ಬಂಗಾರಪೇಟೆ ತಾಲೂಕು Kolara ಬೆಂಗನೂರು ಗ್ರಾಮದಲ್ಲಿ ಸ್ಮಶಾನ ಸರ್ವೇ ಮಾಡಲು ಅಧಿಕಾರಿಗಳು ಆಗಮಿಸಿ ವಾಪಸ್​ ಹೊರಟರು. ಪಿಡಿಒ ಮುನಿರಾಜು, ಗ್ರಾಮ ಲೆಕ್ಕಾಧಿಕಾರಿ ಅಂಬರೀಶ್​, ಸರ್ವೇಯರ್​ ಹರೀಶ್​ ಇದ್ದರು. 
ರಾಜ್ಯ

ಒತ್ತುವರಿ ತೆರವುಗೊಳಿಸದ ಅಧಿಕಾರಿಗಳು Kolara

ಪ್ರಮುಖ ಮುಖ್ಯಾಂಶಗಳು

  • 4ವರ್ಷದಿಂದ ಬೆಂಗನೂರು ಸ್ಮಶಾನ ಸಮಸ್ಯೆ ಇನ್ನೂ ಜೀವಂತ
ಬಂಗಾರಪೇಟೆ: ತಾಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಗನೂರಿನಲ್ಲಿ Kolara ಗುರುವಾರ ಸ್ಮಶಾನ ಒತ್ತುವರಿ ಜಾಗ ಸರ್ವೇ ಮೂಲಕ ಪತ್ತೆಹಚ್ಚಿ ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳು ದೂರುದಾರರ ವಾಗ್ವಾದದಿಂದ ವಾಪಸ್​ ತೆರಳಿದರು.
ಪಂಚಾಯಿತಿ ಸದಸ್ಯರಾದ ಗಂಗಾಧರ್​ ಮತ್ತು ಶ್ರೀನಿವಾಸ್​ ಎನ್ನುವವರು 4 ವರ್ಷದಿಂದ ಗ್ರಾಮದ ಸರ್ವೇ ನಂ.19ರಲ್ಲಿ 4.3 ಎಕರೆ ಸ್ಮಶಾನ ಜಾಗ ಒತ್ತುವರಿ ತೆರುವುಗೊಳಿಸುವಂತೆ ಮಾಡಲು ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿವರೆಗೆ ಓಡಾಡಿ ಪತ್ರ ಚಳುವಳಿ ನಡೆಸಿದ್ದರೂ ಒತ್ತುವರಿ ತೆರುವು ಕಾರ್ಯ ಸಾಧ್ಯವಾಗದೆ ನನೆಗುದಿಗೆ ಬಿದ್ದಿದೆ.
2021ರಲ್ಲಿ ಬೆಂಗನೂರು ಗ್ರಾಮದ ಸ್ಮಶಾನ ಒತ್ತುವರಿ ತೆರವಿಗೆ ಅಧಿಕಾರಿಗಳು ಸೂಚಿಸಿದ್ದರೂ, ಇದುವರೆವಿಗೂ ಸರ್ವೇ ಕಾರ್ಯಾಚರಣೆಗೆ ಕಾಲ ಕೂಡಿ ಬರದೆ ಇರುವುದು ಅಧಿಕಾರಿಗಳ ಇಚ್ಛಾಶಕ್ತಿ ತೋರಿಸುತ್ತದೆ.
ಕೆಸರನಹಳ್ಳಿ ಗ್ರಾಪಂ ಪಿಡಿಒ 2022ರ ಮಾ.8 ರಂದು ಬೆಂಗನೂರು ಗ್ರಾಮದ ಸ್ಮಶಾನ ಅಭಿವೃದ್ಧಿಪಡಿಸಲು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕರಿಗೆ ಪತ್ರ ಬರೆದಿದ್ದ ಹಿನ್ನೆಲೆ, ಸ್ಮಶಾನ ಭೂಮಿಯಲ್ಲಿ ಮೂಲ ಸೌಕರ್ಯ ಒದಗಿಸಲು ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಲು ಜಿಲ್ಲಾ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರಿಗೆ 2022ರ ಏ.28ರಂದು ಕೋರಿದ್ದರು.
2025ರ ಆ.29ರಂದು 20 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿ ನಿರ್ಮಿತಿ ಕೇಂದ್ರ ಯೋಜನೆ ತಯಾರಿಸಿ ಕೆಆರ್​ಐಡಿಎಲ್​ ಕಾರ್ಯಪಾಲಕ ಅಭಿಯಂತರರಿಗೆ ಕಳುಹಿಸಿದ್ದರು. ಆದರೆ ಸ್ಮಶಾನ ಜಾಗ ಸರ್ವೇ ಮಾಡದೆ ಇರುವುದರಿಂದ ಒತ್ತುವರಿ ತೆರವಿಗೆ ಸಮಸ್ಯೆಯಾಗಿರುವ ಕಾರಣ ಸ್ಮಶಾನ ಅಭಿವೃದ್ಧಿಯೂ ನನೆಗುದಿಗೆ ಬಿದ್ದಂತಾಗಿದೆ.
ಸರ್ವೇ ಕಾರ್ಯ ವಿಳಂಬವಾಗುತ್ತಿದ್ದ ಕಾರಣ ಗಂಗಾಧರ್​ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ದಲಿತ ರೈತ ಸೇನೆ ಅಧ್ಯಕ್ಷ ಹುಣಸಿನಹಳ್ಳಿ ವೆಂಕಟೇಶ್​ ಸ.ನಂ.112ರಲ್ಲಿ 12 ಅಡಿ ಬಂಡಿದಾರಿ ಒತ್ತುವರಿ ರಸ್ತೆ ಸರ್ವೇ ಮಾಡಿ ತೆರುವುಗೊಳಿಸಲು ಕೋರಿದ್ದರು.
ಬೆಂಗನೂರು ಗ್ರಾಮ ಸ.ನಂಬರ್​ 19ರಲ್ಲಿ ಮತ್ತು 112 ಬಂಡಿದಾರಿ ರಸ್ತೆಯನ್ನು ನ.13ರಂದು ಸರ್ವೇ ಮಾಡಿ ನಕ್ಷೆಯೊಂದಿಗೆ ವರದಿ ಸಲ್ಲಿಸಲು ಕೆಸರನಹಳ್ಳಿ ಗ್ರಾಪಂ ಪಿಡಿಒಗೆ ತಹಸೀಲ್ದಾರ್​ ಸೂಚಿಸಿದ್ದರು.
ಇಟಿಎಸ್​ ಮುಖಾಂತರ ಸರ್ವೇ ಮಾಡಲು ಸರ್ವೇ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ದೂರುದಾರ ಸೇರಿ ಹಲವರು ಸ್ಮಶಾನ ಸರ್ವೇಗೆ ಆಗಮಿಸಿದಾಗ ಒತ್ತುವರಿದಾರ ಮತ್ತು ದೂರುದಾರರ ಮಧ್ಯೆ ಮಾತಿನ ಚಕಮುಕಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ಉಂಟಾಯಿತು. ಮತ್ತೊಂದು ದಿನ ಸರ್ವೇ ಮಾಡೋಣ ಎಂದು ಪಿಡಿಒ ಹೇಳಿ ವಾಪಸ್​ ಹೊರಟು ಹೋದರು.
"

ಬೆಂಗನೂರು ಗ್ರಾಮದ ಸ್ಮಶಾನ ಭೂಮಿ ಒತ್ತುವರಿ ಜಾಗ ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ರ್ನಿಲಕ್ಷ$್ಯ ಮಾಡುತ್ತಿದ್ದಾರೆ. ಪಿಡಿಒ ಮತ್ತೊಂದು ದಿನಕ್ಕೆ ಸರ್ವೇ ಕಾರ್ಯ ಮುಂದೂಡಿದ್ದಾರೆ. ಹೀಗಾಗಿ ಭೂ ನ್ಯಾಯ ಮಂಡಳಿಗೆ ದೂರು ನೀಡಲಾಗುವುದು.- ಗಂಗಾಧರ್​, ಗ್ರಾಪಂ ಸದಸ್ಯಬೆಂಗನೂರು, ಕೆಸರನಹಳ್ಳಿ ಗ್ರಾಪಂ ಬಂಗಾರಪೇಟೆ