ಗುಳೇದಗುಡ್ಡದಲ್ಲಿ ಕರವೇ ವತಿಯಿಂದ ವಿದ್ಯುತ್ ಖಾಸಗಿಕರಣ ನೀತಿ ವಿರೋಧಿಸಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕರವೇ ತಾಲೂಕು ಅಧ್ಯಕ್ಷ ರವಿ ಅಂಗಡಿ, ಡಾ.ವಿ.ಎ. ಬೆನಕನಾಳ, ಶ್ರೀಕಾಂತ ಹುನಗುಂದ, ರಫೀಕ್ ಕಮಾನಗಾರ, ಶೇಖಣ್ಣ ತಾಂಡೂರ, ಸೋಮಶೇಖರ ಕಲ್ಬುರ್ಗಿ ಇತರರಿದ್ದರು.
- ಹೆಸ್ಕಾಂ ಅಧಿಕಾರಿಗಳಿಗೆ ಮನವಿ
- ಸರ್ಕಾರದ ಸ್ವಾಮ್ಯದಲ್ಲಿ ಮುಂದುವರಿಸಿ
ಗುಳೇದಗುಡ್ಡ: ಟಾಟಾ ಸಂಸ್ಥೆ ವಿದ್ಯುತ್ ವಿತರಣಾ ಕೇಂದ್ರ ಖಾಸಗಿಕರಣ ಪರವಾನಗಿ ರದ್ದುಗೊಳಿಸಿ, ಸರ್ಕಾರದ ಸ್ವಾಮ್ಯದಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹೆಸ್ಕಾಂ ಅಧಿಕಾರಿ ಮಹಾಂತೇಶ ಬಾದವಾಡಗಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ರವಿ ಅಂಗಡಿ ಮಾತನಾಡಿ, ಟಾಟಾ ಸಂಸ್ಥೆ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ವಿತರಣಾ ಕೇಂದ್ರದ ಖಾಸಗಿಕರಣಕ್ಕೆ ಅರ್ಜಿಸಲ್ಲಿಸಿದ್ದು, ಗ್ರಾಹಕರ, ರೈತರ ಹಾಗೂ ನೇಕಾರರ ಹಿತದೃಷ್ಟಿಯಿಂದ ಖಾಸಗಿಕರಣ ಕೈಬಿಟ್ಟು ಮೊದಲಿನಂತೆ ಸರ್ಕಾರದ ಸ್ವಾಮ್ಯದಲ್ಲಿ ಮುಂದುವರಿಸಬೇಕು ಎಂದರು.
ಖಾಸಗಿ ಕಂಪನಿಗಳು ಲಾಭದ ಉದ್ದೇಶದಿಂದ ಕೆಲಸಮಾಡುತ್ತವೆ. ಇದರಿಂದಾಗಿ ವಿದ್ಯುತ್ ಬೆಲೆಯಲ್ಲಿ ಹಾಗೂ ಸೇವಾ ದರದಲ್ಲಿ ಏರಿಕೆಯಾಗಿ ಸಾಮಾನ್ಯ ಜನರಿಗೆ ಮತ್ತು ಬಡವರಿಗೆ ತೊಂದರೆಯಾಗಿತ್ತದೆ. ನೇಕಾರರ ಪವರ್‌ಲೂಮ್ ಮಗ್ಗಗಳಿಗೆ, ರೈತರ ನೀರಾವರಿ ಯೋಜನೆಗಳಿಗೆ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್, ರಿಯಾಯಿತಿ ವಿದ್ಯುತ್ ನಿಂತುಹೋಗಿ, ಸಂಕಷ್ಟ ಅನುಭವಿಸಬೇಕಾಗುತ್ತದೆ. ವಿದ್ಯುತ್ ಪ್ರಸರಣವನ್ನು ಖಾಸಗಿಯವರಿಗೆ ನೀಡುವ ನಿರ್ಣಯ ಕೈಬಿಡಬೇಕು ಎಂದು ಆಗ್ರಹಿಸಿದರು.
ಡಾ.ವಿ.ಎ. ಬೆನಕನಾಳ, ಶ್ರೀಕಾಂತ ಹುನಗುಂದ, ರಫೀಕ್ ಕಮಾನಗಾರ, ಶೇಖಣ್ಣ ತಾಂಡೂರ, ಸೋಮಶೇಖರ ಕಲ್ಬುರ್ಗಿ, ಪ್ರವೀಣ ದೇವಗಿರಕರ, ಸೋಮಶೇಖರ ಜವಳಗಿ, ಹೆಸ್ಕಾಂ ಎಸ್.ಒ. ಶ್ರೀಧರ ಮಾಲಗಿತ್ತಿ, ಭದ್ರು ಪರಗಿ, ಮುನ್ನಾ ಕೊಣ್ಣೂರ, ಮುತ್ತು ಮಿಟ್ಟಲಕೋಡ, ಆಯಿಷಾ ಸೂಳಿಭಾವಿ, ಕಿರಣ ರಾಠೋಡ, ಸಂಗು ಬೂಥನಾಳ ಇತರರಿದ್ದರು.