ಚಿತ್ರ ೧೯ ಕೆ.ಎಲ್.ಆರ್. ೦೧ : ಇಂಚರ ಗೋವಿಂದರಾಜು ಭಾವಚಿತ್ರ  
ರಾಜ್ಯ

ರಾಜ್ಯದಲ್ಲಿ ಗುಜರಿಗೆ ಹಾಕಬೇಕಾದ ಬಸ್‌ಗಳನ್ನೇ ಇನ್ನೂ ರಸ್ತೆ ಮೇಲೆ ಚಲಾಯಿಸುತ್ತಿವೆ

ಮುನಿವೆಂಕಟೇ ಗೌಡ ಎನ್
ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದಲ್ಲಿ ಗುಜರಿಗೆ ಹಾಕಬೇಕಾದ ಬಸ್‌ಗಳನ್ನೇ ಇನ್ನೂ ರಸ್ತೆ ಮೇಲೆ ಚಲಾಯಿಸುತ್ತಿದ್ದು ಅವುಗಳಿಗೆ ಪರ್ಯಾಯವಾಗಿ ಹೊಸ ವಾಹನಗಳನ್ನು ಸಮರ್ಪಕವಾಗಿ ಸೇರ್ಪಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ವಿಧಾನಪರಿಷತ್ ಅಧಿವೇಶನದಲ್ಲಿ ಗುರುವಾರ ಸಾರಿಗೆ ಸಚಿವರ ಗಮನ ಸೇಳೆದರು.
ಸಾರಿಗೆ ನಿಗಮದ ಅಂಕಿ ಅಂಶಗಳ ಪ್ರಕಾರ ೭,೫೫೦ ಸಾಮಾನ್ಯ ಬಸ್‌ಗಳ ಪೈಕಿ ೪,೩೨೭ ಬಸ್‌ಗಳು ೯ ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚು ಸಂಚರಿಸಿವೆ. ೯೬೮ ಬಸ್‌ಗಳು ೧೪ ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಓಡಿವೆ ಎಂದು ವಿವರಿಸಿದರು.
ಗಂಭೀರ ಸಂಗತಿಯೆAದರೆ ಕಂಪನಿ ನಿಗದಿಪಡಿಸಿರುವ ಗರಿಷ್ಠ ಮಿತಿಯನ್ನು ಮೀರಿ ೩೮೦ ವೋಲ್ವೋ ಬಸ್‌ಗಳು ೧೩ ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚು ಸಂಚರಿಸಿವೆ. ಇವುಗಳಲ್ಲಿ ೧೭೪ ಬಸ್‌ಗಳು ೧೪ ಲಕ್ಷ ಕಿಲೋಮೀಟರ್‌ಗೂ ಹೆಚ್ಚು ಓಡಿದ್ದು, ಇಂತಹ ಬಸ್‌ಗಳು ಇನ್ನೂ ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ ಪ್ರಯಾಣಿಕರ ಸುರಕ್ಷತೆ ಹಾಗೂ ವಾಯುಮಾಲಿನ್ಯ ಕುರಿತ ಚಿಂತೆ ಹೆಚ್ಚುತ್ತಿದೆ ಎಂದು ಇಂಚರ ವಿವರಿಸಿದರು.
ಕಳೆದ ೭೮ ವರ್ಷಗಳಿಂದ ಅಗತ್ಯ ಪ್ರಮಾಣದಲ್ಲಿ ಹೊಸ ವಾಹನ ಸೇರ್ಪಡೆ ಮಾಡಿಲ್ಲ. ಈ ಅವಧಿಯಲ್ಲಿ ಸುಮಾರು ೩,೭೯೧ ಬಸ್‌ಗಳನ್ನು ಗುಜರಿಗೆ ಹಾಕಲಾಗಿದ್ದರೂ, ಅದಕ್ಕೆ ತಕ್ಕಂತೆ ಹೊಸ ಬಸ್‌ಗಳನ್ನು ಸೇರಿಸದಿರುವುದು ನಿಗಮದ ನಿರ್ಲಕ್ಷ್ಯ ತೋರಿಸುತ್ತದೆ ಎಂದು ಟೀಕಿಸಿದರು.
ಶಕ್ತಿ ಯೋಜನೆ ನಂತರ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಿದೆ. ಹೆಚ್ಚುವರಿ ಬಸ್‌ಗಳನ್ನು ಸೇರಿಸದೇ ಇದ್ದರೆ ಪ್ರಯಾಣಿಕರಿಗೆ ತೊಂದರೆ ಉಂಟಾಗುವುದು ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈಗಾಗಲೇ ೫,೮೦೦ ಹೊಸ ಬಸ್ ಸೇರ್ಪಡೆ ಮಾಡಿದ್ದು, ಈ ವರ್ಷ ಇನ್ನೂ ೨ ಸಾವಿರ ಬಸ್‌ಗಳು ಬರಲಿವೆ, ಅವಧಿ ಮೀರಿದ ಅನೇಕ ಬಸ್‌ಗಳನ್ನು ಗುಜರಿಗೆ ಕಳುಹಿಸಲಾಗುತ್ತಿದ್ದು, ಕೆಲವು ಬಸ್‌ಗಳನ್ನು ಸರಿಪದಿಸಿ ಬಳಸಲಾಗುತ್ತಿದೆ ಎಂದು ವಿವರಿಸಿದರು.
ಬಿಸಿಯೂಟ ಅಡುಗೆ ಮನೆಗಳ ಸುಸ್ಥಿತಿಗೆ ನಿರ್ಲಕ್ಷ:
ರಾಜ್ಯದಲ್ಲಿ ಬಿಸಿಯೂಟ ತಯಾರಿಸುವ ೮,೫೦೦ಕ್ಕೂ ಹೆಚ್ಚು ಅಡುಗೆ ಕೊಠಡಿಗಳು ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿರುವುದು ಆತಂಕಕಾರಿ. ನರೇಗಾ ಯೋಜನೆ ಅನುದಾನ ಬಳಸಿಕೊಂಡು ಅಡುಗೆ ಕೊಠಡಿಗಳ ದುರಸ್ಥಿ ಹಾಗೂ ಹೊಸದಾಗಿ ನಿರ್ಮಾಣಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬAದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಶಿಕ್ಷಣ ಇಲಾಖೆ ೨೦೨೫ರ ಜನವರಿಯಲ್ಲಿ ನರೇಗಾ ಯೋಜನೆಯಡಿ ಹೊಸ ಕೊಠಡಿ ನಿರ್ಮಿಸಲು ಎಲ್ಲಾ ಜಿ.ಪಂ. ಸಿಇಒಗಳಿಗೆ ಸೂಚನೆ ನೀಡಿತ್ತು.
ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒಪ್ಪಿಗೆ ದೊರೆತಿದ್ದರೂ ಜಿಲ್ಲಾಮಟ್ಟದ ಅಧಿಕಾರಿಗಳು ಶಾಲಾ ಅಡುಗೆ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದರು. ಸದನದಲ್ಲಿ ಸಂಬAಧಪಟ್ಟ ಸಚಿವರು ಇಲ್ಲದ ಕಾರಣ ಉತ್ತರ ದೊರೆಯಲಿಲ್ಲ.