ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  
ರಾಜ್ಯ

ಸರ್ವಪಕ್ಷ ಸಭೆಗೆ ಬರಲು ವಿಪಕ್ಷಗಳ ಹಿಂದೇಟು: ರೈತರ ಬಗ್ಗೆ ಅವರದ್ದು ಬರೀ ಕಪಟ ನಾಟಕ ಎಂದ ಸಿಎಂ ಡಿ ಕೆ ಶಿವಕುಮಾರ್! | D K Shivakumar

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಸಚಿವರ ಬಳಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಬೇಕಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಸಚಿವರ ಬಳಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಬೇಕಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

ದೆಹಲಿಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿಯ ಕುರಿತು ಚರ್ಚೆ ನಡೆಸಿ, ಕೇಂದ್ರ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ದಿನಾಂಕ ನಿಗದಿಪಡಿಸಲಿದ್ದು, ಇದರೊಂದಿಗೆ ನಾಳೆ ನಡೆಯಲಿರುವ ನಮ್ಮ ಪಕ್ಷದ ಸಭೆ ನಡೆಯಲಿದ್ದು, ಶಿಕ್ಷಣ ಮತ್ತು ಚುನಾವಣಾ ಆಯೋಗದ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳನ್ನು ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.

ವಿಪಕ್ಷಗಳ ಧೋರಣೆಗೆ ಸಿಎಂ ಆಕ್ರೋಶ!

ಬರ ಮತ್ತು ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಕರೆದಿರುವ ಸರ್ವಪಕ್ಷ ಸಭೆಗೆ ಬರುವುದಿಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅವರಿಗೆ ಬರಲು ಇಷ್ಟವಿಲ್ಲ ಎಂದರೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಿಪಕ್ಷಗಳಿಗೆ ಕೇಂದ್ರ ಸರ್ಕಾರದ ಜೊತೆ ಮಾತಾಡಲು ಆಗುವುದಿಲ್ಲ, ಕೇಂದ್ರದವರನ್ನು ಎದುರಿಸುವ ಶಕ್ತಿಯೂ ಅವರಿಗಿಲ್ಲ. ರೈತರ ವಿಷಯದಲ್ಲಿ ವಿಪಕ್ಷಗಳದ್ದು ಬರೀ ಕಪಟ ನಾಟಕವಷ್ಟೇ ಎಂದು ಕುಟುಕಿದರು.

ಕಸ್ತೂರಿ ರಂಗನ್ ವರದಿ ಹಾಗೂ ಬರದ ಗಂಭೀರತೆ ನಮಗೆ ಗೊತ್ತಿದ್ದು, ನೀವು ಕೇಂದ್ರದಿಂದ ಅನುದಾನ ಕೊಡಿಸಿ, ನಾವೂ ಕೊಡುತ್ತೇವೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆದ್ದರಿಂದ ವಿಪಕ್ಷಗಳು ಸಭೆಗೆ ಬಂದು ತಮ್ಮ ನಿಲುವು ಏನೆಂದು ತಿಳಿಸಬೇಕೆಂದು ಆಗ್ರಹಿಸಿದರು.

ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ!...

ಮುಂದುವರಿದು ಮಾತನಾಡಿದ ಸಿಎಂ ಡಿಕೆಶಿ, ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ಅಕ್ಟೋಬರ್ 3 ರಿಂದ ಪರಿಶೀಲನಾ ಕಮಿಟಿ ಆಗಮಿಸುತ್ತಿದ್ದು, ಅವರಿಗೆ ಕಾನೂನು ರೀತಿಯಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು. ಒಂದು ವೇಳೆ ವಿಪಕ್ಷಗಳು ಸಭೆಗೆ ಬರಲಿಲ್ಲ ಎಂದರೆ ನಾನಂತೂ ರಾಜ್ಯದ ರೈತರ ಹಿತ ಕಾಪಾಡಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ. ಕಸ್ತೂರಿ ರಂಗನ್ ವಿಚಾರವಾಗಿ ಕೇಂದ್ರದ ನಾಯಕರು ಹಾಗೂ ಪ್ರಧಾನ ಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.