ಪ್ರಮುಖ ಮುಖ್ಯಾಂಶಗಳು
ಪ್ರಶಾಂತರಿಪ್ಪನ್‌ಪೇಟೆ,ಬೆಂಗಳೂರು :ಸನಾತನ ಪಂಚಪೀಠಗಳಲ್ಲಿಒಂದಾದ ಉಜ್ಜಯಿನಿ ಸದ್ಧರ್ಮಸಿಂಹಾಸನ ಮಹಾಪೀಠದ ಆದಿಜಗದ್ಗುರುದಾರುಕಾಚಾರ್ಯರ ಜಯಂತಿ ಹಿನ್ನೆಲೆಯಲ್ಲಿಶ್ರೀಮರುಳಸಿದ್ದೇಶ್ವರ ಶಿಖರತೈಲಾಭಿಷೇಕ ಹಾಗೂ ಜಾತ್ರಾ ಮಹೋತ್ಸವವುಏ.21ರಿಂದ5 ದಿನಗಳಕಾಲ ನಡೆಯಲಿದೆ.
ವಿಭಿನ್ನಆಚರಣೆ, ವಿಶಿಷ್ಟಸಂಸ್ಕೃತಿ, ವಿಶೇಷಶಿಲ್ಪಕಲೆ, ವಿವಿಧಪರಂಪರೆಯನ್ನು ಹೊಂದಿರುವ ಅಪರೂಪದಕ್ಷೇತ್ರ ವಿಜಯನಗರ ಜಿಲ್ಲೆಯಕೊಟ್ಟೂರು ತಾಲೂಕಿನ ಉಜ್ಜಯಿನಿಶ್ರೀಸದ್ಧರ್ಮ ಸಿಂಹಾಸನ ಮಹಾಪೀಠ.
ಅಮರಶಿಲ್ಪಿಜಕಣಾಚಾರಿಯಿಂದ ನಿರ್ಮಾಣಗೊಂಡಿರುವಕ್ಷೇತ್ರನಾಥ ಶ್ರೀಮರುಳಸಿದ್ದೇಶ್ವರದೇವಾಲಯದ ಶಿಲ್ಪಕಲಾ ವೈಭವವುಹಂಪಿ, ಹಳೇಬೀಡು,ಬೇಲೂರನ್ನುನೆನಪಿಸುವಂತಿದೆ.ಈ ಪವಿತ್ರಕ್ಷೇತ್ರದಲ್ಲಿ ಪ್ರತಿವರ್ಷವೈಶಾಖ ಮಾಸದಲ್ಲಿ ನಡೆಯುವ ವಾರ್ಷಿಕಜಾತ್ರೆಯು ಜಗತ್ತಿನಲ್ಲೇ ಅಪರೂಪದಧಾರ್ಮಿಕ ಆಚರಣೆಯಿಂದ ಪ್ರಸಿದ್ಧವಾಗಿದೆ.ಮಧ್ಯಪ್ರದೇಶದಉಜ್ಜಯಿನಿಯಲ್ಲಿದ್ದ ಮೂಲಪೀಠದಲ್ಲಿರಾಜಾ ವಿಕ್ರಮಾದಿತ್ಯನಿಂದಆರಂಭಗೊಂಡಿದೆ ಎನ್ನಲಾದ ಶಿಖರತೈಲಾಭಿಷೇಕವು ದೇಶದ ಮತ್ತೆಲ್ಲೂಕಾಣಸಿಗದ ಅಪರೂಪದ ಸಂಪ್ರದಾಯ.
ಹಲವುಶಾಸನೋಕ್ತ ಉಲ್ಲೇಖಗಳ ಪ್ರಕಾರವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದಜರಿಮಲೆ ಪಾಳೇಗಾರರು ಶಿಖರ ತೈಲಾಭಿಷೇಕಸೇವೆ ಮಾಡಿದ ಇತಿಹಾಸವಿದೆ.ಇಂದಿಗೂ ಜರಿಮಲೆಪಾಳೇಗಾರರ ವಂಶಸ್ಥರಿಂದಲೇ ಶಿಖರತೈಲಾಭಿಷೇಕ ಆರಂಭವಾಗುತ್ತದೆ.ಪ್ರತಿ ವೈಶಾಖಮಾಸದ ಪಂಚಮಿಯಂದು ನಡೆಯುವ ಶಿಖರತೈಲಾಭಿಷೇಕವು ಶ್ರೀಜಗದ್ಗುರುಸಿದ್ಧಲಿಂಗ ರಾಜದೇಶೀಕೇಂದ್ರಶಿವಾಚಾರ್ಯ ಭಗವತ್ಪಾದರಸಾನ್ನಿಧ್ಯದಲ್ಲಿ ಈ ಬಾರಿ ಏ.22ರಂದುಸಂಜೆ 6 ಗಂಟೆಗೆನಡೆಯಲಿದೆ. ನಾಡಿನವಿವಿಧ ಮಠಾಧೀಶರು,ಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್ಸೇರಿದಂತೆ ಹಲವು ಸಚಿವರು,ಶಾಸಕರು,ವಿವಿಧ ಕ್ಷೇತ್ರದಗಣ್ಯರು ಭಾಗಿಯಾಗಲಿದ್ದಾರೆ.
ವಿಶಿಷ್ಟಕಲಾನೈಪುಣ್ಯತೆಗೆ ಸಾಕ್ಷಿಯಾಗಿರುವದೇವಾಲಯವು ದ್ವಾರಗೋಪುರ,ನಂದಿಮಂಟಪ,ಲಕ್ಷ್ಮಿಸ್ಥೂಪ,ಮಹಾಮಂಟಪ,ನವರಂಗ,ಸುಕನಾಸಿ ಮತ್ತುಗರ್ಭಗೃಹಗಳಿ ಕಂಗೊಳಿಸುತ್ತಿದೆ.ಇಲ್ಲಿನ ವಿಶೇಷಸಹಸ್ರದಳ ಕಮಲವು ಯುನೆಸ್ಕೋದಾವಿಶ್ವಪಾರಂಪರಿಕ ಪಟ್ಟಿಯಲ್ಲಿಸ್ಥಾನ ಪಡೆದಿದೆ.ಇಲ್ಲಿ ನಡೆಯುವಶಿಖರ ತೈಲಾಭಿಷೇಕವು ಬಿಸಿಲಿನಿಂದಶಿಲ್ಪಗಳನ್ನು ರಕ್ಷಿಸುವ ವೈಜ್ಞಾನಿಕಹಿನ್ನೆಲೆ ಹೊಂದಿದೆ.
ಶ್ರೀಜಗದ್ಗುರುಮರುಳಾರಾಧ್ಯರು ಅತ್ಯಂತ ಕೆಳವರ್ಗದವ್ಯಕ್ತಿಗೂ ಸಂಸ್ಕಾರವನ್ನು ನೀಡಿಸಮಾಜದಲ್ಲಿ ಸಮಾನತೆಯ ಸಂದೇಶಸಾರಿದ ಮಹಾತ್ಮರು. 9ನೇ ಶತಮಾನದಲ್ಲಿಮೂಲ ಉಜ್ಜಯಿನಿ ಪೀಠವನ್ನುಕರ್ನಾಟಕಕ್ಕೆ ಸ್ಥಳಾಂತರ ಮಾಡಿದಜಗದ್ಗುರು ಮರುಳಸಿದ್ದೇಶ್ವರರು,ಉತ್ತರದಿಂದದಕ್ಷಿಣಕ್ಕೆ ಬರುವ ಮಾರ್ಗಮಧ್ಯೆಅನೇಕ ಕಡೆ ತಪಸ್ಸು ಮಾಡಿದ್ದು,ಆ ಎಲ್ಲ ಸ್ಥಳಗಳುಇಂದು ಉಜ್ಜಯಿನಿ ಪೀಠದ ಶಾಖಾಮಠಗಳಾಗಿ ಪರಂಪರೆಯನ್ನುಮುನ್ನಡೆಸುತ್ತಿವೆ.
ಲಕ್ಷಾಂತರಕುಟುಂಬಗಳ ಕುಲದೈವವಾಗಿರುವಶ್ರೀಮರುಳಸಿದ್ದೇಶ್ವರ ಸ್ವಾಮಿಗಳುಧರ್ಮಪ್ರಚಾರಕ್ಕಾಗಿ ಲೋಕಸಂಚಾರಗೈದು ಅಂತಿಮವಾಗಿ ಸಂಜೀವಿನಿ ಸಮಾಧಿಯಾದಪವಿತ್ರ ಕ್ಷೇತ್ರ ಉಜ್ಜಯನಿ.ಮರುಳಸಿದ್ದೇಶ್ವರರರಥೋತ್ಸವಕ್ಕೆ ನಾಡಿನ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರುಆಗಮಿಸುತ್ತಾರೆ.ಏ.21ರಂದುಸಂಜೆ ಜಗದ್ಗುರುಗಳ ಸಾನ್ನಿಧ್ಯದಲ್ಲಿಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಏ.23ರಂದುಸಾಮೂಹಿಕ ಅಯ್ಯಚಾರ ದೀಕ್ಷೆ, ಏ.26ರಂದುಸರ್ವಧರ್ಮಗಳ ಸಾಮೂಹಿಕ ವಿವಾಹಮತ್ತಿತರ ಧಾರ್ಮಿಕ,ಸಾಮಾಜಿಕಕಾರ್ಯಕ್ರಮಗಳು ಪ್ರತಿದಿನನಡೆಯಲಿವೆ.
ಯುಗಯುಗಗಳಲ್ಲೂ ಅವತರಿಸಿದ ಆದಿಜಗದ್ಗುರುಪಂಚಾಚಾರ್ಯರು ಸಾಮಾಜಿಕ ಸತ್ಕ್ರಾಂತಿಗೆಮುನ್ನುಡಿ ಬರೆದ ಮಹಾತ್ಮರು.ದಾರ್ಶನಿಕವಿಚಾರಗಳನ್ನು ಪಂಚಸೂತ್ರಗಳ ಮೂಲಕಉಪದೇಶಿಸಿದ್ದು,ಜೀವಾತ್ಮನರಹಸ್ಯವನ್ನು ವೃಷ್ಟಿಸೂತ್ರದಮೂಲಕ ದದೀಚಿ ಮುನಿಗೆ ಬೋದಿಸಿದಶ್ರೀಜಗದ್ಗುರು ದಾರುಕಾಚಾರ್ಯರುಮಧ್ಯಪ್ರದೇಶದ ಉಜ್ಜಯಿನಿಯಕ್ಷಿಪ್ರಾ ನದಿ ತಟದಲ್ಲಿರುವಶ್ರೀ ಸಿದ್ದೇಶ್ವರ ಲಿಂಗದಿಂದಾವಿರ್ಭವಿಸಿದವೈಶಾಖ ಚತುರ್ದಶಿಯಂದು (ಏ.21)ದಾರುಕಾಚಾರ್ಯಜಯಂತಿಯನ್ನು ಆಚರಿಸಲಾಗುತ್ತದೆ.
ಉಜ್ಜಯಿನಿಪೀಠದ ಗುರುಪರಂಪರೆಯಲ್ಲಿ ಈ ವರೆಗೆ113 ಜಗದ್ಗುರುಗಳುಆಗಿ ಹೋಗಿದ್ದು,110ನೇಯವರಾಗಿದ್ದವಿಭೂತಿ ಪುರುಷ,ಶ್ರೀಸಿದ್ಧಲಿಂಗಜಗದ್ಗುರುಗಳು ಮಹಾನ್ ತಪಸ್ವಿಗಳು.ಬುಕ್ಕಾಂಬುದಿಸೇರಿದಂತೆ ಹಲವೆಡೆ ತಪೋನುಷ್ಠಾನಮಾಡಿದ್ದ ಪೂಜ್ಯರ ಕರ್ತೃ ಗದ್ದುಗೆಯುಉಜ್ಜಯಿನಿ ಪೀಠದ ಜಾಗೃತ ಸ್ಥಾನವಾಗಿದೆ.ಸದ್ಯದ ಶ್ರೀಸಿದ್ಧಲಿಂಗರಾಜದೇಶೀಕೇಂದ್ರ ಶಿವಾಚಾರ್ಯಭಗವತ್ಪಾದರು 114ನೇಜಗದ್ಗುರುಗಳಾಗಿದ್ದು,ಕಳೆದ 14ವರ್ಷಗಳಿಂದ ಶ್ರೀಪೀಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಪಡಿಸಿದ್ದಾರೆ.