ಕೋಳಿ ಫಾಮ್ರ್ ನಿರ್ಮಾಣಕ್ಕೆ ವಿರೋಧ chicken-farm
ಮುಳಬಾಗಿಲು: ತಾಲೂಕಿನ ಬೈರಕೂರು ಗ್ರಾಮದ ಸಮೀಪ ಖಾಸಗಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಕೋಳಿಫಾಮ್ರ್ ನಿಮಾರ್ಣ ಮಾಡಲು ಮುಂದಾಗಿದ್ದನ್ನು ಖಂಡಿಸಿ ಬೈರಕೂರು ಗ್ರಾಮಸ್ಥರು ಗ್ರಾಪಂ ಮತ್ತು ನಾಡಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿ ಪಿಡಿಒ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.chicken-farm
ಯಾವುದೇ ಒಂದು ಕೋಳಿಫಾಮ್ರ್ ನಿಮಾರ್ಣ ಮಾಡಬೇಕದರೆ ಜನವಸತಿ ಇರುವ ಕಡೆಯಿಂದ ಸುಮಾರು 500 ಮೀಟರ್ಗೂ ದೂರ ಇರಬೇಕು. ಆದರೆ ಬೈರಕೂರು ಸರ್ವೇ ನಂ. 187/1 ಜಮೀನಿನಲ್ಲಿ ಕೋಳಿಫಾಮ್ರ್ ನಿಮಾರ್ಣ ಮಾಡುತ್ತಿದ್ದು, ಇದು ಜನವಸತಿ ಪ್ರದೇಶಕ್ಕೆ ಹತ್ತಿರದಲ್ಲಿದ್ದು, ಇದನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ಎಸ್.ಶ್ರೀನಿವಾಸ್, ರಾಮಯ್ಯ, ರಾಜು, ಎಸ್.ಗೋಪಿ, ವೆಂಕಟೇಶಪ್ಪ, ಬಿ.ಆರ್.ಗುರುಪ್ರಸಾದ್, ಹನುಮಪ್ಪ, ಶ್ರೀರಾಮ್, ಸುಧಾಕರ್ ಇದ್ದರು.