ಶ್ರೀ ಬಯಲು ಉದ್ಭವ ವ್ನಿಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆಯಲ್ಲಿ ಶಾಸಕ ಶ್ರೀನಿವಾಸ್,. ನಗರಸಭೆ ನಿಕಟಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಮಾಜಿ ಅಧ್ಯೆ ಲತಾ ಹೇಮಂತ್ ಕುಮಾರ್, ಉಪಾಧ್ಯಕ್ಷ ಆನಂದ್, ಸದಸ್ಯರಾದ ಸಿ.ಪ್ರದಿಪ್, ನರಸಿಂಹಮೂರ್ತಿ, ಅಂಜನಮೂರ್ತಿ, ಶಿವಕುಮಾರ್, ಚೇತನ್ ಇತರರಿದ್ದರು.
ನೆಲಮಂಗಲ : ನಗರದ ಐತಿಹಾಸಿಕ ಶ್ರೀ ಬಯಲು ಉದ್ಭವ ವ್ನಿಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆಗೆ ಗುರುವಾರ ಸಹಸ್ರಾರು ಜನ ಸಾಯಾದರು.
ಪ್ರತಿವರ್ಷ ಮಾರ್ಗಶಿರಮಾನ ಹುಣ್ಣಿಮೆ ದಿನದಂದು ನಡೆಯುವ ವೈವಿಧ್ಯ ಪೂರ್ಣ ಬ್ರಹ್ಮದೋತ್ಸವ ಹಾಗೂ ಕಡಲೆಕಾಯಿ ಪರಿಷೆ ಅಂಗವಾಗಿ ವ್ನಿಶ್ವರ ಸ್ವಾಮಿಗೆ ಹೋಮ, ವಿಶೇಷ ಆಭರಣ, ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 12.30ಕ್ಕೆ ಬ್ರಹ್ಮರಥೋತ್ಸವಕ್ಕೆ ಶಾಸಕ ಎನ್.ಶ್ರೀನಿವಾಸ್ ಹಾಗೂ ನಗರಸಭೆ ಅಧ್ಯಕ್ಷ ಎನ್.ಗಣೇಶ್ ಚಾಲನೆ ನೀಡಿದರು. ಅಲಂಕೃತ ತೇರಿಗೆ ಭಕ್ತರು ಕಡಲೆಕಾಯಿ ತೂರಿ ಸಂಭ್ರಮಿಸಿದರು.
ಜಾತ್ರೆಗೆ ತಾಲೂಕು ಸೇರಿ ನೆರೆಯ ಜಿಲ್ಲೆಗಳಿಂದಲೂ ಸಾವಿರಾರು ಜನರು ಆಗಮಿಸಿದ್ದರು. ಬೆಳಗ್ಗೆ 7 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಹಸ್ರಾರು ಭಕ್ತರು ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಅರವಟಿಕೆ: ಜಾತ್ರೆ ಪ್ರಯುಕ್ತ 20ಕ್ಕೂ ಹೆಚ್ಚು ಸಮುದಾಯಗಳಿಂದ ಅರವಟಿಕೆ ಹಾಕಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು. ದೇವಾಲಯ ಟ್ರಸ್ಟ್ ನಿಂದಲೂ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ನೆ.ಯೋ.ಪ್ರಾಧಿಕಾರ ಅದ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತಕುಮಾರ್, ಮುಖಂಡ ದೀಪಕ್ ಕಿರಣ್, ಚಿಕ್ಕಣ್ಣ, ಸಿ.ಎಂ.ಗೌಡ, ದೇವಾಲಯ ಟ್ರಸ್ಟ್ ಅದ್ಯಕ್ಷ ಎನ್.ಪಿ.ರುನಾಥ್, ಪದಾಧಿಕಾರಿಗಳಾದ ಜಯಣ್ಣ ಸುರೇಶ್, ಉಮೇಶ್ ಗೌಡ, ವೆಂಕಟೇಶ್, ಜಿ.ಮಾರಯ್ಯ, ಕೇಶವ್, ಎಂ.ಎನ್.ಹರೀಶ್ ಕುಮಾರ್, ಶಿವಶಂಕರ್, ಲೋಕೇಶ್, ಚೇತನ್, ವೈ. ಎನ್.ಚೇತನ್, ಶೇಖರ್ ಇದ್ದರು.
ಸಿಸಿ ಕ್ಯಾಮರಾ ಕಣ್ಣಾವಲು : ಅಹಿತಕರ ಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಿದ್ದ ದೇವಾಲಯ ಸಮಿತಿ ಅಡುಗೆ ಸ್ಥಳ, ಅರವಟಿಕೆ ಬಳಿ ಸಿಸಿ ಕ್ಯಾಮರಾ ಅಳವಡಿಸಿತ್ತು. ಜತೆಗೆ ನೆಲಮಂಗಲ ಉಪವಿಭಾಗದ ವೃತ್ತ ವ್ಯಾಪ್ತಿಯ ಸೇರಿ ವಿವಿಧ ಪೊಲೀಸ್ ಠಾಣೆಯಿಂದ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ 200ಕ್ಕೂ ಪೊಲೀಸರನ್ನು ಬಂದೋಬಸ್ತ್ ಮಾಡಲಾಗಿತ್ತು.
ದೇವಾಲಯ, ಪರಿಷೆ ಹಿನ್ನೆಲೆ : ಕಾಡಿನಂತಿದ್ದ ಈಗಿನ ಗಣೇಶನಗುಡಿಯ ಜಾಗದಲ್ಲಿ 250 ವರ್ಷಗಳ ಹಿಂದೆಯೇ ಕಲ್ಲುಬಂಡೆಯಲ್ಲಿ ಉದ್ಭಸಿದ್ದ ವ್ನಿಶ್ವರ ದನ ಕಾಯುತ್ತಿದ್ದ ಯುವಕನಿಂದ ಬೆಳಕಿಗೆ ಬಂದಿದ್ದಾನೆ. ಆ ನಂತರದ ದಿನಗಳಲ್ಲಿ ಸಿದ್ಧರಾಮಶೆಟ್ರು ಮತ್ತು ಮಲ್ಲಪ್ಪಶೆಟ್ರು ಅವರಿಂದ ಶ್ರೀವ್ನಿಶ್ವರನಿದ್ದ ಗುಹೆ ಸಣ್ಣ ಮಂಟಪವಾಗಿ ಬದಲಾಯಿತು. ಅಂದಿನಿಂದ ಸುತ್ತಮುತ್ತಲಿನ ಹಳ್ಳಿಗಳ ರೈತರು ಭಾರಿ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಕಡಲೆಕಾಯಿ ಮತ್ತು ಕಬ್ಬನ್ನು ಪ್ರತಿ ವರ್ಷವೂ ಸ್ವಾಮಿಗೆ ಅರ್ಪಿಸಿ ಮೂಟೆಗಟ್ಟಲೆ ಕಡಲೆಕಾಯಿಯನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದರಿಂದ ಕಡಲೆಕಾಯಿ ಪರಿಷೆ ಹೆಸರು ಬರಲು ಕಾರಣವಾಗಿದೆ.
ಭರ್ಜರಿ ವ್ಯಾಪಾರ : ಕಡಲೆಕಾಯಿ ಪರಿಷೆಯಲ್ಲಿ ನಾನಾ ಬಗೆಯ ಅಂಗಡಿ ಮುಂಗಟ್ಟುಗಳು, ಮಕ್ಕಳ ಮನರಂಜನೆ ವಸ್ತುಗಳು ಸೇರಿ ವಿವಿಧ ಆಟಿಕೆಗಳ ವ್ಯಾಪಾರ ಪರಿಷೆ ನಡೆಯುತ್ತಿದ್ದು. ಸೊಂಡೆಕೊಪ್ಪ ಬೈಪಾಸ್ನಿಂದ ಗಣೇಶನ ಗುಡಿಯವರೆಗೂ 2 ಕಿ.ಮೀ. ದೂರ ರಸ್ತೆ ಬದಿಯಲ್ಲಿ ಅಂಗಡಿ ನಿರ್ಮಾಣ ಮಾಡಿಕೊಂಡು ಭರ್ಜರಿ ವ್ಯಾಪಾರ ನಡೆಸಿದರು.
ರಾಭಿಷೇಕ, ಹೂವಿನ ಪಲ್ಲಕ್ಕಿ : ಸೋಮವಾರ ಬೆಳಗ್ಗೆ 9 ಗಂಟೆಗೆ ವ್ನಿಶ್ವರ ಸ್ವಾಮಿಗೆ ರಾಭಿಷೇಕ, ಸಂಜೆ ನಗರದ ಹೂವಾಡಿಗರ ಸಂದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶ್ವೇಶ್ವರ ಸ್ವಾಮಿಯನ್ನು ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.