ಶಿಕ್ಷಕರಿಗೆ ‘ಕರ್ತವ್ಯ’ ಆನ್‌ಲೈನ್ ಹಾಜರಾತಿ
- ಡಿಜಿಟಲ್ ಆಡಳಿತ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ದಕ್ಷತೆಯ ಉದ್ದೇಶಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸಿರುವ ‘ಕರ್ತವ್ಯ ಮೊಬೈಲ್ ಆೃಪ್’
- ಮೊಬೈಲ್ ಆೃಪ್’ ಮೂಲಕವೇ ಹಾಜರಾತಿಯನ್ನು ಇಂದಿನಿಂದಲೇ ದಾಖಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ತನ್ನ ಸಿಬ್ಬಂದಿಗೆ ಆದೇಶ
- ಸಿಬ್ಬಂದಿಯ ಹಾಜರಾತಿ ದತ್ತಾಂಶದ ಏಕರೂಪತೆ, ಪಾರದರ್ಶಕತೆ ಖಾತ್ರಿಪಡಿಸುವುದಕ್ಕಾಗಿ ಕರ್ತವ್ಯ ಮೊಬೈಲ್ ಆೃಪ್ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿ
ಬೆಂಗಳೂರು: ಡಿಜಿಟಲ್ ಆಡಳಿತ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ದಕ್ಷತೆಯ ಉದ್ದೇಶಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸಿರುವ ‘ಕರ್ತವ್ಯ ಮೊಬೈಲ್ ಆೃಪ್’ ಮೂಲಕವೇ ಹಾಜರಾತಿಯನ್ನು ಇಂದಿನಿಂದಲೇ ದಾಖಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ತನ್ನ ಸಿಬ್ಬಂದಿಗೆ ಆದೇಶ ಹೊರಡಿಸಿದೆ.
ಕಾಯಂ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಜರಾತಿಯನ್ನು ತಮ್ಮ ಕರ್ತವ್ಯದ ಸ್ಥಳದಲ್ಲಿ ಪ್ರತಿದಿನ ಹಾಜರಾಗಲಿದ್ದಾರೆಯೇ?, ತರಬೇತಿ ಕಾರ್ಯಕ್ರಮದ ಅವಧಿಯಲ್ಲಿ ತರಬೇತಿ ಕೇಂದ್ರ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗುರುತಿಸಲು, ಸಿಬ್ಬಂದಿಯ ಹಾಜರಾತಿ ದತ್ತಾಂಶದ ಏಕರೂಪತೆ, ಪಾರದರ್ಶಕತೆ ಮತ್ತು ಪರಿಶೀಲತೆಯನ್ನು ಖಾತ್ರಿಪಡಿಸುವುದಕ್ಕಾಗಿ ಕರ್ತವ್ಯ ಮೊಬೈಲ್ ಆೃಪ್ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಸಬೇಕಾದ ಷರತ್ತುಗಳು
- ಎಲ್ಲ ಕಾಯಂ ಬೋಧಕ/ಬೋಧಕೇತರ ಸಿಬ್ಬಂದಿ ಮತ್ತು ಅಧಿಕಾರಿಗಳ ಹಾಜರಾತಿ ದಾಖಲಿಸುವ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಜಾರಿಗೊಳಸಬೇಕು.
- ಇ-ಆಡಳಿತ, ಕ್ಯಾಮ್ಸ್ (ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ) ತಂಡವನ್ನು ತಕ್ಷಣವೇ ಸಂಪರ್ಕಿಸಿ ಕರ್ತವ್ಯ ಹಾಜರಾತಿಯನ್ನು ಎಚ್‌ಆರ್‌ಎಂಎಸ್ ತಂತ್ರಾಂಶದೊಂದಿಗೆ ಸಂಯೋಜಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ
- ಸಿಬ್ಬಂದಿಯು ತಮ್ಮ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಪ್ರತಿ ದಿನ ಎರಡು ಬಾರಿ (ಇನ್ ಟೈಮ್, ಔಟ್ ಟೈಮ್) ಹಾಜರಾತಿಯನ್ನು ದಾಖಲಿಸಬೇಕು
ಮೊಬೈಲ್ ಆೃಪ್ ವೈಶಿಷ್ಟ್ಯತೆ
- ಮೊಬೈಲ್ ಆೃಪ್ ಕೃತಕ ಬುದ್ಧಿಮತ್ತೆ (ಎಐ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಹಾಗೂ ಮುಖಚಹರೆ ಗುರುತಿಸುವ ಅಪ್ಲಿಕೇಷನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಲ್ಲ ಇಲಾಖೆಗಳಲ್ಲಿ ಕರ್ತವ್ಯ ಆೃಪ್ ಅನ್ನು ಜಾರಿಗೊಳಿಸಲಾಗುತ್ತಿದೆ.
- ಸರ್ಕಾರಿ ನೌಕರರು ಮೊವೈಲ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಎಚ್‌ಆರ್‌ಎಂಎಸ್ ನೋಂದಾಯಿತ ಪ್ರಥಮ ಕೆಜಿಐಡಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಂಡು ಕರ್ತವ್ಯದ ಸ್ಥಳದಲ್ಲಿ ಹಾಜರಾತಿ ದಾಖಲಿಸಬೇಕು