ಸಂಗೀತಾ ಕಟ್ಟಿಗೆ ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ 
ರಾಜ್ಯ

ಆ.2ಕ್ಕೆ ಪಂ.ಶೇಷಾದ್ರಿ ಗವಾಯಿ ಸಂಗೀತೋತ್ಸವ; ಸಂಗೀತಾ ಕಟ್ಟಿಗೆ ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಆ.2ಕ್ಕೆ ಪಂ.ಶೇಷಾದ್ರಿ ಗವಾಯಿ ಸಂಗೀತೋತ್ಸವ
  • ಸಂಗೀತಾ ಕಟ್ಟಿಗೆ ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ
  • ಕಾರ್ಯಕ್ರಮದಲ್ಲಿ ಕತಕ್ ನೃತ್ಯ, ಸಂಗೀತ ಪ್ರದರ್ಶನ

ಬೆಂಗಳೂರು: ಶ್ರೀಗುರುಕುಮಾರ ಪಂಚಾಕ್ಷರೇಶ್ವರಸಂಗೀತ ಕಲಾ ವೇದಿಕೆಯು ಪಂ.ಶೇಷಾದ್ರಿಗವಾಯಿ ಸಂಗೀತೋತ್ಸವ ಹಾಗೂ ಪಂಚಾಕ್ಷರಕೃಪಾಭೂಷಣ ಪ್ರಶಸ್ತಿ ಪ್ರದಾನಸಮಾರಂಭವು ಆ.2ಕ್ಕೆ(ಭಾನುವಾರ)ನಡೆಯಲಿದೆ.

ಅಂದುಮದ್ಯಾಹ್ನ 2ರಿಂದ ಚಾಮರಾಜಪೇಟೆಯ ಕನ್ನಡ ಸಾಹಿತ್ಯಪರಿಷತ್ತು ಸಭಾಂಗಣದಲ್ಲಿ ಕಾರ್ಯಕ್ರನಆರಂಭವಾಗಲಿದ್ದು,ಸಂಜೆ 6ಕ್ಕೆಸಭಾ ಕಾರ್ಯಕ್ರಮ ನಡೆಯಲಿದೆ.ಖ್ಯಾತ ಹಿಂದೂಸ್ತಾನಿಗಾಯಕಿ ವಿದುಷಿ ಸಂಗೀತಾ ಕಟ್ಟಿಕುಲಕರ್ಣಿ ಅವರಿಗೆ ಪಂಚಾಕ್ಷರಕೃಪಾ ಭೂಷಣ ಪ್ರಶಸ್ತಿ ನೀಡಿಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿಶ್ರೀ ಕರುಣೇಶ್ವರ ಶಿವಾಚಾರ್ಯಸ್ವಾಮೀಜಿ ಸಾನಿಧ್ಯ ವಹಿಸಲಿದ್ದು,ಭಾರತಿದೇವಿರಾಜಗುರು ಪ್ರಶಸ್ತಿ ಪ್ರದಾನಮಾಡಲಿದ್ದಾರೆ.ತಬಲಾ ವಾದಕಪಂ.ಸತೀಶ್ಹಂಪಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿವಿದುಷಿ ಪೂರ್ಣ ಆಚಾರ್ಯ ಮತ್ತುತಂಡದವರಿಂದ ಕಥಕ್ ನೃತ್ಯ ಪ್ರದರ್ಶನ,ವಿದುಷಿ ಸಂಗೀತಾಕಟ್ಟಿ ಕುಲಕರ್ಣಿ ಅವರಿಂದಹಿಂದೂಸ್ತಾನಿ ಗಾಯನ ನಡೆಯಲಿದೆ.ವಾದ್ಯ ಸಹಕಾರದಲ್ಲಿಪಂ. ರಾಜೇಂದ್ರನಾಕೋಡ್, ಪಂ.ಸತೀಶ್ ಕೊಳ್ಳಿಮತ್ತಿತರು ಭಾಗಿಯಾಗಲಿದ್ದಾರೆಎಂದು ಸಂಸ್ಥೆಯ ಅಧ್ಯಕ್ಷ ವಿದ್ವಾನ್ನಾಗೇಂದ್ರ ರಾಣಾಪೂರ್ ತಿಳಿಸಿದ್ದಾರೆ.