ಬಂಗಾರಪೇಟೆ meeting ನಗರಸಭೆ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅಧಿಕಾರಿಗಳ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ತಹಸೀಲ್ದಾರ್ ಸುಜಾತಾ, ಗಾಯತ್ರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಇದ್ದರು.
- ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ
ಬಂಗಾರಪೇಟೆ: ಬಂಗಾರಪೇಟೆ ಕ್ಷೇತ್ರದಲ್ಲಿ ಸುಮಾರು 12 ಸಾವಿರ ಮಂದಿ meeting ನಿವೇಶನ ಬೇಕೆಂದು ಅರ್ಜಿ ಸಲ್ಲಿಸಿದ್ದು, ಎಲ್ಲೆಲ್ಲಿ ಗೋಮಾಳ ಜಮೀನು ಲಭ್ಯವಿದೆ ಎಂದು ಪತ್ತೆ ಮಾಡಿ, ಮೂರು ತಿಂಗಳ ಒಳಗೆ ನಿವೇಶನ ಮಂಜೂರು ಮಾಡಲು ತಾಲೂಕು ಆಡಳಿತ ಕಾರ್ಯಪ್ರವೃತ್ತವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ನಗರಸಭೆ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅಧಿಕಾರಿಗಳ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲಿ ಗೋಮಾಳ ಜಮೀನುಗಳು ಲಭ್ಯವಿದೆ ಎಂದು ಪತ್ತೆ ಮಾಡಿ ಮೂರು ತಿಂಗಳ ಒಳಗಾಗಿ ನಿವೇಶನ ರಹಿತರಿಗೆ ಒಂದು ಸಾವಿರ ನಿವೇಶನ ನೀಡಲು ತೀಮಾರ್ನಿಸಲಾಗಿದೆ ಎಂದು ತಿಳಿಸಿದರು.
ಬೇಸಿಗೆ ಸಮೀಪಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲೆಲ್ಲಿ ಕೊಳವೆ ಬಾವಿ ಕೊರೆಯಿಸುವ ಅಗತ್ಯವಿದೆ ಎಂದು ಪಟ್ಟಿ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ತೀಮಾರ್ನಿಸಲಾಯಿತು ಎಂದರು.
ಅರಣ್ಯ ಇಲಾಖೆ ಅನಗತ್ಯವಾಗಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಕಳೆದ 50&-60 ವರ್ಷಗಳ ಹಿಂದೆ ಮಂಜೂರಾಗಿರುವ ಜಮೀನಿನಲ್ಲಿ ನಮಗೆ ನೋಟಿಫಿಕೇಷನ್ ಆಗಿದೆ ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅರಣ್ಯ ಸ್ವರೂಪ ಕಳೆದುಕೊಂಡಿರುವ ಜಮೀನುಗಳ ಬಗ್ಗೆ ಮಾಹಿತಿ ನೀಡಲು ತೀಮಾರ್ನಿಸಲಾಗಿದೆ. ದುರಸ್ತಿ ಮಾಡಲು ಪಹಣಿಯಲ್ಲಿ ತಾಳೆಯಾದಲ್ಲಿ ಪರಿಗಣಿಸಿ ದುರಸ್ತಿ ಮಾಡಿಕೊಡಲಾಗುವುದು. ಸರಿ ಹೊಂದದೆ ಇದ್ದಲ್ಲಿ ತಿರಸ್ಕರಿಸಲಾಗುವುದು. ಕೆಲ ಪಟ್ಟ ಭಧ್ರಹಿತಾಸಕ್ತಿಗಳು 300 ಎಕರೆ ಜಮೀನಿದ್ದಲ್ಲಿ 500 ಎಕರೆ ತೋರಿಸುತ್ತಿದೆ, ಆದ್ದರಿಂದ ಇದು ತಳಬದಿಗೆ ಬರುತ್ತದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯನ್ನು ಚುರುಕುಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ ಅದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದರು.