ಎಂ.ಎಸ್.ತನ್ಮಯಿ. 
ರಾಜ್ಯ

ಮತದಾರರ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಎಂ.ಎಸ್.ತನ್ಮಯ್
  • ಸಾರ್ವಜನಿಕ ಹಕ್ಕು, ಆಕ್ಷೇಪಣೆ ಸಲ್ಲಿಸುವ ಸೆ.23ರವರೆಗೆ ಅವಕಾಶ

ಗುಂಡ್ಲುಪೇಟೆ:

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಸಾರ್ವಜನಿಕ ಹಕ್ಕು, ಆಕ್ಷೇಪಣೆ ಸಲ್ಲಿಸುವ ಸೆ.23ರವರೆಗೆ ಅವಕಾಶ ನೀಡಲಾಗಿದೆ ಎಂದು ತಹಸೀಲ್ದಾರ್ ಎಂ.ಎಸ್.ತನ್ಮಯ್ ತಿಳಿಸಿದರು.

ಮತದಾರರ ಕರಡು ಪಟ್ಟಿಯಂತೆ 96,725 ಪುರುಷ, 1,01,728 ಮಹಿಳೆ, 9 ಇತರ ಸೇರಿ 1,98,462 ಮತದಾರರಿದ್ದಾರೆ. ಅದೇ ರೀತಿ 249 ಇದ್ದ ಮತಗಟ್ಟೆಗಳ ಸಂಖ್ಯೆಗೆ ಹೆಚ್ಚುವರಿ 8 ಸೇರ್ಪಡೆಯಾಗಿ ಒಟ್ಟು 257 ಮತಗಟ್ಟೆಗಳನ್ನು ನಿಗದಿಗೊಳಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮೂನೆ-6ರಲ್ಲಿ ಹೊಸ ಮತದಾರರ ಸೇರ್ಪಡೆಗೆ, 6 ಎರಲ್ಲಿ ಸಾಗರೋತ್ತರ(ಎನ್‌ಆರ್‌ಐ) ಮತದಾರರ ನೋಂದಣಿ, 7ರಲ್ಲಿ ಹೆಸರು ತೆಗೆದುಹಾಕಲು ಮತ್ತು ಆಕ್ಷೇಪಣೆ, 8ರಲ್ಲಿ ತಿದ್ದುಪಡಿ, ಸ್ಥಳಾಂತರ, ಎಪಿಕ್ ಕಾರ್ಡ್ ಬದಲಾವಣೆಗೆ ಅವಕಾಶ ಮಾಡಲಾಗಿದೆ.
2002ರಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಆಗದಿರುವ ಹಾಗೂ ವ್ಯತ್ಯಾಸ ಕಂಡು ಬಂದಿರುವ ಮತದಾರರಿಗೆ ನೋಟಿಸ್ ಜನರೇಟ್ ಮಾಡಿ, ಬಿಎಲ್‌ಒ ಮುಖಾಂತರ ತಲುಪಿಸಿ ಸ್ವೀಕೃತಿ ಪಡೆಯಲಾಗುತ್ತದೆ. ಸದರಿ ಮತದಾರರು ವಿಚಾರಣೆ ದಿನಾಂಕದಂದು ಜನನ, ಜಾತಿ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಸೇರಿ 12 ದಾಖಲೆಗಳನ್ನು ಸಲ್ಲಿಬಹುದು ಎಂದು ತಿಳಿಸಿದರು.
ಮತದಾರರ ನೋಂದಣಾಧಿಕಾರಿ ವೈ.ಎಂ.ಜಯರಾಜು, ಪ್ರಥಮ ದರ್ಜೆ ಸಹಾಯಕಿ ಅನಿತಾ ಇದ್ದರು.