ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸಲಿ children 
ರಾಜ್ಯ

ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸಲಿ children

ಕೆಜಿಎಫ್​: ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳು ಎಲ್ಲಿಗೆ ಹೋಗುತ್ತಾರೆ. ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮಾಡಬೇಕು. ಮಕ್ಕಳೊಂದಿಗೆ ಸಮಯ ಕಳೆಯಬೇಕೆಂದು ಡಿವೈಎಸ್​ಪಿ ಲಕ್ಷ$್ಮಯ್ಯ ತಿಳಿಸಿದರು.children
ನಗರದ ಕಿಂಗ್​ಜಾರ್ಜ್​ ಹಾಲ್​ ಸಭಾಂಗಣದಲ್ಲಿ ಗ್ರಾಂಡ್​ ರಯಾನ್​ ರೈನಾಸ್​ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿಬಿಟ್ಟರೆ ಅವರನ್ನು ಶಿಕ್ಷಕರು ನೋಡಿಕೊಳ್ಳುತ್ತಾರೆ ಎಂದು ಕೊಳ್ಳುವುದು ತಪು$್ಪ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯೆ, ಶಿಸ್ತು ಕಲಿಸುತ್ತಾರೆ. ಆದರೆ ಪಾಲಕರು ಮಕ್ಕಳಿಗೆ ಸಂಸತಿ, ಆಚಾರ&ವಿಚಾರ, ಸಂಪ್ರದಾಯ ಕಲಿಸುವುದು ಹೊಣೆಗಾರಿಕೆಯಾಗಿರುತ್ತದೆ ಎಂದು ಹೇಳಿದರು.
ಯುವ ಪೀಳಿಗೆ ಡ್ರಗ್ಸ್​ ಎಂಬ ಪಿಡುಗಿಗೆ ಬಲಿಯಾಗಿ ಹಾದಿ ತಪು$್ಪತ್ತಿದೆ. ಮಕ್ಕಳ ಮೇಲಿನ ಅತಿಯಾದ ಪ್ರೀತಿ ಕೈಬಿಟ್ಟು ಅವರನ್ನು ಸರಿ ದಾರಿಯಲ್ಲಿ ಸಾಗುವಂತೆ ತಿಳಿ ಹೇಳಬೇಕು ಎಂದರು.
ಸಣ್ಣ ವಯಸ್ಸಿನಲ್ಲೇ ಡ್ರಗ್ಸ್​ ನಶೆಯಲ್ಲಿ ಕೊಲೆಯಂತಹ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಆತಂಕಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.
ಶಾಲಾ ಆಡಳಿತ ಮಂಡಳಿ ತ್ಯಾಗರಾಜ್​ ಮಾತನಾಡಿ, ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಪಾಲಕರು ಶಿಕ್ಷಕರೊಂದಿಗೆ ಸಹಕರಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿ ಕೈಕಟ್ಟಿ ಕುಳಿತುಕೊಳ್ಳದೆ ಮಕ್ಕಳ ನಡವಳಿಕೆ ಬಗ್ಗೆ, ಅವರ ವರ್ತನೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕರಿಸಬೇಕು ಎಂದರು.