Owner fined Rs. 50,000 for showing arrogance 
ರಾಜ್ಯ

ದರ್ಪ ತೋರಿದ ಮಾಲೀಕನಿಗೆ 50 ಸಾವಿರ ದಂಡ

ಚಿಂತಾಮಣಿ: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್​ ಬಳಕೆ, ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ ವರ್ತಕನಿಗೆ ನಗರಸಭೆ ಅಧಿಕಾರಿಗಳು 50 ಸಾವಿರ ದಂಡ ವಿಧಿಸಿದ್ದಾರೆ.
"

ಕಾನೂನು ಕ್ರಮ

ಗರವನ್ನು ಪ್ಲಾಸ್ಟಿಕ್​ ಮುಕ್ತಗೊಳಿಸುವುದು ಪ್ರತಿಯೊಬ್ಬ ನಾಗರಿಕರು, ವರ್ತಕರ ಜವಾಬ್ದಾರಿ. ಅಧಿಕಾರಿಗಳು ಕಾನೂನು ಪಾಲನೆಗೆ ಬಂದಾಗ ಅವರ ಮೇಲೆ ದೌರ್ಜನ್ಯ ಎಸಗುವುದನ್ನು ಸಹಿಸುವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದು ಪೌರಾಯುಕ್ತ ಚಲಪತಿ ತಿಳಿಸಿದರು.

ನಗರದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್​ ಮುಕ್ತ ಅಭಿಯಾನ ಅಂಗವಾಗಿ ನಗರಸಭೆ ಆರೋಗ್ಯ ನಿರೀಕ್ಷಕರು, ಸಿಬ್ಬಂದಿ ತಂಡ ದಾಳಿ ನಡೆಸಿ ತಪಾಸಣೆ ಕೈಗೊಂಡಿತ್ತು. ಈ ವೇಳೆ ನಗರದ ಎಪಿಎಂಸಿಯಲ್ಲಿನ ಅಂಗಡಿಯೊಂದರಲ್ಲಿ ನಿಷೇಧಿತ ಪ್ಲಾಸ್ಟಿಕ್​ ಕವರ್​ಗಳು ಪತ್ತೆಯಾಗಿದ್ದು, ಪ್ಲಾಸ್ಟಿಕ್​ ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಯೊಂದಿಗೆ ಅಂಗಡಿ ಮಾಲೀಕ ವಾಗ್ವಾದಕ್ಕಿಳಿದು, ಕರ್ತವ್ಯಕ್ಕೆ ಅಡ್ಡಿಪಡಿಸಿ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
"

ಕ್ಷಮೆ ಕೇಳಿ ದಂಡ ಕಟ್ಟಿದ ತಂದೆ, ಮಗ

ಗರಸಭೆಯ ಕಟ್ಟುನಿಟ್ಟಿನ ಕ್ರಮವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನಿಯಮ ಉಲ್ಲಂಘಿಸುವವರಲ್ಲಿ ನಡುಕ ಹುಟ್ಟಿಸಿದ ಬೆನ್ನಲ್ಲೆ ತಂದೆ, ಮಗ ನಗರಸಭೆಯ ಕಚೇರಿಗೆ ಆಗಮಿಸಿ ಅನುಚಿತ ವರ್ತನೆಯ ಬಗ್ಗೆ ಕ್ಷಮೆಯಾಚಿಸಿ, ದಂಡ ಕಟ್ಟಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರಸಭೆ ಪೌರಾಯುಕ್ತ ಜಿ.ಎನ್​.ಚಲಪತಿ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ನಿಷೇಧಿತ ಪ್ಲಾಸ್ಟಿಕ್​ ಸಂಗ್ರಹಿಸಿಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಮಾಲೀಕನಿಗೆ 50 ಸಾವಿರ ದಂಡದ ನೋಟಿಸ್​ ಜಾರಿ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ವರ್ತನೆ ಮರುಕಳಿಸಿದರೆ ಕಾನೂನು ರೀತಿ ಕ್ರಿಮಿನಲ್​ ಮೊಕದ್ದಮೆ ಹೂಡಲಾಗುವುದು. ಜತೆಗೆ ಅಂಗಡಿಯ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.