸ್, ಯುವ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿ
ಕೆಗಳ ಸಮಾರೋಪ ಸಮಾರಂಭ ಮತ್ತು ಬಿಎ., ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಗುರಿನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಣ ನಿರ್ದೇಶಕ ಡಾ.ಎಸ್.ಬಿ.ತಟಗಾರ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಮೌಲ್ಯ ಅರಿತು ಆತ್ಮವಿಶ್ವಾಸದಿಂದ ಗುರಿ ಸಾಧನೆಗೆ ಮುಂದಾಗಬೇಕು ಎಂದರು.
ಸಿಡಿಸಿ ಸದಸ್ಯೆ ಭಾಗೀರಥಿ ಹಿರೇಮಠ, ಡಾ.ಶಕುಂತಲಾ ಅಜ್ಜನ್ನವರ, ಬಸವರಾಜ ವರದನ್ನವರ, ನಿರ್ಣಾಯಕಿ ರೂಪಾ ವಸ್ತ್ರದ ಮಾತನಾಡಿದರು. ಕಿರಣ ಇಜಂತಕರ, ಭಾಗೀರಥಿ ಹಿರೇಮಠ, ಡಾ.ಮಂಜುನಾಥ ಚಲವಾದಿ, ಪ್ರೊ.ಶಿವಾನಂದ ಹಾಲ್ಗೊಳ್ಳಿ, ಡಾ.ಕೆ.ಬಿ. ಬಾಳಿಕಾಯಿ,ಪ್ರೊ.ಎಂ.ಜಿ. ಪುರಾಣಿಕಮಠ, ಡಾ.ಬಿ.ಸಿ.ನಿಡಗುಂದಿ, ಡಾ.ಎಂ.ಜಿ.ನಾಶಿಪುಡಿ, ಪ್ರೊ.ಸೌಮ್ಯ ಸಿ., ವಿನಿತಾ ಹುಲಮನಿ, ಅಭಿಷೇಕ ಕೌಜಲಗಿ ಹಾಗೂ ಗಣ್ಯರು ಇದ್ದರು.