Opposition to the relocation of the Art Club
ಕುಣಿಗಲ್: ಕುಣಿಗಲ್ ಸ್ಟಡ್ ಾಮ್ರ್ಗೆ ರ್ಟ್ ಕ್ಲಬ್ ಸ್ಥಳಾಂತರಕ್ಕೆ ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ತಾಲೂಕು ಜೆಡಿಎಸ್ ಅಧ್ಯ ಬಿ.ಎನ್. ಜಗದೀಶ್ ಎಚ್ಚರಿಸಿದರು. \
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು ಸೇರಿ ಉತ್ತಮ ಯೋಜನೆಗಳು ಕನಕಪುರಕ್ಕೆ?, ಯುವಕರು ಹಾಗೂ ಜನರನ್ನು ಹಾಳು ಮಾಡುವ ರೇಸ್ ಕೋರ್ಸ್ ಕುಣಿಗಲ್ಗೆ? ಇದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಡಾ.ರಂಗನಾಥ್ ಅವರು ಕುಣಿಗಲ್ ಸ್ಟಡ್ ಾಮ್ರ್ಗೆ ರ್ಟ್ ಕ್ಲಬ್ ತಂದು ಜಿಲ್ಲೆಯ ರೆತರನ್ನು ಹಾಗೂ ಯುವಕರನ್ನು ಹಾಳು ಮಾಡಲು ಪ್ರೇರೇಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಕುರಿ ಮತ್ತು ಉಣ್ಣೆ ಸಂಶೋಧನಾ ಕೇಂದ್ರವನ್ನು ಸ್ಟಡ್ ಾಮ್ರ್ಗೆ ತರಲು ನಿರಾಕರಿಸಿದ ಶಾಸಕರು, ಇಂದು ರೇಸ್ ಕೋರ್ಸ್ ತಂದು ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವ ಬದಲು ಯುವಕರನ್ನು ಜೂಜಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ರೆತ ಸಂ ಹಸಿರು ಸೇನೆ ಜಿಲ್ಲಾಧ್ಯ ಆನಂದ್ ಪಟೇಲ್ ಮಾತನಾಡಿ, ಹೆನುಗಾರಿಕೆ ಕುದುರೆ ತಳಿ ಅಭಿವೃದ್ಧಿಗಾಗಿ ಇರುವ ಸ್ಟಡ್ ಾಮ್ರ್ ಅನ್ನು ಜೂಜು ಅಡ್ಡೆ ಮಾಡಲು ಹೊರಟಿರುವ ಶಾಸಕರ ನಡೆಯನ್ನು ಖಂಡಿಸಿದರು.
ಸಾಮಾಜಿಕ ಹೋರಾಟಗಾರ ಹಾಗೂ ಚಿಂತಕ ನಾಗಣ್ಣ ಮಾತನಾಡಿ, ಡಿ.ಕೆ ಸುರೇಶ್ ಹಾಗೂ ಡಿ.ಕೆ ಶಿವಕುಮಾರ್ ಹಾಗೂ ಶಾಸಕ ಡಾ.ರಂಗನಾಥ್, ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ರ್ಟ್ ಕ್ಲಬ್ ಯಶಸ್ವಿಯಾಗಿದ್ದಾರೆ ಎಂದರು.