ಕೋಲಾರ&ಬೆಂಗಳೂರು ರಸ್ತೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ road 
ರಾಜ್ಯ

ಕೋಲಾರ&ಬೆಂಗಳೂರು ರಸ್ತೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ road

ಪ್ರಮುಖ ಮುಖ್ಯಾಂಶಗಳು

  • ನಗರಸಾಪುರದಲ್ಲಿ ರಸ್ತೆಗಿಳಿದು ಪ್ರತಿಭಟಿಸಿದ ಸಾರ್ವಜನಿಕರು
  • ಇತ್ಯ ಧೂಳಿನಿಂದ ಬೇಸತ್ತ ನಾಗರಿಕರು
ನರಸಾಪುರ: ಕೋಲಾರ ತಾಲೂಕು ನರಸಾಪುರ ಮೂಲಕ ಹಾದು ಹೋಗಿರುವ ಬೆಂಗಳೂರು&ಕೋಲಾರ ಮುಖ್ಯರಸ್ತೆ ಕಾಮಗಾರಿ ಹಲವು ತಿಂಗಳುಗಳಿಂದ ಕುಂಟುತ್ತಾ ಸಾಗಿದ್ದು, ಮಳೆ ಬಂದರೆ ಕೆಸರುಗದ್ದೆಯಂತಾಗಿ, ಬಿಸಿಲು ಬಿದ್ದರೆ ನಿತ್ಯ ಧೂಳಿನ ಮಜ್ಜನವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.road
ನರಸಾಪುರ ಗ್ರಾಪಂ ಸದಸ್ಯ ಕೆಇಬಿ ಚಂದ್ರು ಮಾತನಾಡಿ, ಕಾಮಗಾರಿ ಪ್ರಾರಂಭ ಮಾಡಿ 8 ತಿಂಗಳಾಗಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಕೇವಲ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ನರಸಾಪುರ ಕೈಗಾರಿಕಾ ಪ್ರದೇಶವಾಗಿರುವುದರಿಂದ ಜನಸಂಖ್ಯೆ ಹೆಚ್ಚಾಗಿದೆ, ಕೈಗಾರಿಕಾ ಪ್ರದೇಶಕ್ಕೆ ಓಡಾಡುವ ಬೃಹತ್​ ಪ್ರಮಾಣದ ವಾಹನಗಳು ಹಾಗೂ ಇತರೆ ವಾಹನಗಳು ಸಂಚರಿಸುವಾಗ ಇಡೀ ರಸ್ತೆ ತುಂಬಾ ಹಿಮದಂತೆ ಭಾಸವಾಗುತ್ತಿದೆ. ಧೂಳು ತಡೆಯಲು ರಸ್ತೆಗೆ ನೀರು ಹಾಕುತ್ತಿಲ್ಲ. ಇದರಿಂದ ಸುತ್ತಮುತ್ತಲಿನ ಅಂಗಡಿ&ಮುಂಗಟ್ಟುಗಳಲ್ಲಿ ಧೂಳೂ ತುಂಬಿಕೊಳ್ಳುತ್ತಿದೆ. ಇನ್ನೂ ಹೋಟೆಲ್​ಗಳಲ್ಲಿ ಯಾವುದೇ ತಿಂಡಿ&ತಿನಿಸು ತಿನ್ನಲು ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಷ್ಟೇ ಧೂಳು ಒರೆಸಿದರೂ ಮತ್ತೆ ಮತ್ತೆ ಕೂರುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ತಾಪಂ ಸದಸ್ಯ ಎನ್​.ಕೆ.ನಾಗರಾಜ್​ ಮಾತನಾಡಿ, ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಹಾಗೂ ಗುತ್ತಿಗೆದಾರರ ಬಳಿ ಹೋದರೂ ಏನು ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗುತ್ತಿಗೆದಾರ ಚಂಬೆ ನಾರಾಯಣಸ್ವಾಮಿ, ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದು, ವಾರದೊಳಗೆ ರಸ್ತೆಗೆ ಡಾಂಬರ್​ ಹಾಕಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಬಿ.ಶ್ರೀನಿವಾಸ್​, ಎನ್​.ಪಿ ಶ್ರೀನಿವಾಸ್​, ಭಾನುಪ್ರಕಾಶ್​, ಓಂಪ್ರಕಾಶ್​, ಗೋಪಿ, ಸುಮನ್​, ಮುನಿರಾಜು, ಸತೀಶ್​, ಶೇಖರ್​, ರಾಜೇಂದ್ರ, ಎಲ್​.ನಾಗರಾಜ್​, ವೆಂಕಟೇಶ್​, ಟಿ.ಬಾಬು, ಕೃಷ್ಣಪ್ಪ, ಉಮೇಶ್​ ಇತರರು ಇದ್ದರು.