ಗುಂಡ್ಲುಪೇಟೆ ಪಟ್ಟಣದಲ್ಲಿ ಓಣಂ ಅಂಗವಾಗಿ ಕೇರಳ ಮೂಲದ ಕುಟುಂಬದ ಮಹಿಳೆಯರು ಪುಷ್ಪರಂಗೋಲಿ ಬಿಡಿಸುತ್ತಿರುವುದು. 
ರಾಜ್ಯ

ಗುಂಡ್ಲುಪೇಟೆಯಲ್ಲಿ ಓಣಂ ಸಡಗರ

ಪ್ರಮುಖ ಮುಖ್ಯಾಂಶಗಳು

  • ಕೇರಳಿಯರು
  • ಓಣಂ ಹಬ್ಬ

ಗುಂಡ್ಲುಪೇಟೆ:

ಪಟ್ಟಣ ಹಾಗೂ ತಾಲೂಕಿನಲ್ಲಿ ನೆಲೆಸಿರುವ ಕೇರಳಿಯರು ಬುಧವಾರ ಓಣಂ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.

ಕೇರಳದ ಗಡಿಯಲ್ಲಿರುವ ತಾಲೂಕಿನಲ್ಲಿ ಸಾವಿರಾರು ಮಲಯಾಳಿ ಕುಟುಂಬಗಳು ನೆಲೆಸಿದ್ದು, ಮನೆಯಲ್ಲಿ ಓಣಂ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಮುಂಜಾನೆ ಶುಭ್ರ ವಸ್ತ್ರ ಧರಿಸಿದ ಮಹಿಳೆಯರು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಸಲುವಾಗಿ ತಮ್ಮ ಮನೆಗಳಲ್ಲಿ ನಾನಾ ವರ್ಣದ ಹೂವುಗಳಿಂದ ಪುಷ್ಪ ರಂಗೋಲಿ ಬಿಡಿಸಿದರು. ನಂತರ ಪುಷ್ಪದಿಂದ ಅಲಂಕರಿಸಿದ ದೀಪ ಹಚ್ಚಿದರು. ಶ್ವೇತವಸ್ತ್ರಧಾರಿಗಳಾದ ಪುರುಷರು ಹಾಗೂ ಕುಟುಂಬದವರು ನೆಂಟರನ್ನು ಮನೆಗೆ ಕರೆದು ಹಬ್ಬ ಆಚರಿಸಿದರು.