ಮುನವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸವದತ್ತಿ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯುವ ಮುಖಂಡ ಅಶ್ವತ್ಥ ವೈದ್ಯ ಉದ್ಘಾಟಿಸಿದರು. ಮುರುಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯರು, ಡಾ.ಬಸು ಬೇವಿನಗಿಡದ ಇತರರಿದ್ದರು.
ಮುನವಳ್ಳಿ: ಮರಾಠಿ, ಉರ್ದು ಹಾಗೂ ಇಂಗ್ಲಿಷ್ ಸೇರಿ ಅನ್ಯ ಭಾಷೆಗಳು ದಬ್ಬಾಳಿಕೆ ನಡೆಸಿದರೂ, ಕನ್ನಡ ತನ್ನದೇ ಅಸ್ತಿತ್ವ ಉಳಿಸಿಕೊಂಡಿದೆ. ಅಂತಹ ಗಟ್ಟಿತನ ನಮ್ಮ
ಕನ್ನಡಕ್ಕಿದೆ ಎಂದು ಸರ್ವಾಧ್ಯಕ್ಷ ಡಾ.ಬಸು ಬೇವಿನಗಿಡದ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದಿ.ಹ.ಬ.ಅಸೂಟಿ ಗುರುಗಳ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸವದತ್ತಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯತೆ ವಹಿಸಿ ಮಾತನಾಡಿದರು.
ಹುಟ್ಟೂರಿನಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯತೆ ದೊರೆತಿರುವುದು ಸಂತಸ ತಂದಿದೆ. ಮುನವಳ್ಳಿಯಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಬೇಕು, ಶಾಲೆಗಳಲ್ಲಿ ಸಾಹಿತ್ಯದ ಕಾರ್ಯಕ್ರಮ ಆಯೋಜಿಸಬೇಕು, ಗ್ರಂಥ ಸಾಹಿತ್ಯಕ್ಕಿಂತ ಆಡು ಭಾಷೆಯಲ್ಲಿ, ಅದೂ ಸ್ಥಳಿಯ ಭಾಷೆಯಲ್ಲಿ ಬರವಣಿಗೆ ಆಗಬೇಕೆಂದು ಒತ್ತಾಯಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಯುವ ಮುಖಂಡ ಅಶ್ವತ್ಥ ವೈದ್ಯ, ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ತಿಳಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಕಸಾಪ ಜಿಲ್ಲಾಧ್ಯೆ ಮಂಗಲಾ ಮೆಟಗುಡ್ಡ, ತಾಲೂಕಾಧ್ಯ ಡಾ.ವೈ.ಎಂ.ಯಾಕೋಳ್ಳಿ ಹಾಗೂ ಹೋಬಳಿ ಅಧ್ಯ ಮೋಹನ ಸರ್ವಿ ಧ್ವಜಾರೋಹಣ ನೆರವೇರಿಸಿದರು.
ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ, ಸವದತ್ತಿ ಮೂಲಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಸಮ್ಮೇಳನಾಧ್ಯರ ಮೆರವಣಿಗೆಗೆ ಮುಖಂಡರಾದ ರವೀಂದ್ರ ಯಲಿಗಾರ, ಪುರಸಭೆ ಅಧ್ಯ ಈಶ್ವರ ಕರೀಕಟ್ಟಿ ಚಾಲನೆ ನೀಡಿದರು. ವಿವಿಧ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಪಂಚಲಿಂಗೇಶ್ವರ ದೇವಸ್ಥಾನ ತಲುಪಿತು. ಉಮೇಶ ಬಾಳಿ ವಿವಿಧ ಪುಸ್ತಕ ಬಿಡುಗಡೆಗೊಳಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಡಾ.ಎ.ಬಿ.ವಗ್ಗರ ವಿಚಾರ ಗೋಷ್ಠಿ ಅಧ್ಯತೆ ವಹಿಸಿದ್ದರು. ಎನ್.ಆರ್.ಟಕ್ಕಾಯ, ವೀರಣ್ಣ ಕೊಳಕಿ, ರಮೇಶ ಮುರಂಕರ, ಸಮಾಜ ಸೇವಕ ವೀರೇಶ ಬ್ಯಾಹಟ್ಟಿ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಎಂ.ಎಚ್.ಪಾಟೀಲ, ಟಿ.ಪಿ.ಮುನ್ನೋಳಿ, ಸದಾಶಿವ ಕೌಜಲಗಿ, ಅಂಬರೀಷ ಯಲಿಗಾರ, ಉಮಾ ಬೇವಿನಗಿಡದ, ಡಿ.ಡಿ.ಟೋಪೋಜಿ, ಎಂ.ವೈ.ಮೆಣಸಿನಕಾಯಿ, ಆನಂದ ಬಡಕುಂದ್ರಿ, ಎ.ಎ.ಖಾಜಿ, ಶ್ರೀಕಾಂತ ದಳವಾಯಿ, ಬಿ.ಎನ್.ಬ್ಯಾಳಿ, ಸುಧೀರ ವಾರಿ, ಬಿ.ಬಿ.ನಾವಲಗಟ್ಟಿ, ಮೀನಾ ಮುರನಾಳ, ಪ್ರಶಾಂತ ತುಳಜಣ್ಣವರ, ಬಿ.ಬಿ.ಹುಲಿಗೊಪ್ಪ, ಎಸ್.ಬಿ.ಹಿರಲಿಂಗನ್ನವರ, ಜಿ.ವೈ.ಕರಮಲ್ಲಪ್ಪನವರ, ಶಂಕರ ರಾಠೋಡ, ಗುರುನಾಥ ಪತ್ತಾರ, ಮಹಾಂತೇಶ ಜೇವೂರ, ರವಿ ಸಣಕಲ್ಲ, ಮಹಾಂತೇಶ ಜೇವೂರ, ಅನಿತಾ ಯಲಿಗಾರ, ಮಲ್ಲಿಕಾರ್ಜುನ ಕಮತಗಿ, ಬಿ.ಎನ್.ಹೊಸೂರ, ಅನ್ನಪೂರ್ಣಾ ಲಂಬೂನವರ, ರಾಧಾ ಕುಲಕರ್ಣಿ, ಅನುರಾಧಾ ಬೆಟಗೇರಿ, ಬಾಳು ಹೊಸಮನಿ ಇತರರಿದ್ದರು.
ಮುನವಳ್ಳಿ ಪಟ್ಟಣ ಶರವೇಗದಿಂದ ಬೆಳೆಯುತ್ತಿದ್ದು, ತಾಲೂಕು ಕೇಂದ್ರವೆಂದು ೂಷಿಸಬೇಕು. ಪಟ್ಟಣದ ಆರಕ ಹೊರ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕೆಂದು ಸರ್ವಾನುಮತದಿಂದ ರ್ನಿಣಯ ಕೈಗೊಳ್ಳಲಾಯಿತು.