- ಮೋದಿಗೆ ಪ್ರಿಯಾಂಕ್ ಸವಾಲು
- ಆರ್ಥಿಕ ಸ್ಥಿತಿ ಹದಗೆಡಲು ಕಾರಣರಾರು? ಖಂಡ್ರೆ- ಖರ್ಗೆ ಕಿಡಿ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಒಳ್ಳೆ ಸುದ್ದಿ ಇದ್ದರೆ ರಾತ್ರಿ ಬಂದು ಹೇಳ್ತಾರೆ. ತೈಲ ಬೆಲೆ ಹೆಚ್ಚಳವನ್ನು ರಾತ್ರೋ ರಾತ್ರಿ ಮಾಡಿದ್ದಾರೆ. ಪರೀಾ ಪೇ ಚರ್ಚೆ ಮಾಡುವ ಮೋದಿ ನೀಟ್ ಅಕ್ರಮದ ಬಗ್ಗೆ ಉತ್ತರಿಸಲ್ಲ. ವಿದೇಶಕ್ಕೆ ಹೋಗುತ್ತಾರೆ. ದೇಶದ ಆರ್ಥಿಕ ಸ್ಥಿತಿ ಭೀಕರವಾಗಲಿದೆ ಎಂದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನಿಸಿದಾಗ ಎಲ್ಲ ಸರಿಯಾಗಿದೆ ಎಂದವರು ಈಗೇಕೆ ನೆದರ್ಲ್ಯಾಂಡ್ಗೆ ಹೋಗಿ ಹೇಳುತ್ತಿದ್ದಾರೆ. ಅದನ್ನೇ ಸಂಸತ್ತಿನಲ್ಲಿ ಉತ್ತರಿಸಬೇಕಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಬಿಜೆಪಿ ನಾಯಕರು ಮೆಟ್ರೋ ಪ್ರಯಾಣ ಮಾಡುತ್ತಿದ್ದು, ಈ ಸ್ಥಿತಿಗೆ ತಂದವರು ಯಾರು ಎಂಬುದಕ್ಕೆ ಉತ್ತರ ದೊರೆಯಬೇಕಿದೆ. ಸಾಮಾನ್ಯ ಜನರಿಗೆ ಮೋದಿ ನೀತಿಯಿಂದ ಆರ್ಥಿಕ ಹೊಡೆತ ಆಗಿದೆ ಎಂಬುದನ್ನು ತಿಳಿಸಲಿ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಟ್ರೋ ಪ್ರಯಾಣ ಮಾಡಿದ್ರೆ ಪರಿಹಾರ ಆಗುತ್ತಾ ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.
ವೈಲ್ಯ ಮರೆಮಾಚಲು ಯತ್ನ: ಸಂಸತ್ತಿನಲ್ಲಿ ಎಲ್ಲ ಸಂಪನ್ಮೂಲ ಇದೆ. ನಮ್ಮಲ್ಲಿ ಪೆಟ್ರೋಲ್, ಗ್ಯಾಸ್, ಡೀಸೆಲ್ ಕೊರತೆ ಇಲ್ಲ. ಚುನಾವಣೆ ಪೂರ್ವದಲ್ಲಿ ಎಲ್ಲವನ್ನು ಸರಿಯಾಗಿ ಪೂರೈಸುತ್ತೇವೆ ಎಂದಿದ್ದವರು. ಚುನಾವಣೆ ನಂತರ ವಿಷಯಾಂತರ ಮಾಡಿದ್ದಾರೆ. ಮೋದಿ ಇದೀಗ ಎಲ್ಲ ಕಡೆ ಕೊರತೆ ಕಾಣಿಸುತ್ತಿದೆ ಆರ್ಥಿಕ ಸ್ಥಿತಿ ಹದಗೆಡಲು ಕಾರಣ ಯಾರು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಐಟಿ&ಬಿಟಿ ಸಚಿವ ಪ್ರಿಯಾಂಕ್ ರ್ಖಗೆ ಟೀಕಿಸಿದರು.
ನೀಟ್ ಪರೀಕ್ಷೆ ಅಕ್ರಮದಿಂದ 22 ಲಕ್ಷ ಮಕ್ಕಳ ಭವಿಷ್ಯ ಆಪತ್ತಿಗೆ ಸಿಲುಕಿದೆ. ಪದೇ ಪದೆ ನೀಟ್ ಅಕ್ರಮ ನಡೆಯುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಏಕೆ ಪಡೆಯುತ್ತಿಲ್ಲ. ನೀಟ್, ಪುಲ್ವಾಮಾ, ಬಾಂಬ್ ಬ್ಲಾಸ್ಟ್ ಸೇರಿ ಯಾವುದಕ್ಕೂ ಉತ್ತರವಿಲ್ಲ, ಕ್ರಮಗಳು ಇಲ್ಲ. ಶಿಕ್ಷೆ ಯಾರಿಗೆ ಆಗಿದೆ ಎಂಬುದು ತಿಳಿಸಲಿ.
— > ಈಶ್ವರ ಖಂಡ್ರೆ, ಅರಣ್ಯ ಸಚಿವ