ಅಫಜಲಪುರದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಕಾಶಿ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಹಜರತ್ ದಾವಲ್ಮಲೀಕ್ ಮಲ್ಲಿಕಾರ್ಜುನ ಮುತ್ಯಾ, ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಶ್ರೀ ಶ್ರೀಕಂಠ ಶಿವಾಚಾರ್ಯ, ಶ್ರೀ ಕೈಲಾಸಲಿಂಗ ಶಿವಾಚಾರ್ಯ, ಶ್ರೀ ಮರುಳಾರಾಧ್ಯ ಶಿವಾಚಾರ್ಯ, ಮಾಲೀಕಯ್ಯ ಗುತ್ತೇದಾರ್, ಜ್ಯೋತಿ ಪಾಟೀಲ್ ಇದ್ದರು.
- ಶ್ರೀ ಶ್ರೀಶೈಲ ಜಗದ್ಗುರುಗಳು ನುಡಿ
- ಅಫಜಲಪುರದಲ್ಲಿ ಸಾಮೂಹಿಕ ವಿವಾಹ ಸಮಾರಂಭ
ಅಫಜಲಪುರ: ಪಂಚಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರುವ ಮೂಲಕ ದೇಶದಲ್ಲಿ ಸಹೋದರತೆಯ ಭಾವವನ್ನು ಬೆಸೆಯುತ್ತಿವೆ ಎಂದು ಕಾಶಿ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ಜಹಾಗಿರದಾರ್ ಫಂನ್ ಹಾಲ್ನಲ್ಲಿ ಹಜರತ್ ಮಲ್ಲಿಕಾರ್ಜುನ ದಾವಲ್ಮಲೀಕ್ ಮುತ್ಯಾ ಅವರಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹಗಳಿಂದ ಎರಡು ಜೋಡಿಗಳನ್ನು ಒಂದು ಮಾಡುವುದರ ಜತೆಗೆ ಸಮಾಜದಲ್ಲಿ ಸೌಹಾರ್ದತೆ ಬೆಳೆಸಿದಂತಾಗುತ್ತದೆ. 84 ಲ ಕೋಟಿ ಜೀವರಾಶಿಗಳ ನಂತರ ಭಗವಂತನು ಕರುಣಿಸಿರುವ ಶ್ರೇಷ್ಠ ಮಾನವ ಜೀವನವನ್ನು ಪರೋಪಕಾರಿ ಕಾರ್ಯಕ್ಕೆ ತೊಡಗಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಶಾಂತಿ ಮಂತ್ರದಿಂದ ಎಲ್ಲವನ್ನು ಗೆಲ್ಲಬಹುದಾಗಿದೆ. ಯುದ್ಧದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿರುವ ವಿವಿಧ ಧರ್ಮಗಳ ಆಚರಣೆ, ತತ್ವ, ಸಿದ್ಧಾಂತ ಬೇರೆ&ಬೇರೆಯಾಗಿದ್ದರೂ ಸಾರುವ ಸಂದೇಶ ಒಂದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳು ದೇಹ ಎರಡಾದರೂ ಆತ್ಮ ಒಂದಾಗಿ ಆದರ್ಶಪ್ರಾಯವಾದ ಜೀವನ ಸಾಗಿಸಬೇಕು. ತಂದೆ&ತಾಯಿಯರ ಸೇವೆ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಹಜರತ್ ದಾವಲ್ಮಲೀಕ್ ಮಲ್ಲಿಕಾರ್ಜುನ ಮುತ್ಯಾ, ಶ್ರೀ ಶ್ರೀಕಂಠ ಶಿವಾಚಾರ್ಯ, ಶ್ರೀ ಕೈಲಾಸಲಿಂಗ ಶಿವಾಚಾರ್ಯ, ಶ್ರೀ ಮರುಳಾರಾಧ್ಯ ಶಿವಾಚಾರ್ಯ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಪ್ರಮುಖರಾದ ಚಂದ್ರಶೇಖರ ಕರಜಗಿ, ಜ್ಯೋತಿ ಪಾಟೀಲ್, ಮಕ್ಬುಲ್ ಪಟೇಲ್, ಮಳೇಂದ್ರ ಡಾಂಗೆ, ಲಚ್ಚಪ್ಪ ಜಮಾದಾರ, ಶಂಕರ ಮ್ಯಾಕೇರಿ, ಪ್ರಭಾವತಿ ಮೇತ್ರಿ, ಶ್ರೀಮಂತ ನಾಗೂರ, ಕೆ.ಜಿ.ಪೂಜಾರಿ, ಎಂ.ಎಲ್.ಪಟೇಲ್, ಮಹಾಂತೇಶ ಪಾಟೀಲ್, ಬಾಬುಮಿಯಾ ಫುಲಾರಿ, ಪ್ರಕಾಶ ಟೊಣ್ಣೆ ಇತರರಿದ್ದರು.
ನಾಲ್ಕು ಜೋಡಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದವು.