ಬೈಲಹೊಂಗಲದಲ್ಲಿ ತಾಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶಾಸಕ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಎಚ್​.ಎನ್​.ಶಿರಹಟ್ಟಿ, ಎ.ಎನ್​.ಪ್ಯಾಟಿ ಇತರರಿದ್ದರು. 
ರಾಜ್ಯ

6ರಂದು ನೇಗಿನಹಾಳದಲ್ಲಿ ಅಕ್ಷರ ಜಾತ್ರೆ

ಬೈಲಹೊಂಗಲ: ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಭಾಷೆಗೆ ಅವಿಸ್ಮರಣೀಯ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಸದುದ್ದೇಶದಿಂದ ನೇಗಿನಹಾಳದಲ್ಲಿ ಜ.6ರಂದು 8ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಸಂತಸವಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯೆ ರೋಹಿಣಿ ಪಾಟೀಲ ಮಾತನಾಡಿ, ನೇಗಿನಹಾಳದಲ್ಲಿ ನಡೆಯಲಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ್ಞಾನಪೀಠ ಪ್ರಶಸ್ತಿ ಪುರಸತ ಡಾ.ಚಂದ್ರಶೇಖರ ಕಮ್ಮಾರ ಉದ್ಘಾಟಿಸುವರು. ಸರ್ವಾಧ್ಯಕ್ಷ ಪ್ರೊ.ಕೆ.ಎಸ್​.ಕೌಜಲಗಿ ಹಾಗೂ ವಿವಿಧ ಸಾಹಿತಿ, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ತಹಸೀಲ್ದಾರ್​ ಎಚ್​.ಎನ್​.ಶಿರಹಟ್ಟಿ, ತಾಪಂ ಇಒ ಸಂಜೀವ ಜೂನ್ನೂರ, ಬಿಇಒ ಎ.ಎನ್​.ಪ್ಯಾಟಿ, ನಗರಸಭೆ ಪೌರಾಯುಕ್ತ ವೀರೇಶ ಹಸಬಿ ಇತರರಿದ್ದರು. ಕಸಾಪ ತಾಲೂಕಾಧ್ಯಕ್ಷ ಎನ್​.ಆರ್​.ಠಕ್ಕಾಯಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು.