ರಾಜ್ಯದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದನ್ನು ವಿರೋಽಸಿ ಬುಧವಾರ ಬಾಗಲಕೋಟೆ ನವನಗರದ ಹೆಸ್ಕಾಂ ಕಚೇರಿ ಎದುರು ನೌಕರರು, ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 
ರಾಜ್ಯ

ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣಕ್ಕೆ ವಿರೋಧ

ಬಾಗಲಕೋಟೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ನೌಕರರು, ರೈತ ಸಂಘದವರು, ಕರವೇ ಮುಖಂಡರು ಬುಧವಾರ ಬಾಗಲಕೋಟೆಯ ನವನಗರದಲ್ಲಿರುವ ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಯಾವುದೇ ಕಾರಣಕ್ಕೂ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಬಾರದು. ಸರ್ಕಾರಿ ಸ್ವಾಮ್ಯದಲ್ಲಿಯೇ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯದ ೧೫ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ನೀಡಬೇಕು ಎಂದು ಟಾಟಾ ಪವರ್ ಕಂಪನಿಯು, ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ. ಹಲವು ಸಂಘಟನೆಗಳು ಇದಕ್ಕೆ ಆಕ್ಷೇಪಣೆ ಸಲ್ಲಿಸಿವೆ. ಅವುಗಳನ್ನು ಪರಿಗಣಿಸಿ, ಸರ್ಕಾರ ಖಾಸಗೀಕರಣಗೊಳಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವುದರಿಂದ ನೌಕರರಿಗೆ ತೊಂದರೆಯಾಗುತ್ತದೆ. ಹೊಸ ಉದ್ಯೋಗವಕಾಶಗಳು ಕಡಿತಗೊಳ್ಳಲಿವೆ. ವರ್ಗಾವಣೆ ನೀತಿಯೂ ಬದಲಾವಣೆಯಾಗಲಿದೆ. ವಿವಿಧ ಸೌಲಭ್ಯಗಳೂ ಕಡಿತಗೊಳ್ಳಬಹುದು. ಇದರಿಂದ ನೌಕರರು ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ಕೂಡಲೇ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಗೃಹ ಜ್ಯೋತಿ, ಉಚಿತ ವಿದ್ಯುತ್, ನೇಕಾರರ ಉಚಿತ ವಿದ್ಯುತ್ ಸೌಲಭ್ಯಗಳು ಕಡಿತಗೊಳ್ಳುವ ಆತಂಕ ಎದುರಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ ಎಂದರು.
ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದರೆ ರೈತರಿಗೆ ಸಬ್ಸಿಡಿ ನೀಡುವ ಜವಾಬ್ದಾರಿ ಯಾರು ವಹಿಸಿಕೊಳ್ಳುತ್ತಾರೆ. ಉಚಿತ ವಿದ್ಯುತ್ ಸರಬರಾಜು ವ್ಯವಸ್ಥೆ ಏನಾಗುತ್ತದೆ. ನಷ್ಟವಾದರೂ ಗ್ರಾಮೀಣ ಪ್ರದೇಶಕ್ಕೆ ಸೇವೆ ಮುಂದುವರೆಯುತ್ತದೆಯೇ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಗಳನ್ನು ಬಲ ಪಡಿಸಬೇಕು. ಸಾರ್ವಜನಿಕ ವಿದ್ಯುತ್ ವ್ಯವಸ್ಥೆ ಬಲಪಡಿಸಬೇಕು. ರೈತರ ಹಾಗೂ ಬಡವರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಸೂಪರಿಟೆಂಡೆAಟ್ ಇಂಜಿನಿಯರ್ ಚನ್ನಬಸಪ್ಪ ಯಂಕAಚಿ, ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಸುತಾರ, ಉಪಲೆಕ್ಕ ನಿಯಂತ್ರಣಾಽಕಾರಿ ಎನ್.ಪಿ. ರಾಠೋಡ, ವಿವಿಧ ಅಽಕಾರಿಗಳು, ಲೈನಮನ್‌ಗಳು, ಕರವೇಯ ಗಣೇಶ ನಾಯಕ, ಮಂಜುಳಾ ಅಂಗಡಿ, ಕಸ್ತೂರಿಬಾಯಿ ಮೆಹರವಾಡೆ, ಶಭಾನಾ, ಸಂತೋಷ ಚಿನಿವಾಲ ಭಾಗವಹಿಸಿದ್ದರು.