ಲೋಕಭವನ  
ರಾಜ್ಯ

ಲೋಕಭವನ ವೀಕ್ಷಣೆಗೆ ಅವಕಾಶ

ಭದ್ರತಾ ತಪಾಸಣೆಗೆ ಒಳಪಡಬೇಕು ಹಾಗೂ ನೀಡಲಾಗುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಗದಿಪಡಿಸಿರುವ ಮಾರ್ಗ ಮತ್ತು ಸ್ಥಳಗಳಲ್ಲಿ ಮಾತ್ರ ಸಂಚರಿಸಲು ಅನುಮತಿ ಇರುತ್ತದೆ. ಖಾಸಗಿ, ಟ್ಯಾಕ್ಸಿ ವಾಹನಗಳಿಗೆ ಲೋಕಭವನದ ಆವರಣದೊಳಗೆ ಪ್ರವೇಶ ಇರುವುದಿಲ್ಲ. ಬ್ಯಾಗ್, ಬ್ಯಾಕ್‌ಪ್ಯಾಕ್, ಆಹಾರ ಪದಾರ್ಥಗಳು, ಪಾನ್, ಗುಟ್ಕಾ, ತಂಬಾಕು ಉತ್ಪನ್ನಗಳು, ಸಿಗರೇಟು, ಮದ್ಯ ತರುವಂತಿಲ್ಲ. ವೃತ್ತಿಪರ ಕ್ಯಾಮರಾಗಳು ಹಾಗೂ
ವಿಡಿಯೋ ಕ್ಯಾಮರಾಗಳು, ಲ್ಯಾಪ್‌ಟಾಪ್, ವಿದ್ಯುನ್ಮಾನ, ವಿದ್ಯುತ್ ಉಪಕರಣಗಳು, ಚೂಪಾದ ಲೋಹದ ವಸ್ತುಗಳು, ಬೆಂಕಿಪೊಟ್ಟಣ, ಲೈಟರ್‌ಗಳು ಹಾಗೂ ಬೆಂಕಿಗೆ ಹೊತ್ತಿಕೊಳ್ಳುವ ವಸ್ತುಗಳು, ಶಸಾಸ ಮತ್ತು ಮದ್ದುಗುಂಡುಗಳನ್ನು ಲೋಕಭವನ ಪ್ರವೇಶಕ್ಕೆ ನಿಷೇಧಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ತಿಳಿಸಿದ್ದಾರೆ.