ಎಐ ಚಿತ್ರ 
ರಾಜ್ಯ

ನಿತ್ಯ ಬಡವರ ಹಸಿವು ನೀಗಿಸುವ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ; 'ಅನ್ನ ಕೊಟ್ಟವರ ಮನೆ ತಣ್ಣಗಿರಲಿ' ಎಂದು ಹಾರೈಸಿದ ನೆಟ್ಟಿಗರು..Bengaluru

ಪ್ರಮುಖ ಮುಖ್ಯಾಂಶಗಳು

  • ನಿರ್ಗತಿಕರಿಗೆ ಊಟ ಹಂಚುವ ಬಸ್​ ಚಾಲಕ, ಇನ್​ಸ್ಟಾಗ್ರಾಮ್​ನಲ್ಲಿ ವೈರಲ್.
  • ಸ್ವಂತ ಖರ್ಚಿನಲ್ಲಿ ಬಿಸಿಬಿಸಿ ಚಿತ್ರಾನ್ನ ಪ್ಯಾಕೆಟ್‌ಗಳನ್ನು ನೀಡುವ ಚಾಲಕ.
  • ಲಾಕ್‌ಡೌನ್ ಸಮಯದಲ್ಲಿ ಜನರ ಕಷ್ಟ ಕಂಡು ಹೊಸ ಕಾರ್ಯ ಆರಂಭ.

ಬೆಂಗಳೂರು: ಕೋವಿಡ್ ಕಾಲದಲ್ಲಿದ್ದ ಸಂಕಷ್ಟ​​​ ಮತ್ತು ಜನರ ಸಮಸ್ಯೆಗಳನ್ನು ಕಂಡಿರುವ

ಬಿಎಂಟಿಸಿ ಬಸ್​ ಚಾಲಕರೊಬ್ಬರು

ನಿತ್ಯ ತಮ್ಮ ಸ್ವಂತ ಖರ್ಚಿನಲ್ಲಿ ಅನ್ನ ದಾಸೋಹ ಮಾಡುತ್ತಿದ್ದಾರೆ. ಅವರ ಕಾರ್ಯವು ಬೆಂಗಳೂರಿನಲ್ಲಿ ಇನ್ನೂ ಮಾನವೀಯತೆ, ಮನುಷ್ಯತ್ವ ಬದುಕಿದೆ ಎನ್ನುವುದನ್ನು ತೋರ್ಪಡಿಸುವಂತೆ ಮಾಡಿದೆ.

ಅವರ ಬಸ್​ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅನೇಕರು ಅವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಉತ್ತರಹಳ್ಳಿಯಿಂದ ಮೆಜೆಸ್ಟಿಕ್‌ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಡಿಪೋ-33ರ ಚಾಲಕ ಕೃಷ್ಣಮೂರ್ತಿ ಎಚ್.ಒ. ಅವರು, ಬಸ್ಸಿನಲ್ಲಿ ಪ್ರಯಾಣಿಕರನ್ನು ಮಾತ್ರವಲ್ಲದೆ, ದಾರಿಯುದ್ದಕ್ಕೂ ಹಸಿವಿನಿಂದ ಬಳಲುವ ನಿರ್ಗತಿಕರನ್ನು ಹುಡುಕಿ ಬಿಸಿಬಿಸಿ ಉಪಹಾರ ನೀಡುತ್ತಿದ್ದಾರೆ.

ನಿತ್ಯ ಬಿಸಿ ಆಹಾರ ವಿತರಣೆ

ಬೆಳಗ್ಗೆ 6.15ಕ್ಕೆ ಡಿಪೋದಿಂದ ಹೊರಡುವ ಬಸ್‌ (KA-53-F-0228), 'ಸಾಯಿ ಟಿಫಿನ್ಸ್' ಬಳಿ ನಿಂತು ಸುಮಾರು 10 ಊಟದ ಪ್ಯಾಕೇಟ್​ಗಳನ್ನು ಕೊಂಡುಕೊಳ್ಳುತ್ತಾರೆ. ಬೆಳಗ್ಗೆಯ ವಾಹನ ದಟ್ಟಣೆ ಕಡಿಮೆ ಇರುವುದರಿಂದ, ತ್ಯಾಗರಾಜನಗರ, ಎನ್‌ಆರ್‌ ಕಾಲೋನಿ ಹಾಗೂ ಚಾಮರಾಜಪೇಟೆ ಸಿಗ್ನಲ್‌ ಬಳಿ ರಸ್ತೆಬದಿ ಮಲಗಿರುವ ಜನರಿಗೆ ಆಹಾರವನ್ನು ನೀಡುತ್ತಿದ್ದಾರೆ. ಇದಕ್ಕೆ ಅವರು ತಮಗೆ ಸಿಗುವ ವೇತನದಲ್ಲೇ ವೆಚ್ಚ ಮಾಡುತ್ತಿದ್ದಾರೆ.
ತಮ್ಮ ವೀಕೆಂಡ್​ ರಜೆಯೊಂದನ್ನು ಬಿಟ್ಟು ಬೇರೆಲ್ಲ ದಿನದಲ್ಲಿಯೂ ನಿರ್ಗತಿಕರಿಗೆ ಬಿಸಿ ಬಿಸಿ ಚಿತ್ರನ್ನ, ಪಲಾವ್​ ಸೇರಿಂದತೆ ಎಲ್ಲರೀತಿಯ ಆಹಾರವನ್ನು ಪೊಟ್ಟಣದಲ್ಲಿ ಕಟ್ಟಿಸಿಕೊಂಡು ಕೊಟ್ಟು ಹೋಗುತ್ತಾರೆ. ಅವರ ಈ ಕಾರ್ಯವನ್ನು ಕಂಡ ಪ್ರಯಾಣಿಕರು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋಗಳನ್ನು ಹಂಚಿಕೊಂಡು ಚಾಲಕನನ್ನು ಹಾಡಿಹೊಗಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೇಲೆಯೇ ಈ ವಿಚಾರ ಬೆಳಕಿಗೆ ಬಂದಿದ್ದು, "ನಾನು ಪ್ರಚಾರಕ್ಕಾಗಿ ಇದನ್ನು ಮಾಡುತ್ತಿಲ್ಲ" ಎಂದು ವಿನಮ್ರತೆಯಿಂದ ನುಡಿಯುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದ ಕೃಷಿಕ ಕುಟುಂಬದಿಂದ ಬಂದಿರುವುದೇ ತಮಗೆ ಈ ಸಂಸ್ಕಾರ ನೀಡಿದೆ ಎಂದಿದ್ದಾರೆ.
ನೆಟ್ಟಿಗರು ಏನಂದ್ರು?
raghu.030ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಈ ಬಗ್ಗೆ ವ್ಯಕ್ತಿತಯೊಬ್ಬರು ಮಾತನಾಡಿರುವ ವಿಡಿಯೀವನ್ನು ಹಂಚಿಕೊಂಡಿದ್ದಾರೆ. 100 ವರ್ಷ ಸುಖವಾಗಿ ಯಿರಲಿ ಕೃಷಮೂರ್ತಿ & ಅವರ ಮನೆಯವರು , ದೇವರು ಇನ್ನು ಚನ್ನಾಗಿಟ್ಟಿರಲಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅನ್ನ ಕೊಟ್ಟವರ ಮನೆ ತಣ್ಣಗಿರಲಿ ಎಂದು ಹಾರೈಸುತ್ತಿದ್ದಾರೆ, (ಏಜೆನ್ಸೀಸ್)