ಡಾ.ಮಹೇಶ ಬಿರಾದಾರ  
ರಾಜ್ಯ

ಮೂರು ವರ್ಷದಲ್ಲಿ ಕೇವಲ ೨೬೨೮ ಗರ್ಭಪಾತ

ಪ್ರಮುಖ ಮುಖ್ಯಾಂಶಗಳು

  • ಯಾದಗಿರಿ ಡಿಎಚ್‌ಒ ಡಾ.ಮಹೇಶ ಬಿರಾದಾರ ಮಾಹಿತಿ
  • ಗರ್ಭಿಣಿಯರು ನಾಪತ್ತೆ ಸುಳ್ಳು
ಯಾದಗಿರಿ : ೨೦೨೩ರಿಂದ ೨೦೨೬ವರೆಗೆ ಜಿ¯್ಲÉಯಲ್ಲಿ ಕೇವಲ ೨೬೨೮ ಗರ್ಭಪಾತ ಪ್ರಕರಣ ಬೆಳಕಿಗೆ ಬಂದಿವೆ. ಹೊರತಾಗಿ ಹೆಚ್ಚಿನ ಕೇಸ್ ಬಗ್ಗೆ ಯಾವುದೇ ವರದಿ ಅಥವಾ ದಾಖಲೆಗಳಿಲ್ಲ ಎಂದು ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಇಲಾಖೆ ಅಽಕಾರಿ ಡಾ.ಮಹೇಶ ಬಿರಾದಾರ ಸ್ಪಷ್ಟಪಡಿಸಿz್ದÁರೆ.
ರಾಜ್ಯ ಮಟ್ಟದ ಸಮಿತಿಯಿಂದ ಮೂವರು ಅಽಕಾರಿಗಳು ಜಿ¯್ಲÉಗೆ ಭೇಟಿ ನೀಡಿ ತನಿಖೆ ಮಾಡಿದಾಗ ಕೇವಲ ೩೬ ಮಹಿಳೆಯರ ಬಗ್ಗೆ ಸಂಶಯ ಮೂಡಿಸಿದೆ. ಇವರಲ್ಲಿ ಆರು ಜನ ವೈದ್ಯಕೀಯ ಕಾರಣಗಳಿಂದ ಗರ್ಭಪಾತ ಮಾಡಿಸಿಕೊಂಡರೆ, ೨೬ ಹೆಣ್ಮಕ್ಕಳು ೧೦ ವಾರದ ಒಳಗೆ ಗರ್ಭಪಾತ ಮಾಡಿಸಿಕೊಂಡಿರುವ ಮಾಹಿತಿ ಇದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗರ್ಭಪಾತ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸಮಿತಿಯಿಂದ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ವರದಿ ಸಲ್ಲಿಸಲಾಗಿದೆ. ರಾಜ್ಯ ಮಟ್ಟಕ್ಕೆ ಹೋಲಿಸಿದರೆ ಜಿ¯್ಲÉಯಲ್ಲಿ ಗರ್ಭಪಾತ ಕೇಸ್ ಕಡಿಮೆ. ಜಿ¯್ಲÉಯಲ್ಲಿ ಮೂರು ವರ್ಷಗಳಲ್ಲಿ ನೋಂದಣಿಯಾಗಿದ್ದ ೮೧೫೮೦ ಗರ್ಭಿಣಿಯರಲ್ಲಿ ೭೭೮೪೬ ಹೆರಿಗೆಗಳಾಗಿವೆ. ೬೭೨ ಶಿಶುಮರಣ ಮತ್ತು ೪೩೪ ನಿರ್ಜೀವ ಮರಣ ಸಂಭವಿಸಿವೆ ಎಂದು ಹೇಳಿದರು.
ಜಿ¯್ಲÁ ಆರೋಗ್ಯ ಇಲಾಖೆ ವರದಿ ಪ್ರಕಾರ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಸಂಶಯವೇ ಬೇಡ. ಆದರೆ ಕೆಲ ಗರ್ಭಿಣಿಯರು ಹೆರಿಗೆಗಾಗಿ ನೆರೆ ಜಿ¯್ಲÉ ಅಥವಾ ರಾಜ್ಯಕ್ಕೆ ಹೋಗಿರುತ್ತಾರೆ. ಗರ್ಭಪಾತ ಹೆಚ್ಚಳಕ್ಕೆ ಹಲವು ವೈದ್ಯಕೀಯ ಕಾರಣಗಳಿವೆ. ಬೇಕೆಂತಲೇ ಗರ್ಭಪಾತ ಸಾಧ್ಯತೆ ಕಡಿಮೆ. ಸಾವಿರಾರು ಸಂಖ್ಯೆಯಲ್ಲಿ ಗರ್ಭಣಿಯರು ನಾಪತ್ತೆಯಾದ ಬಗ್ಗೆ ನಮಗಾಗಲಿ ಮತ್ತು ಇಲಾಖೆ ರಾಜ್ಯ ಆಯುಕ್ತರ ಬಳಿ ಯಾವುದೇ ವರದಿ ಬಂದಿಲ್ಲ ಎಂದು ತಿಳಿಸಿದರು.