ಎಸ್​ಐಆರ್​ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸಿ ಕರ್ನಾಟಕ ಪ್ರಗತಿಪರ ಸಂಟನೆಗಳು ಹಾಗೂ ಜಾತ್ಯಾತಿತ ಪಗಳ ಜಿಲ್ಲಾ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಯಾದಗಿರಿ ಡಿಸಿ ಕಚೇರಿ ಎದುರು ಕೈಗೆ ಕಪ್ಪು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಮರೆಪ್ಪ ಚಟ್ಟರಕರ್​, ರಾವೇಂದ್ರ ಮಾನಸಗಲ್​, ಎಂ.ಡಿ.ಸಲೀಂ, ಚಂದ್ರಕಾಂತ ಮುನೆಯಪ್ಪನೋರ್​, ಹೊನ್ನೇಶ ದೊಡ್ಮನಿ, ಭೀಮರಾಯ ಹೊಸ್ಮನಿ ಇತರರಿದ್ದರು. 
ರಾಜ್ಯ

ಎಸ್​ಐಆರ್​ ಪರಿಷ್ಕರಣೆಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಯಾದಗಿರಿಯಲ್ಲಿ ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ
  • ಮತದಾನದ ಹಕ್ಕು ರಕ್ಷಿಸಿರಿ
ಯಾದಗಿರಿ: ಎಸ್​ಐಆರ್​ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸಿ ಕರ್ನಾಟಕ ಪ್ರಗತಿಪರ ಸಂಟನೆಗಳು ಹಾಗೂ ಜಾತ್ಯಾತಿತ ಪಗಳ ಜಿಲ್ಲಾ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕೈಗೆ ಕಪ್ಪು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕುಮಾರ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಎಸ್​ಐಆರ್​ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಪ್ರಜಾತಾಂತ್ರಿಕ ರೀತಿಯಲ್ಲಿ ನಡೆಸಬೇಕು. ನಾಗರಿಕ ಸಮಾಜ ಮುಂದಿಟ್ಟಿರುವ ನಾಲ್ಕು ಪ್ರಮುಖ ಹಕ್ಕೊತ್ತಾಯಗಳನ್ನು ಪರಿಗಣಿಸಿ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಡಿಎಸ್​ಎಸ್​ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್​ ಅವರು ಎಸ್​ಐಆರ್​ ಪರಿಷ್ಕರಣೆ ಹೆಸರಿನಲ್ಲಿ ಆರ್​ಎಸ್​ಎಸ್​ ಮತ್ತು ಬಿಜೆಪಿ ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ಅಂತಹ ಮತದಾರರನ್ನು ವ್ಯವಸ್ಥಿತವಾಗಿ ಕೈಬಿಡುವ ಸಂಚಾಗಿದೆ ಎಂದು ದೂರಿದರು.
ಕಳೆದ ಜೂನ್​ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಡೆದ ಪ್ರತಿರೋಧ ಸಮಾವೇಶದ ಬಳಿಕವೂ ಚುನಾವಣಾ ಆಯೋಗದಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಸಾಹಿತಿಗಳು, ಚಿಂತಕರು, ಕಲಾವಿದರು, ರಂಗಕರ್ಮಿಗಳು ಹಾಗೂ ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಆೇಪಣೆಗಳಿಗೂ ಆಯೋಗ ಪ್ರತಿಕ್ರಿಯಿಸಿಲ್ಲ ಎಂದು ಅವರು ದೂರಿದರು.
ಕೆಸ್ತ ಸಮುದಾಯದ ಮುಖಂಡ ಡಾ.ಸುನೀಲ್​ ಕುಮಾರ ರೆಡ್​ಸನ್​ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಎಸ್​ಐಆರ್​ ವಿರೋಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ವೇಳೆ ರಾವೇಂದ್ರಗೌಡ ಮಾನಸಗಲ್​, ಎಂ.ಡಿ.ಸಲೀಂ, ಚಂದ್ರಕಾಂತ ಮುನೆಯಪ್ಪನೋರ್​, ಹೊನ್ನೇಶ ದೊಡ್ಮನಿ, ಭೀಮರಾಯ ಹೊಸ್ಮನಿ, ಸೈದಪ್ಪ ಕೂಲರ್​, ಜಾಕೀರ ಅಹ್ಮದ್​, ಗುಲಾಮ ಜಿಲಾನಿ, ಮಹಿಬೂಬ್​ ಸಾಬ್​ ಇತರರಿದ್ದರು.