On site mock demonstration 
ರಾಜ್ಯ

ಅ್ ಸೈಟ್ ಅಣಕು ಪ್ರದರ್ಶನ

ತುಮಕೂರು ಡೆಸ್ಕ್
ಕುಣಿಗಲ್: ತಾಲೂಕಿನ ಯಡಿಯೂರು ಹೋಬಳಿ ವ್ಯಾಪ್ತಿಯ ಚಿಕ್ಕಮಧುರೆ ಗ್ರಾಮದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ., ಎಂಎಚ್‌ಎಂಬಿ ಎಲ್ಪಿಜಿ ಪೈಪ್ ಲೈನ್ ಯಡಿಯೂರು, ಎಲ್ಪಿಜಿ ಬಾಟ್ಲಿಂಗ್ ಪ್ಲಾಂಟ್ ಯಡಿಯೂರು, ಬಿಪಿಸಿಎಲ್ ಎಲ್ಪಿಜಿ ಬಾಟ್ಲಿಂಗ್ ಪ್ಲಾಂಟ್ ಸೋಲೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆ್ ಸೈಟ್ ಅಣಕು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತುಮಕೂರು ಉಪನಿರ್ದೇಶಕ (ಕಾರ್ಖಾನೆ ಇಲಾಖೆ) ಕೆ.ಎಸ್.ಕೃಷ್ಣಪ್ಪ ಮಾತನಾಡಿ, ನಮ್ಮ ಎಚ್‌ಪಿಸಿಎಲ್ ಪೈಪ್ ಲೈನ್ ಹಾದುಹೋಗಿರುವ ಗ್ರಾಮಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅರಿವು ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. ಅದರಂತೆ ಚಿಕ್ಕಮಧುರೆಯಲ್ಲಿ ಅಣಕು ಪ್ರದರ್ಶನ ನಡೆಸಲಾಗಿದ್ದು, ಪೈಪ್‌ಲೈನ್‌ನಲ್ಲಿ ಅನಿಲ ಸೋರಿಕೆಯಾಗಿ ಅಗ್ನಿ ಅವಗಡಗಳು ಸಂಭವಿಸಿದರೆ ಸ್ಥಳೀಯರು ಅನುಸರಿಸಬೇಕಾಗುವ ಕ್ರಮಗಳ ಬಗ್ಗೆ ಅಣಕು ಪ್ರದರ್ಶನದಲ್ಲಿ ತಿಳಿಸಲಾಗಿದೆ.
ಜಮೀನಿನಲ್ಲಿ ಹಾದುಹೊಗಿರುವ ಪೈಪ್‌ಗಳ ಬಳಿ ಕಷಿ ಕೆಲಸ, ಗುಂಡಿ, ಬೋರ್ವೆಲ್ ಕೊರೆಸುವ ಸಂದರ್ಭಗಳಲ್ಲಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಿರಿ. ಹಾಸನ ವಿಭಾಗದ ಮುಖ್ಯಸ್ಥರಾದ ಪಂಕಜ್‌ಕುಮಾರ್,ಬಾಟ್ಲಿಂಗ್ ಪ್ಲಾಂಟ್ ಮುಖ್ಯಸ್ಥ ನಟರಾಜ್, ಸೋಲೂರು ಬಿಪಿಸಿಎಲ್ ಸಚಿನ್.ಆರ್.ಮನೆ ಇದ್ದರು.