ನಗರದ ವಿದ್ಯಾಪ್ರಸಾರಕ ಮಂಡಳದ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ವಿಶ್ವ ಬಾಲಕಾರ್ಮಿಕ ವಿರೋಽ ದಿನ ಆಚರಣೆಯಲ್ಲಿ ಪ್ರತಿಜ್ಞಾವಿಽ ಬೋಽಸಲಾಯಿತು.
ಬಾಗಲಕೋಟೆ: ಸಾಮಾಜಿಕ ಸಮಸ್ಯೆಯಾಗಿರುವ ಬಾಲಕಾರ್ಮಿಕ ಪದ್ಧತಿಯನ್ನು ನಿವಾರಿಸಲು ಸಂಘಟಿತ ಪ್ರಯತ್ನ ಅವಶ್ಯವಾಗಿದೆ. ಈ ದಿಶೆಯಲ್ಲಿ ಯುವ ಸಮುದಾಯ ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಈಚೆಗೆ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಽ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂತಹ ಹಲವು ಸಾಮಾಜಿಕ ಸಮಸ್ಯೆ ಮತ್ತು ಅವುಗಳ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಮಕ್ಕಳು ದೇಶದ ಆಶಾಕಿರಣ. ಅವರಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಉತ್ತಮ ಪರಿಸರ, ಆರೋಗ್ಯ, ರಕ್ಷಣೆ ನೀಡಿದಲ್ಲಿ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅದರಿಂದ ದೇಶದಲ್ಲಿ ಪ್ರಗತಿಯನ್ನು ಸಾಽಸಬಹುದು ಎಂದರು.
ಬಾಲಕಾರ್ಮಿಕ ಪದ್ಧತಿ ಮಕ್ಕಳ ಬಾಲ್ಯವನ್ನು ಕಸಿದುಕೊಂಡು ಅವರ ಸಾಮರ್ಥ್ಯಕ್ಕೆ ಧಕ್ಕೆಯಾಗಿ ಬೆಳವಣಿಗೆಗೆ ಹಿನ್ನಡೆ ಉಂಟುಮಾಡುವುದು. ಈ ಪದ್ದತಿಯಿಂದ ಮಕ್ಕಳ ರಕ್ಷಣೆಯಾಗಬೇಕು. ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು. ಈ ದಿಶೆಯಲ್ಲಿ ಯುವಕರು ತಮ್ಮ ಕೊಡುಗೆಯನ್ನು ನೀಡಬೇಕು ಎಂದರು.
ಎನ್‌ಎಸ್‌ಎಸ್ ಅಽಕಾರಿ ಎಸ್.ಎಂ.ಹಡಪದ ಪ್ರತಿಜ್ಞಾವಿಽ ಬೋಽಸಿದರು. ಡಾ.ಎಸ್.ಎಸ್.ಹಂಗರಗಿ, ಎಂ.ಕೆ.ಗುಡೂರ, ಎ.ಎ.ಗಂಗಲ್,ಬಿ.ಡಿ.ಮಾದರ, ಎ.ಎಲ್.ಬಿಲ್ಲಾರ ಇದ್ದರು.