open house program 
ರಾಜ್ಯ

ತೆರೆದ ಮನೆ ಕಾರ್ಯಕ್ರಮದಡಿ ಪೊಲೀಸ್​ ಠಾಣೆ ಭೇಟಿ

ತುಮಕೂರು ಡೆಸ್ಕ್
ಶಿರಾ: ತಾಲೂಕಿನ ನವ್ಯದಿಶ ಸಂಸ್ಥೆಯ ಯುವಚಾವಡಿ ಕಾರ್ಯಕ್ರಮದ ಯೂತ್​ ರಿಸೋರ್ಸ್​ ಹಬ್​ನ ಹದಿಹರೆಯದವರು ಮತ್ತು ಯುವಜನರಿಗೆ ಕಳ್ಳಂಬೆಳ್ಳ ಪೊಲೀಸ್​ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಎಸ್​ಐ ಶ್ರೀನಿವಾಸ್​ ಮಾತನಾಡಿ, ದೂರು ದಾಖಲಿಸುವ ಬಗ್ಗೆ, ಎಫ್​.ಐ.ಆರ್​.ಪೋಕ್ಸೋ ಪ್ರಕರಣ, ಪೊಲೀಸ್​ ಠಾಣೆಯ ಮಹತ್ವ, ಅದರ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು. ನವ್ಯದಿಶ ಸಂಸ್ಥೆಯ ಅಶ್ವಿನಿ ಮಾತನಡಿ, ಇಂದು ಹದಿಹರೆಯದವರ ರಕ್ಷಣೆಯಲ್ಲಿ ಪೊಲೀಸ್​ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪೋಲಿಸ್​ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದು ಅಗತ್ಯವಿದೆ. ಹಾಗೆ ಹದಿಹರೆಯದವರು ತಮ್ಮ ರಕ್ಷಣೆಗೆ ತೊಂದರೆ ಆದಾಗ ನಿರ್ಭೀತಿಯಿಂದ ಪೊಲೀಸ್​ ಇಲಾಖೆಯ ರಕ್ಷಣೆ ಪಡೆಯಬಹುದು ಎಂದು ತಿಳಿಸಿದರು.ಭೇಟಿಯಲ್ಲಿ ಯುವಜನರು ಪೊಲೀಸ್​ ಇಲಾಖೆಗೆ ಸಂಬಂಧಪಟ್ಟಂತೆ ಪರೀೆ ಹಾಗೂ ಕೆಲಸಗಳ ಕುರಿತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.